ಸಮಾಚಾರ

ಇಂತವರು ಅಪ್ಪಿತಪ್ಪಿನ್ನು ದೇವಿಗೆ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದಂತೆ

ನಿಂಬೆಹಣ್ಣಿನ ಉಪಯೋಗ ಕೇವಲ ಅಡುಗೆ ತಯಾರಿಕೆಗೆ ಹಾಗು ಆರೋಗ್ಯ ವೃದ್ಧಿಗೆ ಮಾತ್ರ ಅಲ್ಲದೆ ದೇವರ ಪೂಜೆಗೆ ಅತ್ಯಂತ ಪ್ರಮುಖವಾದುದ್ದು ಎಂದು ಹೇಳಿದರೆ ತಪ್ಪಾಗಲಾರದು. ನಿಂಬೆ ಹಣ್ಣು ದೇವಿ ಸ್ವರೂಪಿಯಾದ ದುರ್ಗಾದೇವಿಗೆ ಬಹಲ ಪ್ರಿಯವಾದುದ್ದರಿಂದ ದೇವಿಯ ಕೃಪೆ ಮತ್ತು ಆರ್ಶಿವಾದ ನಮಗೆ ಸಿಗಲಿ ಎಂದು ಹಚ್ಚುತ್ತೇವೆ.

ಭಕ್ತಾದಿಗಳು ತಮ್ಮ ಇಷ್ಟಾರ್ಥವನ್ನು ಸಿದ್ದಿ ಮಾಡಲು ನಿಂಬೆ ಹಣ್ಣಿನ ತಿರುಳಲ್ಲಿ ದೀಪ ಬೆಳಗಿಸಿ ದೇವಿಗೆ ಪ್ರಾರ್ಥಿಸುವುದೇ ಇಲ್ಲಿನ ವಾಡಿಕೆ .ದೇವಸ್ಥಾನದಲ್ಲಿ ದೀಪ ಹಚ್ಚಿದರೆ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆ ಭಕ್ತರದು . ಆ ಕಾರಣದಿಂದ ದೇವಿಗೆ ಇಷ್ಟವಾದ ನಿಂಬೆಹಣ್ಣಿನಿಂದ ಆರತಿ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

 

 

 

ಆದರೆ ನಿಂಬೆ ಹಣ್ಣಿನ ಕೆಲವೊಂದು ಸಮಯದಲ್ಲಿ ಹಚ್ಚಬಾರದು, ಹಾಗಾದರೂ ಯಾವ ಸಂಧರ್ಭದಲ್ಲಿ ಲಿಂಬೆ ಹಣ್ಣಿನ ದೀಪ ಹಚ್ಚಬಾರದು ಎಂಬುದನ್ನು ನೋಡೋಣ ಬನ್ನಿ.

ನಿಂಬೆ ಹಣ್ಣಿನ ದೀಪವನ್ನು ಯಾವುದೇ ಕಾರಣಕ್ಕೂ ಆರೋಗ್ಯ ಸರಿ ಇಲ್ಲದೆ ಇದ್ದಾಗ, ಮೈಲಿಗೆ, ಸೂತಕ ಇರುವಾಗ ಹಚ್ಚಬಾರದು.
ಮಕ್ಕಳ ಹುಟ್ಟು ಹಬ್ಬ, ವಿವಾಹವಾದ ದಿನಗಳಂದು ನಿಂಬೆಹಣ್ಣಿನ ದೀಪವನ್ನು ಹಚ್ಚಲೇ ಬಾರದು.
ಯಾರಿಗೆ ಸಮಸ್ಯೆ ಬಂದಿದೆಯೋ ಅವರಿಗೆ ಹಚ್ಚುವ ಸಮಯ ಇಲ್ಲದೆ ಇದ್ದರು ಅವರ ಮನೆಯವರು ಯಾರು ಬೇಕಾದರು ದೀಪವನ್ನು ಹಚ್ಚಬಹುದು ಆದ್ರೆ ಒಂದೇ ಮನೆಯವರು ಇಬ್ಬರು ಹೆಂಗಸರು ನಿಂಬೆಹಣ್ಣಿನ ದೀಪವನ್ನು ಹಚ್ಚಬಾರದು ಎಂದು ತಿಳಿದು ಬಂದಿದೆ.

 

ಮಹಿಳೆಯರು ಮುಟ್ಟಾದ ಸಮಯದಲ್ಲಿ ಲಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು
ದೇವಿಯ ವಾರವಾದ ಮಂಗಳವಾರ ಮಧ್ಯಾಹ್ನ 3.30 ರಿಂದ 5.00 ಗಂಟೆಯವರೆಗೆ ಮತ್ತು ಶುಕ್ರವಾರ ಬೆಳಿಗ್ಗೆ 11.00ರಿಂದ 12.30 ವರೆಗೆ ಲಿಂಬೆ ಹಣ್ಣಿನ ದೀಪವನ್ನು ಹಚ್ಚಬಹುದು ಎಂದು ತಿಳಿದು ಬಂದಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top