ಸಮಾಚಾರ

ಸ್ಟಾರ್ ನಟಿಯರ ಮಕ್ಕಳು ಸಿನಿಮಾದಲ್ಲಿ ಸ್ಟಾರ್ ಗಿರಿ ಗಿಟ್ಟದೆ ಬರೀ ಪ್ಲಾಪ್ ಕಂಡವರು ಇವರೇ ನೋಡಿ

1. ಸೋಹಾ ಅಲಿಖಾನ್:
ಗುಳಿ ಕೆನ್ನೆ ಸುಂದರಿಯೆಂದೇ ಹೆಸರುವಾಸಿಯಾಗಿರುವ ಶರ್ಮಿಳಾ ಟಾಗೋರ್ 80–90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಉತ್ತುಂಗಕ್ಕೇರಿದ ನಟಿ. ಇದೇ ಸಂದರ್ಭದಲ್ಲಿ ಅವರು ಪಟೌಡಿಯ ನವಾಬ ಮನ್ಸೂರ್ ಅಲಿ ಖಾನ್ ಅವರನ್ನು ವರಿಸಿದರು ಇವರ ಮಗಳು ಸೋಹಾ ಅಲಿಖಾನ್ ಅವರು ಬಾಲಿವುಡ್ ಪ್ರವೇಶ ಮಾಡಿದರು ಕೂಡ ನಿರೀಕ್ಷಿತ ಯಶಸ್ಸು ಸಿಗದೇ ಸೈಡ್ ಲೈನ್ ಆದರು.

2. ಟ್ವಿಂಕಲ್ ಖನ್ನಾ:
ಬಾಲಿವುಡ್ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಮತ್ತು ಡಿಂಪಲ್ ಕಾಪಾಡಿಯಾ ಅವರ ಮಗಳಾದ ಟ್ವಿಂಕಲ್ ಖನ್ನಾ ಅವರು ನಟಿಯಾಗಿ ಅಷ್ಟೆನೂ ಯಶಸ್ಸು ಕಾಣಲಿಲ್ಲ. ಲೇಖಕಿ, ಪತ್ರಿಕೆ ಅಂಕಣಗಾರ್ತಿ, ಚಲನಚಿತ್ರ ನಿರ್ಮಾಪಕಿ ಮತ್ತು ಒಳಾಂಗಣ ವಿನ್ಯಾಸಗಾರ್ತಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಸಿನಿಮಾ ರಂಗದಿಂದ ದೂರ ಸರಿದ ಟ್ವಿಂಕಲ್ ಖನ್ನಾ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಮದುವೆಯಾದರು.

 

 

 

3.ಇಶಾ ಡಿಯೋಲ್:
ಬಾಲಿವುಡ್ ನ ‘ಡ್ರೀಮ್ ಗರ್ಲ್’ ಹೇಮಾ ಮಾಲಿನಿ ಹಾಗು ಧರ್ಮೇಂದ್ರ ಅವರ ಚಿಕ್ಕ ಮಗಳು ಇಶಾ ಡಿಯೋಲ್ ತಖ್ತಾನಿಯವರ ಸಿನಿಮಾ ರಂಗದಲ್ಲಿ ಅಷ್ಟೇನೂ ಯಶಸ್ಸು ಕಾಣದೆ ದೂರವೇ ಉಳಿದರು ಬಳಿಕ ಸಿನಿಮಾ ಜಂಜಾಟವೇ ಬೇಡವೆಂದು ಮದುವೆ ಆದರೂ ಎಂದು ತಿಳಿದು ಬಂದಿದೆ.

 

4.ತನಿಶಾ ಮುಖರ್ಜಿ:
ಬಾಲಿವುಡ್ ನಲ್ಲಿ ಅನೇಕ ಹಿಟ್ ಸಿನಿಮಾ ನೀಡಿರುವ ತನುಜಾ ಅವರು ಪ್ರಮುಖ ನಟಿಯರಲ್ಲಿ ಒಬ್ಬರು ಆದರೆ ಇವರ ಮಗಳು ತನಿಶಾ ಅವರು ಆರಂಭದಲ್ಲೇ ಮುಗ್ಗರಿಸಿದರು. ಬಿಡುಗಡೆಯಾದ ಮೊದಲ ಬಾಲಿವುಡ್ ಸಿನಿಮಾ ಫ್ಲಾಪ್ ಆಯಿತು ಮರು ಪ್ರಯತ್ನ ಮಾಡಲೇ ಇಲ್ಲ.

 

5. ರಿಯಾ ಸೆನ್:
ಮುನ್ ಸೆನ್ ಅವರ ಮಗಳಾದ ರಿಯಾ ಸೆನ್, ಮೋಹಕ ನಟನೆಯಿಂದ ಖ್ಯಾತಿ ಗಳಿಸಿದ್ದ ನಟಿ ರಿಯಾ ಸೇನ್ ಬಹಳಷ್ಟು ಅಭಿಮಾನಿಗಳಿಗೆ ಈ ಮೂಲಕ ನಿರಾಶೆ ಮೂಡಿಸಿದರು. ಇವರ ಸಿನಿಮಾ ಫ್ಲಾಪ್ ಆದವು.

 

 

6.ಪ್ರತಿಭಾ ಸಿನ್ಹಾ:
1950-70 ರಲ್ಲಿ ಬಾಲಿವುಡ್ ನಲ್ಲಿ ಉತ್ತರ ಹೆಸರು ಮಾಡಿದ್ದ ಟಾಪ್ ನಟಿ ಮೆಲಾ ಸಿನ್ಹಾ ಅವರ ಪುತ್ರಿ ಪ್ರತಿಭಾ ಸಿನ್ಹಾ ಬಾಲಿವುಡ್ ನಲ್ಲಿ ಹೆಸರು ಮಾಡಲಿಲ್ಲ. ಅವರ ಸಿನೆಮಾಗಳು ಸೋತು ಹೋದವು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top