ಮನೋರಂಜನೆ

ಇದು ದರ್ಶನ್ ಅಭಿಮಾನಿಗಳಿಗೆ ಕಹಿ ಸಮಾಚಾರ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ಬಗ್ಗೆ ಪ್ರೇಕ್ಷಕರು ತಲೆಕೆಡಿಸಿಕೊಂಡು ಕೂತಿದ್ದಾರೆ. ಇಡೀ ಇಡೀ ಅರ್ಧ ಚಿತ್ರರಂಗವೇ ಕಾಣಿಸಿಕೊಂಡಿರುವ ಈ ಚಿತ್ರಕ್ಕಾಗಿ ಒಂದು ವರ್ಷದಿಂದ ಕಾಯುತ್ತಿರುವ ಅಭಿಮಾನಿಗಳು ಚಿತ್ರದ ಮೇಲೆ ಬೆಟ್ಟದಷ್ಟು ಕುತೂಹಲವನ್ನಿಟ್ಟುಕೊಂಡಿದ್ದಾರೆ. ಅದ್ಯಾವಾಗ ಚಿತ್ರ ತೆರೆಕಾಣುತ್ತೋ? ಅದೆಷ್ಟೊತ್ತಿಗೆ ಚಿತ್ರವನ್ನ ಕಣ್ತುಂಬಿಕೊಳ್ಳುತ್ತೇವೋ? ಎಂದು ಕಾದಕುಳಿತಿದ್ದ ದರ್ಶನ್ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿದೆ..

 

 

ಎಲ್ಲವೂ ಅಂದುಕೊಂಡಂತೆ ಹಾಗಿದ್ದರೆ ಕುರುಕ್ಷೇತ್ರ ಇಷ್ಟೊತ್ತಿಗೆ ತೆರೆಕಾಣಬೇಕಿತ್ತು ಆದರೆ ಕಾರಣಾಂತರಗಳಿಂದ ಚಿತ್ರ ಮುಂದಕ್ಕೆ ಹೋಗುತ್ತಲೇ ಇದೇ. ಇತ್ತೀಚೆಗಷ್ಟೇ ದರ್ಶನ್ ಅವರು ಈ ಚಿತ್ರದ ಡಬ್ಬಿಂಗ್ ಮುಗಿಸಿಕೊಂಡಾದ ತಕ್ಷಣವೇ ಅಭಿಮಾನಿಗಳೆಲ್ಲ ಆಡಿಯೋಗಾಗಿ ಕಾತರಿಸಲಾರಂಭಿಸಿದ್ದರು… ಚಿತ್ರದ ಮೇಲೆ ಇರುವ ಕುತೂಹಲ ಹಾಡುಗಳನ್ನು ಕೇಳಿದರೆ ಸ್ವಲ್ಪವಾದರೂ ನೀಗುತ್ತದೆ ಎಂದು ಆಸೆ ಪಟ್ಟಿದ್ದ ದರ್ಶನ್ ಅಭಿಮಾನಿಗಳಿಗೆ ಅದರ ಭಾಗ್ಯ ಸದ್ಯಕ್ಕೆ ಸಿಗುತ್ತಿಲ್ಲ.. ಚಿತ್ರದ ಆಡಿಯೋವನ್ನು ಇದೇ ತಿಂಗಳ 27ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು ಆದರೆ ಮೂಲಗಳ ಅಂದು ಕೂಡ ಆಡಿಯೋ ರಿಲೀಸ್ ಆಗುತ್ತಿಲ್ಲವಂತೆ. ಅಂದು ಆಡಿಯೋ ರಿಲೀಸ್ ಮಾಡಲು ಯಾವ ಪ್ಲಾನ್ ಕೂಡ ಮಾಡಿಲ್ಲವಂತೆ.. ಹೀಗಾಗಿ ದರ್ಶನ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಹಾಡುಗಳು ಮತ್ತೆ ಮುಂದಕ್ಕೆ ಹೋಗಿವೆ..

ಭಾರೀ ಬಜೆಟ್‌ನ ಕುರುಕ್ಷೇತ್ರದ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕರ್ನಾಟಕ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಕನ್ನಡದ ಕುರುಕ್ಷೇತ್ರ ಸದ್ದು ಮಾಡುತ್ತಿದೆ. ಕುರುಕ್ಕ್ಷೇತ್ರ ಚಿತ್ರಕ್ಕೆ ಭಾರತೀಯ ಮಹಾಕಾವ್ಯ ಮಹಾಭಾರತವನ್ನು ಆಧರಿಸಿ ಜೆ.ಕೆ. ಭಾರವಿಯವರು ಬರೆದಿದ್ದಾರೆ..ಸಿನಿಮಾವನ್ನು ನಾಗಣ್ಣ ನಿರ್ದೇಶಿಸುತ್ತಿದ್ದು ವಿ.ಹರಿಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top