fbpx
ಸಮಾಚಾರ

ಈ ಒಂದು ಕೆಲಸ ಮಾಡಿದ್ದಕ್ಕೆ ಬೆಂಗಳೂರು ಯುವಕನಿಗೆ 1.2 ಕೋಟಿ ಸಂಬಳ ನೀಡಿ ಕರೆಸಿಕೊಂಡ ಗೂಗಲ್ ಸಂಸ್ಥೆ

ಬೆಂಗಳೂರು ನಗರದ ಅಂತರಾಷ್ಟ್ರೀಯ ಮಾಹಿತಿ ಹಾಗು ತಂತ್ರಜ್ಞಾನ ವಿದ್ಯಾ ಸಂಸ್ಥೆ ವಿದ್ಯಾರ್ಥಿಗೆ ಗೂಗಲ್​ನಿಂದ ಬಂಪರ್​ ಕೊಡುಗೆ​ ಸಿಕ್ಕಿದೆ. ಗೂಗಲ್​ ಆರ್ಟಿ ಫಿಷಿಯಲ್​ ಇಂಟೆಲಿಜೆನ್ಸ್​ ಸಂಸ್ಥೆಯು ಮುಂಬೈ ಮೂಲದ ಬೆಂಗಳೂರು ವಿದ್ಯಾರ್ಥಿ ಆದಿತ್ಯ ಪಾಲಿವಾಲ್ ಅವರಿಗೆ ವರ್ಷಕ್ಕೆ ಸುಮಾರು 1.20 ಕೋಟಿ ರೂ ಬೃಹತ್​ ವೇತನವನ್ನು ನೀಡುತ್ತಿದೆ ಎಂದು ತಿಳಿದು ಬಂದಿದೆ. ಆದಿತ್ಯ ಪಾಲಿವಾಲ್​ ಕೇವಲ 22 ವರ್ಷದ ಯುವಕ ಆಗಿದ್ದು, ಕಡಿಮೆ ವಯಸ್ಸಿಗೆ ಹೆಚ್ಚು ಸಂಬಳ ಪಡೆಯಲಿರುವವರ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ.

ಇಷ್ಟು ದೊಡ್ಡ ಮೊತ್ತದ ವೇತನವನ್ನು ಇಂಟರ್ನೆಟ್ ದೈತ್ಯ ಕಂಪನಿ ಗೂಗಲ್ ನವರು ಆದಿತ್ಯಾಗೆ ಕೊಡಲು ಕಾರಣ ಎಂದು ನೋಡೋಣ ಬನ್ನಿ. ಗೂಗಲ್‌ ಕಂಪನಿಯು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳ ಹುಡುಕಾಟಕ್ಕೆ ನಡೆಸಿದ ಪರೀಕ್ಷೆಯಲ್ಲಿ ಆದಿತ್ಯ ಗಮನ ಸೆಳೆದಿದ್ದರು. ವಿಶ್ವದಾದ್ಯಂತ ಪರೀಕ್ಷೆ ಬರೆದ 6000 ಮಂದಿಯಲ್ಲಿ ಆಯ್ಕೆಯಾದ 50ರಲ್ಲಿ ಆದಿತ್ಯ ಅವರು ಕೂಡ ಒಬ್ಬರು.

 

 

ಈ ಬಗ್ಗೆ ಮಾತನಾಡಿರುವ ಆದಿತ್ಯ ಅವರು ಗೂಗಲ್​ ಸಂಸ್ಥೆಯಲ್ಲಿ ಸೇರಲು ಪ್ರತಿಯೊಬ್ಬ ಮಾಹಿತಿ ಹಾಗು ತಂತ್ರಜ್ಞಾನ ವಿದ್ಯಾರ್ಥಿ ಕನಸು ಆಗಿರುತ್ತದೆ. ಇಷ್ಟು ವರ್ಷಗಳ ಓದು ತುಂಬಾ ಕಷ್ಟದ ಹಾದಿ ಅನಿಸಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಅದಕ್ಕೆ ಮೂಲ ಕಾರಣವೆಂದರೆ ಐಐಐಟಿ ಬೆಂಗಳೂರಲ್ಲಿ ಸಿಕ್ಕ ತರಭೇತಿ​ ಹಾಗು ಇಲ್ಲಿನ ಪ್ರಾಧ್ಯಾಪಕರ ಮಾರ್ಗದರ್ಶನ. ಮುಖ್ಯವಾಗಿ ಪ್ರೊಫೆಸರ್​ ಮುರಳಿಧರ ಹಾಗು ಪ್ರೊ. ಶ್ರೀನಿವಾಸ ರಾಘವನ್​ ಅವರು ನನಗೆ ಹೆಚ್ಚಿನ ಮಾರ್ಗದರ್ಶನ ನೀಡಿದ್ದಾರೆ. ಹಾಗಾಗಿ 2 ಬಾರಿ ಇಂಟರ್​ನ್ಯಾಷನಲ್​ ಕಾಲೆಜಿಯೇಟ್​ ಪ್ರೋಗ್ರಾಮಿಂಗ್​ ಸ್ಪರ್ಧೆಯಲ್ಲಿ ಅಂತಿಮ ಹಂತ ತಲುಪಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ.

ಆದಿತ್ಯ ಪಾಲಿವಾಲ್ ರವರು ಮೂಲತಃ​ ಮುಂಬೈ ನಗರದವರಾಗಿದ್ದು, ಐಐಐಟಿ ಬೆಂಗಳೂರಿನಲ್ಲಿ ತಂತ್ರಜ್ಞಾನ ಹಾಗು ಮಾಹಿತಿ ಕ್ಷೇತ್ರದಲ್ಲಿ ನಡೆಯುವ ಹಲವು ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಪ್ರತಿನಿಧಿಸಿದ್ದಾರೆ. 2017 ಮತ್ತು 2018 ಎರಡೂ ವರ್ಷ ಜಾಗತಿಕ ಮಟ್ಟದಲ್ಲಿ ನಡೆಯುವ ಇಂಟರ್​ನ್ಯಾಷನಲ್​ ಕಾಲೆಜಿಯೇಟ್​ ಪ್ರೊಗ್ರಾಮಿಂಗ್​ ಕಂಟೆಸ್ಟ್​ನ ಫೈನಲ್​ ಪ್ರವೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top