fbpx
ಸಮಾಚಾರ

ಕೆಜಿಎಫ್ ಅನುಭವದ ಬಗ್ಗೆ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಹೇಳಿದ್ದೇನು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಯಶ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು ಕೂತಿದ್ದಾರೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಯಶ್ ಅಭಿಮಾನಿಗಳ ಕುತೂಹಲವಂತೂ ಯಶ್ ಕೆಜಿಎಫ್‌ಗಾಗೇ ಬಿಟ್ಟಿರೋ ಉದ್ದ ಗಡ್ಡದ ಕೂದಲಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ!

ವಿಶೇಷ ಹಾಡಿನ ಚಿತ್ರೀಕರಣದ ಮೂಲಕ ಶೂಟಿಂಗ್ ಮುಗಿಸಿಕೊಂಡಿರುವ ಕೆಜಿಎಫ್ ಚಿತ್ರತಂಡ ಕೇಕ್ ಕಟ್ ಮಾಡುವ ಮೂಲಕ ಸಂತಸಪಟ್ಟಿದೆ. ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಟಿ ಶ್ರೀನಿಧಿ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಶೂಟಿಂಗ್ ಕಂಪ್ಲೀಟ್ ಮಾಡಿರುವ ಖುಷಿಯಲ್ಲಿದೆ. ಸಿನಿಮಾದ ಚಿತ್ರೀಕರಣ ಮುಗಿಸಿರುವ ಖುಷಿಯಲ್ಲಿ ಇರುವ ಶ್ರೀನಿಧಿ ಚಿತ್ರದ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಬಗ್ಗೆ ಶ್ರೀನಿಧಿ ಹೇಳಿದ್ದೇನು ಅಂತೀರಾ? ಮುಂದೆ ಓದಿ.

 

 

“ಸುಮಾರು ಎರಡು ವರ್ಷಗಳ ಹಿಂದೆ ನಾನು ‘ಕೆಜಿಎಫ್ ಚಿತ್ರತಂಡವನ್ನು ಭೇಟಿಯಾಗಿದ್ದಾಗ ಆ ಚಿತ್ರದಲ್ಲಿ ನಾನು ಕೂಡ ಭಾಗಿಯಾಗುವಂತೆ ಆಫರ್ ಬಂದಿತ್ತು. ಇಂತಹ ಅದ್ಬುತ ಸಿನಿಮಾದಲ್ಲಿ ನಾನು ಕೂಡ ಒಂದು ಭಾಗವಾಗಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಈ ಚಿತ್ರದ ಮೂಲಕ ನನ್ನ ಸಿನಿಮಾ ಪಯಣ ಆರಂಭವಾಗುತ್ತಿದೆ. ಇದು ನನ್ನ ಪಾಲಿನ ಅದೃಷ್ಟ. #KGF ಮೂಲಕ ಚಲನಚಿತ್ರ ಉದ್ಯಮಕ್ಕೆ ನನ್ನ ಪ್ರಯಾಣವನ್ನು ಆರಂಭಿಸಿದ್ದೇನೆ ಇದಕ್ಕೆ ನಾನು ಕೆಜಿಎಫ್ ತಂಡಕ್ಕೆ ತುಂಬಾ ಕೃತಜ್ಞತಳಾಗಿರುತ್ತೇನೆ. ಈ ಚಿತ್ರ ಅನಿರೀಕ್ಷಿತ ಮತ್ತು ನಂಬಲಾಗದ ಪ್ರಯಾಣವಾಗಿದೆ! ಈಗ ನಾವು ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದೇವೆ, ಈಗ ‘ಕೆಜಿಎಫ್’ ನನ್ನ ಜೀವನದ ಅತ್ಯುತ್ತಮ ನಿರ್ಧಾರವೆಂದು ನಾನು ಮಾತ್ರ ಹೇಳಬಲ್ಲೆ.” ಎಂದು ಶ್ರೀನಿಧಿ ಕೆಜಿಎಫ್ ಅನುಭವದ ಬಗ್ಗೆ ಬರೆದುಕೊಂಡಿದ್ದಾರೆ.

 

 

ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿರಲಿದೆ. ಆರು ತಿಂಗಳ ಹಿಂದೆ ಯಶ್ ಹುಟ್ಟುಹಬ್ಬಕ್ಕೆ ಟೀಸರ್ ಒಂದನ್ನು ರಿವೀಲ್ ಮಾಡಿ ಮಾಯವಾಗಿದ್ದ ಚಿತ್ರತಂಡ ಮುಂದಿನತಿಂಗಳ ಕೊನೆಯಲ್ಲಿ ಟ್ರೈಲರ್ ಲಾಂಚ್ ಮಾಡಲು ಯೋಚನೆ ರೂಪಿಸಿದೆ. ಮುಂದಿನ ತಿಂಗಳು ಚಿತ್ರದ ಟ್ರೈಲರ್ ಮತ್ತು ಹಾಡುಗಳು ಪ್ರೇಕ್ಷಕರನ್ನು ತಲುಪಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top