ಸಮಾಚಾರ

ತುಂಬಾ ವೈರಲ್ ಆಗ್ತಾಯಿದೆ ಕಳ್ಳನ ಕೈಚಳಕದ ಈ ವಿಡಿಯೋ,ನೀವು ನೋಡಿ

ಪೊಲೀಸರು ಎಷ್ಟೇ ನಿಗಾ ವಹಿಸಿದರು ಕೂಡ ಕಳ್ಳರು ಜನದಟ್ಟಣೆಯ ಪ್ರದೇಶಗಳಲ್ಲಿ ಕಳ್ಳತನ ಮಾಡುವುದನ್ನು ಮುಂದುವರೆಸಿಕೊಂಡು ಬಂದಿದ್ದಾರೆ . ಸಿಸಿಟಿವಿ ಹಾಕುವುದರಿಂದ ಕಳ್ಳತನ ಮಾಡುವುದನ್ನು ತಪ್ಪಿಸಬಹುವು ಎಂಬುದಕ್ಕೆ ಇತ್ತೀಚಿಗೆ ಮುಂಬೈ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಸಾಕ್ಷಿ ಆಗಿದೆ. ಜೇಬು ಕಳ್ಳತನ ಮಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

ವಿಡಿಯೋದಲ್ಲಿ ದಾಖಲಾಗಿರುವ ಪ್ರಕಾರ ಕಳ್ಳನೊಬ್ಬ ತನ್ನ ಮುಂದೆ ನಿಂತಿರುವ ವ್ಯಕ್ತಿಯೊಬ್ಬರ ಹಿಂಬದಿ ಜೇಬಿನಲ್ಲಿರುವ ಪರ್ಸ್ ಅವರಿಗೆ ಗೊತ್ತಾಗದ ಹಾಗೆ ಕದಿಯುತ್ತಾನೆ, ಆದರೆ ಕದ್ದ ಬಳಿಕ ಸಿಸಿಟಿವಿ ಕ್ಯಾಮೆರಾ ನೋಡಿದ ಆತ ಅವರಿಗೆ ಪರ್ಸ್ ವಾಪಾಸ್ ಮಾಡಿ ಕೆಳಗೆ ಬಿದ್ದಿತ್ತು ಎಂದು ಹೇಳುತ್ತಾನೆ. ಕ್ಯಾಮೆರಾ ನೋಡಿ ಒಂದು ಕ್ಷಣ ಗಾಭರಿಯಾದ ಕಳ್ಳ ಕ್ಯಾಮೆರಾಗೆ ಕೈ ಮುಗಿದಿರುವ ದೃಶ್ಯ ದಾಖಲಾಗಿದೆ. ಈ ವಿಡಿಯೋ ನೋಡಲು ಹಾಸ್ಯಾಸ್ಪದ ಇರಬಹುದು ಆದರೆ ನಾವು ಜೇಬು ಗಳ್ಳರಿಂದ ಎಚ್ಚರವಾಗಿರಬೇಕು ಎಂದು ಸೂಚಿಸುತ್ತದೆ.

 

ಈ ವಿಡಿಯೋ ನೋಡಿ:

 

ಇದು ಮುಂಬೈ ನಲ್ಲಿ ನಡೆದಿರುವ ಘಟನೆ ಇರಬಹುದು ಆದರೆ ನಮ್ಮ ದಿನನಿತ್ಯದ ಜೀವನದಲ್ಲೇ ಇಂತಹ ಅನೇಕ ಘಟನೆಗಳು ನಡೆಯುತ್ತವೆ ಬಸ್, ರೈಲಿನಲ್ಲಿ ಪ್ರಯಾಣ ಮಾಡುವಾಗ, ಜನದಟ್ಟಣೆಯ ಪ್ರದೇಶಗಳಲ್ಲಿ ಕಳ್ಳತನ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವು ಎಚ್ಚರಿಕೆಯಿಂದ ನಮ್ಮ ವಸ್ತುಗಳನ್ನು ಕಾಪಾಡಿಕೊಳ್ಳೋಣ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ ಎಂದು ತಿಳಿದು ಬಂದಿದೆ. ಮುಂಬೈ ನಗರದ ಪೊಲೀಸರು ಈ ವಿಡಿಯೋ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು ಹಾಗೆಯೆ ಕಳ್ಳರಿಗೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top