ಸಮಾಚಾರ

ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ 3 ತಿಂಗಳು ಫ್ರೀ

ಈ ಹಿಂದೆ ಘೋಷಣೆ ಮಾಡಿದಂತೆಯೇ ಸ್ವಾತಂತ್ಯ ದಿನಾಚರಣೆ ಆಗಸ್ಟ್ 15 ರಂದು ಬಹು ನಿರೀಕ್ಷಿತ ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಲಾಂಚ್ ಆಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಜಿಯೋ ಲಾಂಚ್ ಮಾಡಿ ಟೆಲಿಕಾಂ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ್ದ ಮುಖೇಶ್ ಅಂಬಾನಿ ಅವರು ಈಗ ಯಾವ ಯಾವ ಆಫರ್ ನೀಡುತ್ತಿದ್ದಾರೆ ಎಂದು ನೋಡೋಣ ಬನ್ನಿ.

ರಿಲಯನ್ಸ್ ಜಿಯೋ ಮೊದಲ 3 ತಿಂಗಳವರೆಗೆ ಪ್ರಿವ್ಯೂ ಆಫರ್ (ಪೂರ್ವಭಾವಿ) ಮೂಲಕ ಜಿಯೋ ಗಿಗಾ ಫೈಬರ್ ಬ್ರಾಡ್ ಬ್ಯಾಂಡ್ ಸೇವೆ ಉಚಿತವಾಗಿ ನೀಡುವುದಾಗಿ ಘೋಷಿಸಿದೆ ಎನ್ನಲಾಗಿದೆ. ಮೂರೂ ತಿಂಗಳು ಉಚಿತ ಸೇವೆ ನೀಡಿದರೆ ಮಾರುಕಟ್ಟೆಯಲ್ಲಿ ದರ ಸಮಾರಾ ಉಂಟಾಗಿ ಉಳಿದ ನೆಟ್ವರ್ಕ್ ಗಳು ಕೂಡ ಕಡಿಮೆ ದರದಲ್ಲಿ ಬ್ರಾಡ್ ಬ್ಯಾಂಡ್ ಸೇವೆ ನೀಡುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಇದು ಗ್ರಾಹಕರಿಗೆ ಅನುಕೂಲ ಆಗಲಿದೆ.

 

 

ಇನ್ನೊಂದು ಆಫರ್ ಇದರ ಜೊತೆಗಿದ್ದು ಉಚಿತ ಇನ್ಸ್ಟಾಲೇಷನ್ ಕೂಡ ಮಾಡಿಕೊಡಲಾಗುತ್ತಿದೆ. ಆದರೆ ನೀವು 4500 ರೂಪಾಯಿ ಭದ್ರತಾ ಠೇವಣಿ ಇಡಬೇಕು. ಈ ಠೇವಣಿ ನಿಮಗೆ ಸೇವೆ ಬೇಡವಾದಾಗ ಮರುಪಾವತಿ ಮಾಡಲಾಗುತ್ತದೆ.

ಸಿಗಲಿರುವ ಸೇವೆಗಳು
– ಪ್ರತಿ ತಿಂಗಳು 100GB ಡೇಟಾ ಉಚಿತವಾಗಿರುತ್ತದೆ
– 3 ತಿಂಗಳು 300GB
– 100Mbps ವೇಗದ ಇಂಟರ್ನೆಟ್ ಸೌಲಭ್ಯ ನಿಮಗೆ ದೊರೆಯುತ್ತದೆ
– ಅತೀ ವೇಗದ ಡೌನ್ಲೋಡ್ ಹಾಗು ಅಪ್ಲೋಡ್ ಮಾಡಬಹುದು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top