ಸಮಾಚಾರ

ಆ್ಯಮಿ ಜಾಕ್ಸನ್ ಜೊತೆಗೆ ಜೋಗಿ ಪ್ರೇಮ್ ಹೇಗೆ ಮಾತನಾಡ್ತಿದ್ರು ಅಂತ ಗೊತ್ತಾ,ನೋಡಿ ನಗು ತರಿಸುವ ಈ ಸ್ಟೋರಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ತೆರೆ ಹಂಚಿಕೊಂಡಿರುವ ‘ದಿ ವಿಲನ್’ ಚಿತ್ರೀಕರಣ ಕೆಲವಿ ದಿನಗಳ ಹಿಂದೆ ಅಂತೂ ಇಂತು ಆ್ಯಮಿ ಜಾಕ್ಸನ್ ನಟನೆಯ ಹಾಡಿನೊಂದಿಗೆ ಮುಕ್ತಾಯವಾಗಿದೆ. ಇತ್ತೀಚಿಗೆ ಆಡಿಯೋ ಲಾಂಚ್ ಕೂಡ ನಡೆದಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

 

 

ಬ್ರಿಟಿಷ್ ಬ್ಯೂಟಿ ಆ್ಯಮಿ ಜಾಕ್ಸನ್ ಅವರಿಗೆ ಕನ್ನಡ ಬರೋಲ್ಲ ಇನ್ನು ನಿರ್ದೇಶಕ ಪ್ರೇಮ್ ಅವರಿಗೆ ಇಂಗ್ಲಿಷ್ ಸರಿಯಾಗಿ ಬರೋಲ್ಲ. ಚಿತ್ರೀಕರಣ ವೇಳೆ ನಿರ್ದೇಶಕ ಪ್ರೇಮ್ ಆ್ಯಮಿ ಜಾಕ್ಸನ್ ಹೇಗೆ ಮಾತನಾಡಿದ್ದರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದ್ದೆ. ಹೌದು ಈ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್ ಆ್ಯಮಿ , “ಪ್ರೇಮ್‌, ಆ್ಯಮಿ ಜಾಕ್ಸನ್‌ ಅವರನ್ನ ಏಮಿ ಜಾಕ್ಸನ್‌ ಎಂದು ಕರೆಯುತ್ತಿದ್ದರಂತೆ. ಪ್ರೇಮ್‌ ಜೀ ಅಂತ ಆ್ಯಮಿ ಕರೆದಾಗ, ಶಾಟ್ಸ್‌ ಹಾಕಿಕೊಂಡಿರುತ್ತಿದ್ದ ಪ್ರೇಮ್‌ ಓಡಿ ಬಂದು, “ಯೆಸ್‌ ಅಮ್ಮಿ, ವಾಟ್‌ …’ ಅಂತ ತಮ್ಮದೇ ಶೈಲಿಯ ಇಂಗ್ಲೀಷ್‌ ಮಾತಾಡುತ್ತಿದ್ದರು. ಆ್ಯಮಿ ಇಂಗ್ಲೀಷ್‌ನಲ್ಲಿ ಒಂದೇ ಸಮನೆ ಏನಾದರು ಹೇಳಿಬಿಟ್ರೆ ಸಾಕು, ತಮ್ಮ ಅಸಿಸ್ಟಂಟ್‌ಗಳನ್ನು ಕರೆದು, “ಅಯಮ್ಮನ್‌ಗೆ ಸೀನ್‌ ಬಗ್ಗೆ ಹೇಳ್ರೋ’ ಎಂದು ಹೇಳ್ತಿದ್ರಂತೆ.

ಇನ್ನು ಅಸಿಸ್ಟಂಟ್ ಗಳ ಕಥೆ ಕೇಳಬೇಕಾ ಅವರು ಪ್ರೇಮ್ ಶಿಷ್ಯಂದಿರೆ, ಪ್ರೇಮ್ ಸಿಂಪಲಾಗಿ “ಏಮಿ ಜಾಕ್ಸನ್‌ ಯು ಸೀ, ಜಸ್ಟ್‌ ಯು ಫಾಲ್‌. ಆ್ಯಂಡ್‌ ಲುಕ್‌ ಆ್ಯಂಡ್‌ ಗೋ … ದಟ್ಸ್‌ ಇಟ್‌’ ಅಂದುಬಿಡೋರು. ಕೆಲವೊಮ್ಮೆ, “ಅಯಮ್ಮನಿಗೆ ಸೀನ್‌ ಏನಂಥ ನೀನೇ ಹೇಳಿಬಿಡು ಡಾರ್ಲಿಂಗ್‌’ ಅಂತ ಸುದೀಪ್ ಗೆ ಹೇಳ್ತಿದ್ದರಂತೆ. ಅದಕ್ಕೆ ಸುದೀಪ್ ಅವರು ನಾನೇನ್‌ ನಿನ್‌ ಅಸಿಸ್ಟೆಂಟಾ? ಎಂದು ಕೇಳ್ತಿದ್ದರಂತೆ. ಎಂದು ಸುದೀಪ್ ಹೇಳಿ ಸಭಿಕರನ್ನು ನಕ್ಕು ನಲಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top