fbpx
ಹೆಚ್ಚಿನ

150 ವರ್ಷಗಳ ಹಿಂದೆ ಋಷಿ ಮುನಿಗಳು ಕೊಟ್ಟಿದ್ದ ಈ ನಾಗಮಣಿ ಇಂದು ಜನರ ಪ್ರಾಣ ಉಳಿಸುತ್ತಂತೆ,ಏನ್ ಇದರ ಹಿಂದೆ ಇರುವ ಬೆಚ್ಚಿಬಿಳಿಸೋ ರಹಸ್ಯ.

ನಾಗಮಣಿ ರಹಸ್ಯ.150 ವರ್ಷಗಳ ಹಿಂದೆ ಋಷಿ ಮುನಿಗಳು ಕೊಟ್ಟಿದ್ದ ಈ ನಾಗಾಮಣಿ ಇಂದು ಅನೇಕ ಜನರ ಪ್ರಾಣ ಉಳಿಸುತ್ತಿದೆ.
ಹಾವನ್ನು ಕಂಡರೆ ಭಯ ಪಡದವರೇ ಇಲ್ಲ. ಹಾವು ಕಚ್ಚುತ್ತದೆ ಎಂದರೆ ಮತ್ತೆ ಸಾವಿನ ಅಂಚಿಗೆ ಹೋಗುತ್ತಾರೆ ಎನ್ನುವ ಭಯ ಎಲ್ಲರಿಗೂ ಇದ್ದೇ ಇರುತ್ತದೆ . ಆದರೆ ಈ ಗ್ರಾಮದಲ್ಲಿ ಜನರಿಗೆ ಹಾವು ಕಚ್ಚಿದರೂ ಕೂಡ ಏನು ತೊಂದರೆ ಇಲ್ಲದೆ ಆರಾಮವಾಗಿ ಇರುತ್ತಾರೆ .ಗಡಿಬಿಡಿಯಿಂದ ಆಸ್ಪತ್ರೆಗೆ ಹೋಗದೆ ಊರಿನಲ್ಲಿ ಇರುವ ಒಂದು ಮಣಿಯಿಂದಲೇ ಇಲ್ಲಿಯೇ ಹೇಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾರೆ.ಇದೇನು ವಿಚಿತ್ರವಾಗಿ ಇದೆ ಎಂದು ಅಂದುಕೊಳ್ಳುತ್ತಿದ್ದೀರಾ ? ಈ ನಾಗಮಣಿ ರಹಸ್ಯವನ್ನು ತಿಳಿಯೋಣ ಬನ್ನಿ.

ಇಲ್ಲಿನ ಸುತ್ತಮುತ್ತಲ ಹತ್ತು ಗ್ರಾಮಗಳಲ್ಲೂ ಹಾವು ಕಚ್ಚಿದರೆ ಜನರು ಗಾಬರಿ ಬೀಳುವುದಿಲ್ಲ. ಬಡವರ ಪಾಲಿನ ದೈವದಂತೆ ಇರುವ ಈ ನಾಗಮಣಿ ಹಾವಿನಲ್ಲಿ ಇರುವಂತಹ ವಿಷವನ್ನು ತೆಗೆದು ಜೀವವನ್ನು ಉಳಿಸುತ್ತದೆ. ವೈದ್ಯಲೋಕಕ್ಕೆ ಸವಾಲೊಡ್ಡುವ ರೀತಿ ಕ್ಷಣಮಾತ್ರದಲ್ಲಿ ಹಾವು ಕಚ್ಚಿರುವ ವಿಷವನ್ನು ಹೊರತೆಗೆದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ . ಹೀಗೆ ಪಳಪಳ ಎಂದು ಹೊಳೆಯುವ ಬಿಳಿಯ ಮಣಿಯೇ ನಾಗಮಣಿ .ಸಾಧಾರಣಗಿರುವ ಈ ಕಲ್ಲು ಅದು ಹೇಗೆ ಹಾವಿನ ವಿಷವನ್ನು ಹೀರಿಕೊಂಡು ಜನರ ಜೀವವನ್ನು ಉಳಿಸುತ್ತದೆ ಎಂದು ಆಶ್ಚರ್ಯಪಡಬೇಡಿ.ಇದು ನಿಜ .

 

 

 

ಸಾಮಾನ್ಯ ಎಂದು ಕಾಣುವ ಈ ಕಲ್ಲಿಗೆ ಅಸಮಾನ್ಯ ಶಕ್ತಿ ಇದೆ. ಈ ಮಣಿಯ ನಿಜವಾದ ರಹಸ್ಯವೇ ಬೇರೆ ಇದೆ .ಹಾಸನದ ಚನ್ನರಾಯಪಟ್ಟಣದ ತಾಲೂಕಿನ ಡಿ. ಕಳ್ಳೆನಹಳ್ಳಿ ಗ್ರಾಮದ ಕೃಷ್ಣಪ್ಪ ಎನ್ನುವವರು ನಾಗಮಣಿಯಿಂದ ಹಾವಿನ ವಿಷವನ್ನು ತೆಗೆಯುವ ಸಾಮರ್ಥ್ಯ ಉಳ್ಳವರು. ಹಾವು ಕಚ್ಚಿದವರನ್ನು ತಕ್ಷಣ ಇವರ ಬಳಿ ಕರೆದುಕೊಂಡು ಹೋದರೆ ಅಲ್ಲಿಗೆ ಹಾವು ಕಚ್ಚಿದ ಸ್ಥಳಕ್ಕೆ ಆ ಮಣಿಯನ್ನು ಇಟ್ಟರೆ ಅದು ನೋಡು ನೋಡುತ್ತಿದ್ದಂತೆ ಸುಮಾರು ಹೊತ್ತು ಕಳೆದಂತೆ ಬಿಳಿಯ ಬಣ್ಣದಲ್ಲಿ ಇರುವ ನಾಗ ಮಣಿ ನಿಧಾನವಾಗಿ ಎಲ್ಲ ವಿಷವನ್ನು ಹೀರಿಕೊಂಡು ಕೆಂಪು ಬಣ್ಣಕ್ಕೆ ತಿರುಗುತ್ತದೆ .
ಹಾವು ಕಚ್ಚಿದವರಿಗೆ ಈ ಮಣಿಯನ್ನು ಇಡುವ ಮೊದಲು ನಿದ್ದೆ ಬಾರದಂತೆ ಹಸಿರು ಔಷಧಿಯೊಂದನ್ನು ಕೊಡಲಾಗುತ್ತದೆ. ಹಾವು ಕಚ್ಚಿದವರಿಗೆ ನಿದ್ದೆ ಬಂದರೆ ಬಹುಬೇಗ ಮೈಯೆಲ್ಲಾ ವಿಷವೆಲ್ಲ ಆವರಿಸುತ್ತದೆ ಎನ್ನುವ ಕಾರಣಕ್ಕೆ ಈ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಾವು ಕಚ್ಚಿದ ಮೂರು ಗಂಟೆಯ ನಂತರ ನಾಗ ಮಣಿಯನ್ನು ತೆಗೆಯಲಾಗುತ್ತದೆ . ನಂತರ ಅದನ್ನು ಹಸುವಿನ ಹಾಲಿನಲ್ಲಿ ಇಡಲಾಗುತ್ತದೆ. ಇರಿಸಿದ ಕೆಲವೇ ಕ್ಷಣಗಳಲ್ಲಿ ಹಾಲು ಹಳದಿ ಬಣ್ಣಕ್ಕೆ ತಿರುಗುತ್ತದೆ.

ಹಾಗೆಯೇ ಈ ನಾಗಮಣಿಗೆ ಇದರದ್ದೇ ಆದ ಹಿನ್ನೆಲೆ ಕೂಡ ಇದೆ.

150 ವರ್ಷಗಳ ಹಿಂದೆ ಋಷಿ ಮುನಿಗಳ ಕಾಲದಲ್ಲಿ ಈ ಮಣಿ ದೇವಾಂಶ ಸಂಭೂತವಾದ ನಾಗರ ಹಾವಿನ ತಲೆಯ ಮೇಲೆ ಇತ್ತು ಎಂದು ಊರಿನವರು ಹೇಳುತ್ತಾರೆ. ಅಷ್ಟೇ ಅಲ್ಲದೆ ಅಮಾವಾಸ್ಯೆಯ ದಿನ ರಾತ್ರಿಯಲ್ಲಿ ಮತ್ತೊಂದು ಹಾವಿನ ಜೊತೆ ಸರಸ ಮಾಡುವುದಕ್ಕೆ ಮಣಿಯನ್ನು ಹಾವು ಹೊರಹಾಕುತ್ತಿತ್ತು ಎಂದು ಹೇಳುತ್ತಾರೆ.
ಕೃಷ್ಣಪ್ಪ ಅವರಿಗೆ ಇಂತಹ ಮೃತ್ಯು ಸಂಜೀವಿನಿ ನಾಗಮಣಿ ಹೇಗೆ ಸಿಕ್ಕಿತು ? ಎನ್ನುವುದು ಮತ್ತೊಂದು ಕಥೆ. ಹಿಂದೆ ಕೃಷ್ಣಪ್ಪನ ಮುತ್ತಾತಂದಿರು ಕುರಿ ಕಾಯುತ್ತಿದ್ದಾಗ ಪಕ್ಕದ ಬೆಟ್ಟದಲ್ಲಿ ತಪಸ್ಸು ಮಾಡುತ್ತಿದ್ದ ಋಷಿಮುನಿಯೊಬ್ಬರು ನಾಗಮಣಿಯನ್ನು ಕೊಟ್ಟು ಹಾವು ಕಚ್ಚಿದಾಗ ಇದನ್ನು ಅಲ್ಲಿಗೆ ಇಟ್ಟು ಮನುಷ್ಯನ ಪ್ರಾಣ ಉಳಿಸಿ ಎಂದು ಹೇಳಿದ್ದರಂತೆ. ತಲೆಮಾರುಗಳಿಂದ ಕೃಷ್ಣಪ್ಪನವರ ಕುಟುಂಬದಲ್ಲಿ ಇದ್ದು ಗ್ರಾಮಸ್ಥರ ಪ್ರಾಣ ಉಳಿಸುತ್ತದೆ.

ಈ ನಾಗಮಣಿಯ ಕಳ್ಳತನಕ್ಕೆ ಯತ್ನಿಸಿದವರೆಲ್ಲರೂ ಸಾವಿಗೆ ಈಡಾಗುತ್ತಾರೆ ಎನ್ನುವುದು ಇನ್ನೊಂದು ಅಚ್ಚರಿ.

ವರ್ಷಗಳ ಹಿಂದೆ ಈ ಮಣಿಯನ್ನು ಕಳ್ಳತನ ಮಾಡಿದ ಬಳಿಕ ನಾಗಮಣಿಯನ್ನು ದೇವಸ್ಥಾನದ ಹತ್ತಿರ ಇಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಗ್ರಾಮಸ್ಥರು ಹೇಳುತ್ತಾರೆ . ಅಷ್ಟರ ಮಟ್ಟಿಗೆ ಈ ನಾಗಮಣಿ ಮಹತ್ವವನ್ನು ಪಡೆದುಕೊಂಡಿದೆ.ಜೀವ ಉಳಿಸುವ ಸಂಜೀವಿನಿಯಾಗಿರುವ ಈ ನಾಗಮಣಿಯ ಅದ್ಬುತ ರಹಸ್ಯ ಎಲ್ಲರನ್ನೂ ಅಚ್ಚರಿ ಮೂಡಿಸುತ್ತಿದೆ.
ಅದೇನೇ ಇದ್ದರೂ ಪ್ರಪಂಚ ಮುಂದುವರೆದಿದ್ದರೂ ಕೂಡ ವಿಜ್ಞಾನಕ್ಕೆ ಸವಾಲೊಡ್ಡಿ ನಿಂತಿರುವ ಈ ನಾಗಮಣಿ ಹತ್ತಾರು ಗ್ರಾಮಗಳಿಗೆ ವರದಾಯಕವಾಗಿರುವುದಂತೂ ನಿಜ. ಹಾವು ಕಚ್ಚಿದಾಗ ಅಸಹಾಯಕರಾಗಿ ವೈದ್ಯರು ಕೈ ಚೆಲ್ಲಿದರೂ ಕೂಡ ಈ ಮಣಿ ಮಾತ್ರ ಜೀವವನ್ನು ಉಳಿಸುವಲ್ಲಿ ನೆರವಾಗುವುದು ನಿಜಕ್ಕೂ ರಹಸ್ಯವಾಗಿಯೇ ಉಳಿದಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top