fbpx
ಸಮಾಚಾರ

ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕರೆ ನೀಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್.

ಅರಣ್ಯ ಇಲಾಖೆಯ ರಾಯಭಾರಿಯಾಗಿ ಆಯ್ಕೆಯಾದ ನಂತರ ಸಿನಿಮಾಗಳ ಜೊತೆ ಪರಸರ ಸಂರಕ್ಷಣಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊನ್ನೆ ತಾನೇ ನಾಗರಹೊಳೆ, ಬಂಡೀಪುರ ಅಭಯಾರಣ್ಯಕ್ಕೆ ತೆರಳಿ ಸಫಾರಿ ನಡೆಸಿ ಬಂದಿದ್ದರು. ವೈವಿಧ್ಯಮಯ ಪ್ರಾಣಿ ಪಕ್ಷಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಯಿಡಿದು ಕಣ್ತುಂಬಿಕೊಂಡಿದ್ದ ದರ್ಶನ್ ಇದೀಗ ಕೊಳ್ಳೆಗಾಲದ ಮಲೆಮಹದೇಶ್ವರ ಸಂರಕ್ಷಿತ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

 

 

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದರ್ಶನ್ ಅವರೊಂದಿಗೆ ಒಂದಷ್ಟು ಕಾಲ ಮಾತಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಆ ನಂತರ ಸಸಿಯನ್ನು ನೆಡುವ ಮೂಲಕ ಪರಸರ ಸಂರಕ್ಷಣೆಯ ಸಂದೇಶ ರವಾನಿಸಿದ್ದಾರೆ. ಕಾಡು ಬೆಳಸಿ, ನಾಡು ಉಳಿಸಿ ಎಂಬ ಅಭಿಯಾನದ ಅಡಿಯಲ್ಲಿ ಕೊಳ್ಳೆಗಾಲದ ಮಹದೇಶ್ವರ ಬೆಟ್ಟಗಳ ತಪ್ಪಲಿನ ದಟ್ಟ ಅರಣ್ಯದಲ್ಲಿ ಮರಗಳ ಸಂಖ್ಯೆ ಕ್ಷೀಣಿಸುತ್ತಿದ್ದು ಮತ್ತೆ ಮರಗಳನ್ನು ಹೆಚ್ಚಿಸುವ ಉದ್ದೇಶದಿಂದ ಸಸಿ ನೆಡುವ ಕಾರ್ಯಕ್ಕೆ ದರ್ಶನ್ ಚಾಲನೆ ನೀಡಿದ್ದಾರೆ. ಕಾಡು ಹೆಚ್ಚು ಹೆಚ್ಚು ರಕ್ಷಣೆಯಾದರೆ ವನ್ಯ ಜೀವಿಗಳು ಸಂರಕ್ಷಿತಾಗಿರುತ್ತವೆ ಎಂಬುದು ದರ್ಶನ್ ಅವರ ಲೆಕ್ಕಾಚಾರ.

ಕರ್ನಾಟಕದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಅಂದ್ರೆ ಅದು ದರ್ಶನ್, ತಮ್ಮ ಪ್ರೀತಿಯ ನಟನನ್ನು ಕಂಡ್ರೆ ಅಭಿಮಾನಿಗಳಿಗೆ ಎಲ್ಲಿಲ್ಲಿದ ವ್ಯಾಮೋಹ, ಜೊತೆಗೆ ಅವರ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಾರೆ.. ಹಾಗಾಗಿ ದರ್ಶನ್ ಅವರು ಪರಿಸರ ಸಂರಕ್ಷಣೆಯಂತಹ ವಿಚಾರಗಳಲ್ಲಿ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸಿರುವುದು ಸಾಮಾಜಿಕ ಕಳಕಳಿಯ ದೃಷ್ಟಿಯಲ್ಲಿ ಇದು ಒಂದೊಳ್ಳೆ ಕೆಲಸ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top