ಕಫದ ಸಮಸ್ಯೆ ಇರೋರು ಈ 9 ಆಯುರ್ವೇದದ ಮನೆಮದ್ದುಗಳನ್ನ ಬಳಸಿ ಎರಡೇ ದಿನದಲ್ಲಿ ಕಫ ವಾಸಿ
ಮಾಡ್ಕೋಬಹುದು .
ಸೀಸನ್ ಚೇಂಜ್ ಆಯ್ತು ವಾತಾವರಣ ಬದಲಾಯ್ತು ಎಷ್ಟೋ ಜನಕ್ಕೆ ಕೆಮ್ಮು ಕಫ ಶಾಪವಾಗಿ ಹೋಗುತ್ತೆ ,
ಅಲರ್ಜಿ, ಮಾಲಿನ್ಯ , ಋತು ಮಾನ ಹೀಗೆ ಎಷ್ಟೊಂದು ಕಾರಣಗಳಿಂದ ಕಫ ಬರುತ್ತೆ , ಕಫ ಹೆಚ್ಚಾಗಿ ಮುಂದೆ ಎದೆ ನೋವು ಕೂಡ ಕಾಣಿಸ್ಕೊಬಹುದು .
ಕೆಮ್ಮಲ್ಲಿ ಎರಡು ತರ ಒಣ ಕೆಮ್ಮು ಮತ್ತೆ ಕಫ ಮಿಶ್ರಿತ ಕೆಮ್ಮು ಎರಡು ಅಪಾಯವೇ ಆದರೆ ಸುಲಭವಾದ ಮನೆಮದ್ದುಗಳಿಂದ ವಾಸಿ ಮಾಡ್ಕೋಬಹುದು .
ಕಫದ ಸಮಸ್ಯೆಗೆ ಆಯುರ್ವೇದದ ಮನೆಮದ್ದುಗಳು :
1. ಜ್ಯೇಷ್ಠಮಧು ಮತ್ತು ಕಲ್ಲುಸಕ್ಕರೆ ಸೇರಿಸಿ ನೀರಲ್ಲಿ ಹಾಕಿ ಕುದಿಸಿ ವಾರಕ್ಕೆ 2-3 ಸಾರಿ ಕುಡಿಬೇಕು .
2. ತುಳಸಿ ಎಲೆಯನ್ನು ನೀರಲ್ಲಿ ಹಾಕಿ ಕುದಿಸಿ ವಾರಕ್ಕೆ 2-3 ಸಾರಿ ಕುಡಿಬೇಕು .
3. ಶುಂಠಿ ಪುಡಿ, ಕಲ್ಲುಸಕ್ಕರೆ ಹಾಗೂ ತುಳಸಿ ಎಲೆಯನ್ನು ರಸವನ್ನು ಕುದಿಸಿ, ಈ ಮಿಶ್ರಣವನ್ನು ದಿನಕ್ಕೆ 2-3 ಬಾರಿ ಕುಡಿಬೇಕು .
4. ಅರ್ಧ ಚಮಚ ಶುಂಠಿ ಪುಡಿ , ಒಂದು ಚಮಚ ಜೇನುತುಪ್ಪ ಮತ್ತೆ ಸ್ವಲ್ಪ ನಿಂಬೆ ರಸ ಬಿಸಿ ನೀರಿಗೆ ಸೇರಿಸಿ ಕುಡೀರಿ.
5. ಬಿಸಿನೀರಿಗೆ ಸ್ವಲ್ಪ ಉಪ್ಪನ್ನು ಬೆರಸಿ ಬಾಯಿ ಮುಕ್ಕಳಿಸಬೇಕು.
6 . ಬೆಳ್ಳುಳ್ಳಿ ಚೆನ್ನಾಗಿ ಸುಟ್ಟು ದಿನಕ್ಕೊಂದು ಎಸಳು ತಿನ್ನಬೇಕು .
7 . ಕಾಲು ಚಮಚ ಕಾಳು ಮೆಣಸಿನ ಪುಡಿ ಮತ್ತೆ ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೆ ಎರಡು ಬಾರಿ ಕಷಾಯ ಮಾಡಿಕೊಂಡು ಕುಡಿಯಿರಿ.
8. ಒಂದು ಚಮಚ ಜೇನುತುಪ್ಪವನ್ನು ಬೆಚ್ಚಗಿನ ನೀರಿಗೆ ಸೇರಿಸಿ ಕುಡಿಯಿರಿ .
9. ಕಾಲು ಚಮಚ ಕಾಳು ಮೆಣಸಿನ ಪುಡಿ , ರುಚಿಗೆ ಸ್ವಲ್ಪ ಉಪ್ಪು , ಸ್ವಲ್ಪ ಶುಂಠಿ , ಸೇರಿಸಿ ಒಂದು ಲೋಟ ಬಿಸಿನೀರಿಗೆ ಹಾಕಿ ಕುದಿಸಿ ,ಆರಿಸಿ ಕುಡಿಯಿರಿ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
