ಸಮಾಚಾರ

ಮಾಜಿ ಕ್ರಿಕೆಟರ್ ಸಿಧು ತಲೆ ಕತ್ತರಿಸಿ ತಂದವರಿಗೆ ಬರೋಬ್ಬರಿ ಬಹುಮಾನ ಘೋಷಿಸಿದ ಬಜರಂಗದಳ.

ಮಾಜಿ ಕ್ರಿಕೆಟರ್, ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಸಿಧು ಅವರ ತಲೆಯನ್ನು ಕತ್ತರಿಸಿ ತಂದವರಿಗೆ ಬರೋಬ್ಬರಿ ₹5 ಲಕ್ಷ ನಗದು ಬಹುಮಾನ ನೀಡಲಾಗುವುದು” ಎಂದು ಬಜರಂಗದಳದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್‌ ಜಾಟ್‌ ಘೋಷಿಸಿದ್ದಾರೆ. ಸಿಧು ತಲೆಯನ್ನು ಕಡೆಯುವಂತೆ ಆಮಿಷ ಒಡ್ಡಿರುವ ಸಂಜಯ್‌ ಜಾಟ್‌ ಅವರ ಈ ಹೇಳಿಕೆ ಒಳಗೊಂಡಿರುವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ₹5ಲಕ್ಷ ರೂಪಾಯಿಯ ಚೆಕ್‌ ತೋರಿಸುತ್ತಿರುವ ದೃಶ್ಯವು ಕೂಡ ಇದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪೊಲೀಸರು “ವಿಡಿಯೊ ಇನ್ನೂ ನಮ್ಮ ಗಮನಕ್ಕೆ ಬಂದಿಲ್ಲ, ಈ ವಿಡಿಯೊ ದೊರೆತ ಬಳಿಕ ಸತ್ಯಾಸತ್ಯತೆ ಪರಿಶೀಲಿಸಿ ಸಂಜಯ್ ಜಾಟ್ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

 

 

ಏನಿದು ವಿವಾದ:
ಪಾಕಿಸ್ತಾನದ ಪ್ರಧಾನಮಂತ್ರಿಯಾಗಿ ಇಮ್ರಾನ್​ ಖಾನ್​ ಅವರು ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ತೆರಳಿದ್ದ ಪಂಜಾಬ್​ನ ಸಚಿವ, ಮಾಜಿ ಕ್ರಿಕೆಟರ್​ ನವಜೋತ್​ ಸಿಂಗ್​ ಸಿದು ಅವರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಮಸೂದ್​ ಖಾನ್​ ಅವರ ಪಕ್ಕದಲ್ಲೇ ಕೂರುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

 

ಸಮಾರಂಭದಲ್ಲಿ ಸಿಧು ಮುಂಚೂಣಿ ಸಾಲಿನಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಮಸೂದ್‌ ಖಾನ್‌ ಮಗ್ಗಲಿನ ಸೀಟಿನಲ್ಲಿ ಆಸೀನರಾಗಿದ್ದು ಭಾರತೀಯರ ಕಣ್ಣು ಕೆಂಪಗಾಗಿಸಿದೆ. ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಜ್ವಾ ಸಿಧುವನ್ನು ತಬ್ಬಿಕೊಂಡು ಕುಶಲೋಪರಿ ವಿಚಾರಿಸಿದರು. ಇಬ್ಬರು ನಗುನಗುತ್ತ ಮಾತನಾಡಿದ್ದು ಭಾರತೀಯರಲ್ಲಿ ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

 


 

ಸಿಧುವಿನ ನಡವಳಿಕೆಯನ್ನು ಟೀಕಿಸಿರುವ ಬಿಜೆಪಿ, ಸಿಧು ವಿರುದ್ಧ ಕೂಡಲೇ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಒತ್ತಾಯಿಸಿದೆ. ದೇಶದ ವಿವಿಧೆಡೆ ಸಿಧು ವಿರುದ್ಧ ಪ್ರತಿಭಟನೆಗಳು ನಡೆಸಲಾಗುತ್ತಿದ್ದು, ಸಿಧು ದೇಶದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ ಅವರನ್ನು ಕೂಡಲೇ ಬಂಧಿಸಬೇಕೆಂಬ ಆಗ್ರಹಿಸುತ್ತಿದ್ದಾರೆ. ಭಾರತೀಯ ಯೋಧರನ್ನು ಹತ್ಯೆ ಮಾಡುವುದಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥರೇ ಆದೇಶ ನೀಡುತ್ತಾರೆ, ನವಜೋತ್ ಸಿಂಗ್ ಸಿಧು ಅವರೆಡೆಗೆ ಆತ್ಮೀಯತೆ ತೋರುವುದು ಸರಿಯಲ್ಲ ಎಂದು ಶೋಷಿಯಲ್ ಮೀಡಿಯಾದಲ್ಲಿ ಕೂಡ ಸಿಧು ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top