ಮನೋರಂಜನೆ

“ಇಂತಹ ಸಮಯದಲ್ಲಿ ಸಂಭ್ರಮಾಚರಣೆ ಸರಿಯಲ್ಲ” ಎಂದ ಡಾಲಿ ಧನಂಜಯ್- ಯಾಕೆ ಗೊತ್ತಾ?

ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ಏಕಾಏಕಿ ಸ್ಟಾರ್ ಆಗಿ ಹೊರ ಹೊಮ್ಮಿರುವವರು ಧನಂಜಯ. ಅಭಿಮಾನಿಗಳಿಂದ ಡಾಲಿ ಅಂತಲೇ ಕರೆಸಿಕೊಳ್ಳುವಷ್ಟರ ಮಟ್ಟಿಗೆ ಟಗರು ಪಾತ್ರದಿಂದ ಧೂಳೆಬ್ಬಿಸಿರೋ ಧನಂಜಯ್‌ ಈಗ ಮಾನವೀಯತೆಯ ನೆಲೆಗಟ್ಟಿನಲ್ಲಿ ನಿಂತು ಮಾತನಾಡಿದ್ದಾರೆ. ಇದೇ ತಿಂಗಳು 23ರಂದು ಧನಂಜಯ್ ಅವರ ಬರ್ತಡೇ ಇದ್ದು, ಅದನ್ನು ಆಚರಿಸದಿರಲು ಅವರು ನಿರ್ಧರಿಸಿದ್ದಾರೆ..

 

 

ಕೊಡಗಿನಲ್ಲಿ ಭಯಂಕರ ಮಳೆಯಿಂದಾಗಿ ಭೀಕರ ಪ್ರವಾಹದ ಭೀತಿ ಉಂಟಾಗಿರುವ ವಿಚಾರ ಎಲ್ಲರಿಗೂ ಗೊತ್ತು. ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಚಿತ್ರಣಗ ಕೂಡ ಸ್ಪಂದಿಸಿದ್ದು ಅನೇಕ ಕಲಾವಿದರು ಆಹಾರ,ಹಣ ಮತ್ತು ಅಗತ್ಯ ವಸ್ತುಗಳನ್ನು ನೀಡಿ ಒಂದೊಂದು ರೀತಿಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ.. ಜನರು ಪ್ರವಾಹಕ್ಕೆ ತುತ್ತಾಗಿ ನೋವು ಪಡುತ್ತಿರೋ ಈ ಸಮಯದಲ್ಲಿ ಬರ್ತಡೇ ಮಾಡುವುದು ಸರಿಯಲ್ಲ ಎಂದು ಧನಂಜಯ್ ಹೇಳಿದ್ದಾರೆ.

 

 

“ನನ್ನ ಹುಟ್ಟುಹಬ್ಬದ ದಿನ ಯಾವುದೇ ಕೇಕ್, ಪಟಾಕಿ, ಕಟೌಟ್ ಅಂತ ಸಂಭ್ರಮಿಸುವುದು ಬೇಡ. ಹಾಗಂತ ನಿಮಗೆ(ಅಭಿಮಾನಿಗಳಿಗೆ) ನಿರಾಸೆ ಮಾಡೋದಿಲ್ಲ. ಬನ್ನಿ ನಿಮ್ಮ ಜೊತೆ ಭೇಟಿ ಆಗುತ್ತೇನೆ.. ಕೊಡಗು ಜನರ ಪರಿಹಾರಕ್ಕಾಗಿ ನಮ್ಮ ಕೈನಲ್ಲಿ ಎಷ್ಟು ಸಾಧ್ಯವೋ ಅಷ್ಟು ಅವರಿಗೆ ನೆರವಾಗೋಣ” ಎಂದು ಅಭಿಮಾನಿಗಳಲ್ಲಿ ಧನಂಜಯ್ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಖುದ್ದು ಧನಂಜಯ್ ಅವರೇ ಫೇಸ್ಬುಕ್ ವಿಡಿಯೋ ಮೂಲಕ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top