ಸಮಾಚಾರ

ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ತನ್ನ ನ್ಯಾಯೋಚಿತ ಪಾಲು ಸಿಗಲೇಬೇಕು- ದೆಹಲಿಯಲ್ಲಿ ಗುಡುಗಿದ ಡಿಕೆಶಿ.

ಗೋದಾವರಿ ಮತ್ತು ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಕರ್ನಾಟಕಕ್ಕೆ ತನ್ನ ನ್ಯಾಯೋಚಿತ ಪಾಲು ಸಿಗಲೇ ಬೇಕು. ಇಲ್ಲವಾದರೆ, ಈ ಬಗ್ಗೆ ತೀರ್ಮಾನ ಮಾಡಲು ನ್ಯಾಯಾಧಿಕರಣ ರಚನೆ ಮಾಡುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರ ಅಧ್ಯಕ್ಷತೆಯಲ್ಲಿ ನಡೆದ ನದಿ ಜೋಡಣೆ ಯೋಜನೆ ಕುರಿತ 15ನೇ ಸಭೆಯಲ್ಲಿ ಕರ್ನಾಟಕದ ಪರ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ನದಿ ಜೋಡಣೆ ಯೋಜನೆಯಲ್ಲಿ ರಾಜ್ಯದ ಪಾಲಿನ ನೀರನ್ನು ಹಂಚಿಕೆ ಮಾಡಿಯೇ ಇಲ್ಲ, ಈ ಪ್ರಮಾದವನ್ನು ಸರಿಯಾಪಡಿಸಲೇ ಬೇಕು ಎಂದು ವಾದಿಸಿದರು.

ರಾಜ್ಯದ ಕೃಷ್ಣಾ ಮತ್ತು ಕಾವೇರಿ ಕೊಳ್ಳದ ಪ್ರದೇಶಗಳು ಕಡಿಮೆ ನೀರಿನ ಲಭ್ಯತೆ ಇರುವ ಪ್ರದೇಶಗಳಾಗಿದ್ದು. ಈ ಎರಡೂ ನದಿಗಳ ಕಣಿವೆ ಪ್ರದೇಶದಲ್ಲಿ ಕುಡಿಯುವ ಮತ್ತು ನೀರಾವರಿಗೆ ಬಹಳ ಅಭಾವವಿದೆ. ನಮ್ಮ ರಾಜ್ಯಕ್ಕೆ ನ್ಯಾಯಯುತವಾಗಿ ಅಗತ್ಯವಿರುವಷ್ಟು ನೀರಿನ ಪಾಲು ನಮಗೆ ಸಿಗದೇ ಹೋದರೆ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಲೇಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಈ ಕುರಿತು ಅಂತಿಮ ತೀರ್ಮಾನಕ್ಕಾಗಿ ನ್ಯಾಯಾಧಿಕರಣ ಸ್ಥಾಪನೆ ಮಾಡುವಂತೆ ನಾವು ಒತ್ತಾಯಿಸುತ್ತೇವೆ” ಎಂದು ಡಿ.ಕೆ.ಶಿವಕುಮಾರ್ ಗುಡುಗಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top