ಸಮಾಚಾರ

ಕಾದಿದೆ ವಾಟ್ಸಾಪ್ ಬಳಕೆದಾರರಿಗೆ ಒಂದು ಶಾಕಿಂಗ್ ನ್ಯೂಸ್.

ವಾಟ್ಸ್ ಆಪ್ ಅದೆಷ್ಟು ಪ್ರಸಿದ್ಧಿಯಾಗಿದೆ ಅಂದರೆ ಸ್ಮಾರ್ಟ್ ಫೋನ್ ಕೈಯಲ್ಲಿ ಇರುವವರಿಗೆ ಒಂದು ಕ್ಷಣವೂ ವಾಟ್ಸ್ ಆಪ್ ನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ವಾಟ್ಸ್ ಆಪ್ ಗೆ ಜನ ಅಂಟಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಹಲವು ಇತರೆ ಆಪ್ ಗಳು ಈಗ ಜನರ ಮನಸ್ಸಿನ್ನಿಂದ ಶಾಶ್ವತವಾಗಿ ದೂರಸರಿದು ಬಿಟ್ಟಿದೆ. ಮೆಸೇಜ್, ಫೋಟೊ, ವಿಡಿಯೋ ಎಲ್ಲವನ್ನು ವಾಟ್ಸಾಪ್‌ನಲ್ಲಿ ನಾವೆಲ್ಲ ಕಳುಹಿಸುತ್ತಿದ್ದೇವೆ.

 

ಜನರ ಪತಿಕ್ಷಣದ ನಾಡಿಮಿಡಿತದಂಡಿರುವ ವಾಟ್ಸಪ್ ಪ್ರತಿದಿನ ನೂರಾರು ಕೋಟಿ ಜನರ ಸೇವೆ ಸಲ್ಲಿಸುತ್ತದೆ. ಸದಾ ಒಂದಿಲ್ಲ ಒಂದು ಹೊಸ ವೈಶಿಷ್ಟ್ಯಗಳನ್ನೂ ಪರಿಚಯ ಮಾಡುವ ವಾಟ್ಸಪ್ಪ್ ಈಗ ಒಂದು  ಶಾಕಿಂಗ್ ನೀಡುತ್ತಿದೆ, ಮುಂದೆ ಓದಿ.

 

 

ಆಡಿಯೋ ವಿಡಿಯೊ ಮೆಸೇಜ್ ಗಳು, ಪಿಕ್ಚರ್ ಮೆಸೇಜ್, ಟೆಕ್ಸ್ಟ್ ಗಳು ಸೇರಿದಂತೆ ವಾಟ್ಸಾಪ್ ನ ಎಲ್ಲಾ ಬಗೆಯ ಸಂದೇಶಗಳನ್ನೂ ಕೆಲವೇ ದಿನಗಳಲ್ಲಿ ಡಿಲೀಟ್ ಮಾಡಲಿದೆ ಎಂದು ತಿಳಿದು ಬಂದಿದೆ. ಈ ವರ್ಷಾಂತ್ಯಕ್ಕೆ ಎಲ್ಲ ಬಳಕೆದಾರರ ದತ್ತಾಂಶ ಡಿಲೀಟ್ ಮಾಡಲಿದೆ ಆದರೆ ನೀವು ಭಯಪಡುವ ಅಗತ್ಯ ಇಲ್ಲ. ವಾಟ್ಸ್ ಆಪ್ ನಿಮಗೆ ಡೇಟಾ ಉಳಿಸಿಕೊಳ್ಳಲು ಪರ್ಯಾಯ ವ್ಯವಸ್ಥೆ ನೀಡಿದೆ. ಮುಂದೆ ಓದಿ.

 

ತಮ್ಮ ಹಳೆಯ ವಾಟ್ಸಾಪ್ ದತ್ತಾಂಶವನ್ನು ಸಂಗ್ರಹಿಸಿ ಇಡುವುದಕ್ಕೆ ಗೂಗಲ್ ಡ್ರೈವ್ ಸಹಾಯಕ್ಕೆ ಬರಲಿದೆ. ಅದಕ್ಕಾಗಿ ಗೂಗಲ್ ತನ್ನ ಬಳಕೆದಾರರಿಗೆ 15 ಜಿಬಿ ಉಚಿತ ಡೇಟಾ ಸ್ಪೇಸ್ ನೀಡುತ್ತಿದೆ ಎಂದು ತಿಳಿದು ಬಂದಿದೆ. ತಮ್ಮ ಡೇಟಾವನ್ನ ಬ್ಯಾಕ್ ಅಪ್ ಮಾಡಿ ಇಟ್ಟುಕೊಳ್ಳುವುದಕ್ಕೆ ವಾಟ್ಸಾಪ್ ತನ್ನ ಗ್ರಾಹಕರಿಗೆ ನವೆಂಬರ್ 12 ರ ವರೆಗೆ ಅವಕಾಶ ನೀಡಿದೆ. ಬಳಿಕ ಡೇಟಾ ಡಿಲೀಟ್ ಆದ್ರೆ ಅದಕ್ಕೆ ನಾವು ಹೊಣೆಯಲ್ಲ ಅಂತ ವಾಟ್ಸಾಪ್ ಸೂಚನೆ ನೀಡಿದೆ ಎನ್ನಲಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top