ಮನೋರಂಜನೆ

ಮೆಗಾಸ್ಟಾರ್ ಚಿರಂಜೀವಿಯಿಂದ ಹೊಗಳಿಸಿಕೊಂಡ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ.

ಕಿರಿಕ್ ಪಾರ್ಟಿ ಎಂಬ ‘ಕನ್ನಡ’ ಸಿನಿಮಾ ಮೂಲಕವೇ ನೇಮು ಫೇಮು ಗಳಿಸಿಕೊಂಡು ಆನಂತರ ‘ಅಪ್ಪಟ ತೆಲುಗು’ ಹುಡುಗಿಯಂತೆ ಮಿಂಚುತ್ತಿರುವಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಕನ್ನಡದ ದೊಡ್ಡ ದೊಡ್ಡ ಸ್ಟಾರ್’ಗಳ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದ ಕಿರಿಕ್ ಹುಡುಗಿ ಕನ್ನಡಕ್ಕಿಂತ ತೆಲುಗಿನಲ್ಲೇ ಹೆಚ್ಚು ಬ್ಯುಸಿಯಾಗಿದ್ದಾಳೆ..

 

 

ತೆಲುಗಿನ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆ ಗೀತಗೋವಿಂದಂ ಎಂಬ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾಳಲ್ಲಾ? ಆ ಚಿತ್ರ ಕಳೆದ ವಾರ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.. ಪ್ರೇಕ್ಷಕರಾದಿಯಾಗಿ ತೆಲುಗು ಚಿತ್ರರಂಗದ ಅನೇಕ ಗಣ್ಯರು ಚಿತ್ರತಂಡಕ್ಕೆ ಶುಭಾಶಯ ತಿಳಿಸುತ್ತಿದ್ದಾರೆ, ಅಂತೆಯೇ ಟಾಲಿವುಡ್ ಮೆಗಾ ಸ್ಟಾರ್ ಕೂಡ ಚಿರಂಜೀವಿ ಕೂಡ ಗೀತಗೋವಿಂದಂ ಚಿತ್ರಕ್ಕೆ ಕಂಗ್ರ್ಯಾಟ್ಸ್ ಹೇಳಿ.. ನಟ ನಟಿಯರನ್ನು ಹಾಡಿ ಹೊಗಳಿದ್ದಾರೆ.

‘ಗೀತಾಗೋವಿಂದಂ’ ಚಿತ್ರದ ಸಕ್ಸಸ್ ಮೀಟ್ ಮೊನ್ನೆ ನಡೆದಿತ್ತು, ಈ ಕಾರ್ಯಕ್ರಮಕ್ಕೆ ಚಿರಂಜೀವಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಚಿರಂಜೀವಿ “ರಶ್ಮಿಕಾ ಅವರದ್ದು ನಾಯಕನ ಪಾತ್ರವನ್ನೇ ಡಾಮಿನೇಟ್ ಮಾಡುವಂತಹ ಪಾತ್ರ. ತುಂಬಾ ಅದ್ಭುತವಾಗಿ ಪಾತ್ರವನ್ನು ರಶ್ಮಿಕಾ ನಿರ್ವಹಿಸಿದ್ದಾರೆ. . ತನ್ನ ಕಣ್ಣಿನಲ್ಲೇ ಕೋಪ ತೋರಿಸುತ್ತಾ, ನಟನೆಯಲ್ಲೂ ‘ವಾಹ್’ ಎನ್ನುವ ಹಾಗೆ ಅಭಿನಯಿಸಿದ್ದಾರೆ” ಎಂದು ರಶ್ಮಿಕರನ್ನು ಹೊಗಳಿದರು.. ಆದರೆ ಮೆಗಾಸ್ಟಾರ್’ರ ಈ ಹೊಗಳಿಕೆಯನ್ನು ನೇರವಾಗಿ ನೀಡಿ ಖುಷಿಪಡಲು ರಶ್ಮಿಕಾಗೆ ಸಾಧ್ಯವಾಗಲಿಲ್ಲ, ಏಕೆಂದರೆ ಶೂಟಿಂಗ್ ನಿಮಿತ್ತ ಈಗ ಬ್ಯಾಂಕಾಕ್ ನಲ್ಲಿರುವ ರಶ್ಮಿಕಾ ಗೀತಗೋವಿಂದಂ ಸಕ್ಸಸ್ ಮೀಟ್ ಕಾರ್ಯಕಮಕ್ಕೆ ಹೋಗಿರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top