ಸಮಾಚಾರ

ರಜಿನಿಕಾಂತ್‌ಗೆ ನಾಯಕಿಯಾಗೋ ಚಾನ್ಸ್ ಪಡೆದ ಕನ್ನಡದ ವರಲಕ್ಷ್ಮಿ.

ಕರ್ನಾಟಕದಲ್ಲಿ ಆಕ್ರೋಶದ ಬಿಸಿ ಸೋಕಿ ಮೈ ಕೈ ಸುಟ್ಟುಕೊಂಡರೂ ರಜನೀಕಾಂತ್ ಅಭಿನಯದ ಕಾಲ ಚಿತ್ರ ಒಂದು ಮಟ್ಟಕ್ಕೆ ಗೆದ್ದುಕೊಂಡಿದೆ. ಇದರಿಂದಾಗಿ ಹಿಂದಿನ ಕಬಾಲಿ ಮೂಲಕ ಕಂಡಿದ್ದ ಹೀನಾಯ ಸೋಲನ್ನು ಮರೆತು ರಜನೀ ಒಂದಷ್ಟು ನಿರಾಳರಾಗಿದ್ದಾರೆ.. ಜೊತೆಗೆ ಅದೇ ಹುಮ್ಮಸ್ಸಿನಿಂದ ಮುಂದಿನ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅತ್ತ ಅವರ ಬಹುನಿರೀಕ್ಷಿತ ಚಿತ್ರ 2.0 ಚಿತ್ರದ ರಿಲೀಸ್ ಡೇಟ್ ಫೀಸ್ ಆಗುತ್ತಲೇ ಮತ್ತೊಂದು ಚಿತ್ರದ ಕಾರ್ಯಗಳು ಬಿರುಸಿನಿಂದ ನಡೆಯುತ್ತಿವೆ.

 

 

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಚಿತ್ರವನ್ನು ರಜನೀ ಒಪ್ಪಿಕೊಂಡಿರೋದರ ಬಗ್ಗೆ ಸುದ್ದಿಯಾಗಿತ್ತಲ್ಲಾ? ಆ ಚಿತ್ರಕ್ಕೆ ಇದೀಗ ನಾಯಕಿ ಆಯ್ಕೆಯಾಗಿದ್ದಾಳೆ. ‘ನಾನು ಮತ್ತು ವರಲಕ್ಷ್ಮೀ’ ಚಿತ್ರದ ಮೂಲಕ ಕನ್ನಡಕ್ಕೂ ಕಾಲಿಟ್ಟಿದ್ದ ಮಲಯಾಳಂ ನಟಿ ಮಾಳವಿಕಾ ರಜಿನಿಗೆ ನಾಯಕಿಯಾಗಲಿದ್ದಾರೆ. ಖ್ಯಾತ ಛಾಯಾಗ್ರಾಹಕ ಕೆ.ಯು. ಮೋಹನ್ ಅವರ ಪುತ್ರಿಯಾಗಿರುವ ಮಾಳವಿಕಾ ಇದುವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ರಜಿನಿ ಚಿತ್ರದಲ್ಲಿ ನಿರ್ವಹಿಸಲಿದ್ದಾರಂತೆ. ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರು ಇರಲಿದ್ದು ಮತ್ತೊಂದು ಪಾತ್ರವನ್ನು ಖ್ಯಾತ ನಟಿ ತ್ರಿಷಾ ಕಣ್ಣನ್ ಮಾಡಲಿದ್ದಾಳೆ. ಚಿತ್ರೀಕರಣವೀಗ ತಮಿಳುನಾಡಿನಲ್ಲೇ ನಡೆಯುತ್ತಿದೆ. ಸಾಮಾನ್ಯವಾಗಿ ಒಂದು ಚಿತ್ರ ಸಂಪೂರ್ಣವಾಗಿ ಮುಗಿದ ನಂತರವೇ ಮತ್ತೊಂದು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವ ರಜನಿ ಕಾಲ ಚಿತ್ರ ಮುಗಿಸಿಕೊಂಡ ತಕ್ಷಣವೇ ಕಾರ್ತಿಕ್ ನಿರ್ದೇಶನದ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಅಂದಹಾಗೆ ಸನ್ ಪಿಚ್ಚರ್ಸ್ ನಿರ್ಮಾಣ ಮಾಡಲಿರುವ ಈ ಚಿತ್ರದಲ್ಲಿ ನವಾಜುದ್ಧಿನ್ ಸಿದ್ದಿಕಿ, ವಿಜಯ್ ಸೇತುಪತಿ, ಸಿಮ್ರನ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿರಲಿದ್ದು ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಮಧ್ಯಭಾಗದಲ್ಲಿ ಚಿತ್ರ ತೆರೆಕಾಣಲಿದೆ. ಇನ್ನೂ ಹೆಸರಿಡದ ಈ ಚಿತ್ರ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top