ಸಮಾಚಾರ

ರಿಯಲ್ ಮಿಲ್ಕಾ ಸಿಂಗ್ ಬದಲಾಗಿ ರೀಲ್ ಮಿಲ್ಕಾ ಸಿಂಗ್ ಫೋಟೋ ಪಠ್ಯಕ್ಕೆ ಹಾಕಿ ಯಡವಟ್ಟು ಮಾಡಿದ ಸರ್ಕಾರ

ಕೆಲವು ವರ್ಷಗಳ ಹಿಂದೆ ದೇಶದ ಪ್ರಮುಖ ಅಥ್ಲೀಟ್ ಮಿಲ್ಕಾ ಸಿಂಗ್ ರವರ ಜೀವನ ಚರಿತ್ರೆ ಬೆಳ್ಳಿತೆರೆ ಮೇಲೆ ಮೂಡಿ ಬಂದಿತ್ತು. ಸೂಪರ್ ಹಿಟ್ ಆಗಿದ್ದ ಸಿನಿಮಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಏಷ್ಯಾ ಕ್ರೀಡೆಗಳಲ್ಲಿ ಮಿಂಚಿ ಕೂದಲೆಳೆ ಅಂತರದಲ್ಲಿ ಒಲಂಪಿಕ್ಸ್ ಪದಕವನ್ನು ಕಳೆದುಕೊಂಡಿದ ಮಿಲ್ಕಾ ಸಿಂಗ್ ಕಥೆ ಸಿನಿಮಾ ಆಗಿತ್ತು. ಮಿಲ್ಕಾ ಸಿಂಗ್ ಅವರನ್ನು ಪ್ರೀತಿಯಿಂದ ದಿ ಫ್ಲೈಯಿಂಗ್ ಸಿಖ್ ಎಂದು ಕರೆಯುತ್ತಿದ್ದರು. ಈ ರನ್ನಿಂಗ್ ರಾಜನ ಕಥೆಯನ್ನು ನಿರ್ದೇಶಕ ರಾಕೇಶ್ ಮೆಹ್ರಾ ಅವರು ನಿರ್ದೇಶನ ಮಾಡಿದ್ದರು. ಸಿನೆಮಾಗೆ ‘ಭಾಗ್ ಮಿಲ್ಕಾ ಭಾಗ್’ ಎಂದು ಹೆಸರು ಇಟ್ಟಿದ್ದರು.

ಈ ಸಿನಿಮಾದಲ್ಲಿ ಮಿಲ್ಕಾ ಸಿಂಗ್ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ ಫರಾನ್ ಅಕ್ತರ್ ಅಭಿನಯ ಮಾಡಿದ್ದರು. ಆ ಬಳಿಕ ಎಲ್ಲರಿಗೂ ಮಿಲ್ಕಾ ಸಿಂಗ್ ಹೆಸರು ಕೇಳಿದರೆ ಮೊದಲು ಕಣ್ಣು ಮುಂದೆ ಫರಾನ್ ಅಕ್ತರ್ ಬರುತ್ತಾರೆ. ಆದರೆ ಈಗ ಪಶ್ಚಿಮ ಬಂಗಾಳ ಪಠ್ಯ ಪುಸ್ತಕದಲ್ಲಿ ನಿಜ ಜೀವನದ ಮಿಲ್ಕಾ ಸಿಂಗ್ ಬದಲಾಗಿ ಸಿನಿಮಾ ಮಿಲ್ಕಾ ಸಿಂಗ್ ಅಂದರೆ ಫರಾನ್ ಅಕ್ತರ್ ಚಿತ್ರವನ್ನು ಮುದ್ರಿಸಿ ಎಡವಟ್ಟು ಮಾಡಿಕೊಂಡಿದೆ. ಈ ಕುರಿತಾಗಿ ಟ್ವೀಟರ್ ಬಳಕೆದಾರರೊಬ್ಬರು ಚಿತ್ರ ಸಹಿತ ಟ್ವೀಟ್ ಮಾಡಿದ್ದಾರೆ.

ಇದು ನಟ ಫರಾನ್ ಅಕ್ತರ್ ಗಮನಕ್ಕೆ ಬಂದಿದ್ದು, ಅದನ್ನು ಬದಲಾಯಿಸಿ ಮಿಲ್ಖಾ ಸಿಂಗ್ ಅವರ ಪೋಟೋವನ್ನು ಸೇರಿಸಬೇಕೆಂದು ಫರಾನ್ ಅಕ್ತರ್ ಅವರು ಪಶ್ಚಿಮ ಬಂಗಾಳ ಶಿಕ್ಷಣ ಸಚಿವರನ್ನು ಒತ್ತಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಈ ಪಠ್ಯ ಪುಸ್ತಕದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆಯ ಎಡವಟ್ಟಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top