ಸಮಾಚಾರ

ವಿಷ್ಣುದಾದ ಚಿತ್ರದ ಹೆಸರಿನಲ್ಲೇ ಬರ್ತಿದೆ ಮತ್ತೊಂದು ಸಿನಿಮಾ.

ಸ್ಯಾಂಡಲ್ವುಡ್ ಖ್ಯಾತ ನಾಯಕರು ಅಭಿನಯ ಮಾಡಿದ್ದ ಸೂಪರ್ ಹಿಟ್ ಆಗಿದ್ದ ಸಿನೆಮಾಗಳ ಟೈಟಲ್ ಗಳನ್ನೇ ಬಳಸಿಕೊಂಡು ಸಿನಿಮಾ ಮಾಡುವುದು ಸದ್ಯದ ಹೊಸ ಟ್ರೆಂಡ್ ಆಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಅಂದಹಾಗೆ ಈಗ ಸಾಹಸಸಿಂಹ ಡಾ. ವಿಷುವರ್ಧನ್ ಅವರು ಅಭಿನಯ ಮಾಡಿದ ಹಳೆಯ ಸಿನಿಮಾ ಟೈಟಲ್ ಈಗ ಮತ್ತೆ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಕಂಪ್ಲೀಟ್ ಡೀಟೇಲ್ಸ್ ಗಾಗಿ ಮುಂದೆ ಓದಿ.

ಸಾಹಸಸಿಂಹ ಡಾ. ವಿಷುವರ್ಧನ್ ಅವರು ಅಭಿನಯ ಮಾಡಿದ್ದ ಕೆಲವು ಸಿನೆಮಾಗಳ ಟೈಟಲ್ ಆಗಾಗಲೇ ಬಳಕೆ ಮಾಡಿಕೊಂಡಿರುವ ಬಗ್ಗೆ ನಿಮಗೆಲ್ಲ ಗೊತ್ತಿರುವ ವಿಚಾರ ಈಗ ನಿಷ್ಕರ್ಷ ಸಿನಿಮಾ ಟೈಟಲ್ ಬಳಸಿ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.

 

 

ಬರೋಬ್ಬರಿ 25 ವರ್ಷದ ಹಿಂದೆ ಡಾ. ವಿಷ್ಣುವರ್ಧನ್ ನಟಿಸಿದ್ದ ‘ನಿಷ್ಕರ್ಷ’ ಸಿನಿಮಾ ರಿಲೀಸ್ ಆಗಿ ಕಂಡು ಯಶಸ್ವಿಯಾಗಿತ್ತು. ಈಗ ನಿರ್ದೇಶಕ ಸಿ.ಎಂ. ವಿಜಯ್ ಅದೇ ಶೀರ್ಷಿಕೆ ಇಟ್ಟುಕೊಂಡು ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ. ಹಿಮಾದ್ರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನೆಮಾವನ್ನು ಸಿ.ಎಂ. ವಿಜಯ್ ಎನ್ನುವವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಇಂದು ಆಗಸ್ಟ್ 20 ರಂದು ಸಿನಿಮಾ ಶುರುವಾಗಲಿದೆ ಕಾರ್ಯಕ್ರಮಕ್ಕೆ ಪುನೀತ್ ರಾಜಕುಮಾರ್ ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ತರಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸಿನಿಮಾದಲ್ಲಿ ಅನಿಕೇತನ್ ನಾಯಕ ನಟನಾಗಿ ಅಭಿನಯ ಮಾಡುತ್ತಿದ್ದಾರೆ, ‘ಹುಲಿರಾಯ’ ಸಿನಿಮಾದಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದ ನಟಿ ದಿವ್ಯ ಉರುಡುಗ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ. ಇವರೊಂದಿಗೆ ಅನಂತ್ ನಾಗ್, ಸಾಯಿಕುಮಾರ್, ಕಿಶೋರ್, ಚಿಕ್ಕಣ್ಣ, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ/

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top