ಸಮಾಚಾರ

“ಪ್ರೇಮ್ ಗಿಮಿಕ್ ಮಾಡೋದ್ರಲ್ಲಿ ತಪ್ಪೇನು”,ಸುದೀಪ್

‘ದಿ ವಿಲನ್’ ಚಿತ್ರ ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ಕ್ರೇಜ್ ಸೃಷ್ಟಿ ಮಾಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯಿಸಿರುವ ಈ ಚಿತ್ರ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ಕುಳಿತಿದ್ದಾರೆ. ಇನ್ನು ಚಿತ್ರವನ್ನು ನಿರ್ದೇಶನ ಮಾಡಿರುವ ಪ್ರೇಮ್ ಒಬ್ಬ ಉತ್ತಮ ನಿರ್ದೇಶಕನಾಗಿದ್ದು ಜೊತೆಗೆ ಪಕ್ಕಾ ಬ್ಯುಸಿನೆಸ್‌ ಮೈಂಡ್ ಹೊಂದಿದ್ದಾರೆ. ಸಿನಿಮಾ ಟೀಸರ್ ಟ್ರೆಂಡಿಂಗ್ ನಲ್ಲಿತ್ತು, ಈಗ ಹಾಡು ಕೂಡ ಟ್ರೆಂಡಿನಲ್ಲಿತ್ತು. ಅದೇ ಪ್ರೇಮ್ ಅವರ ಚಾಣಾಕ್ಷತನ. ಸಿನಿಮಾ ಬ್ಯುಸಿನೆಸ್‌ ಮಾಡೋದ್ರಲ್ಲಿ ತಾವೂ ಯಾವತ್ತೂ ನಂ.1 ಎನ್ನುವುದನ್ನು ಪ್ರೇಮ್ ಅವರು ‘ದಿ ವಿಲನ್’ ಮೂಲಕ ಬಿಡುಗಡೆ ಮುನ್ನವೇ ಸಾಬೀತು ಮಾಡಿದ್ದಾರೆ. ಇನ್ನು ಪ್ರೇಮ್ ಸಿನಿಮಾಗಾಗಿ ಗಿಮಿಕ್ ಮಾಡುತ್ತಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

 

 

‘ಕರಿಯ’ ಚಿತ್ರದಿಂದಲೇ ಪ್ರೇಮ್ ಗಿಮಿಕ್ ನಿರ್ದೇಶಕ ಎಂದು ಖ್ಯಾತಿ ಪಡೆದರು. ಆದರೆ ನಿರ್ದೇಶಕ ಪ್ರೇಮ್ ಅವರು ಗಿಮಿಕ್ ಮತ್ತು ಬಿಲ್ಡಪ್ ಕೊಡೋದರಲ್ಲಿ ತಪ್ಪೇನಿದೆ? ಹೀಗೆ ಹೇಳಿದ್ದು ಬೇರಾರು ಅಲ್ಲ ಸ್ವತಃ ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಪ್ರೇಮ್ ಒಬ್ಬ ಪ್ಯಾಶನೇಟ್ ನಿರ್ದೇಶಕ ಆಗಿದ್ದು ತಮ್ಮ ಸಿನಿಮಾ ಪ್ರಚಾರ ಮಾಡಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಸುದೀಪ್ ಕೇಳಿದ್ದಾರೆ.

ಇನ್ನು ಪ್ರೇಮ್ ಅವರ ಕೆಲಸವನ್ನು ಹಾಡಿ ಹೊಗಳಿರುವ ಕಿಚ್ಚ ಸುದೀಪ್ ಅವರು ಪ್ರೇಮ್ ಒಬ್ಬ ಒಳ್ಳೆಯ ಕೆಲಸಗಾರನಾಗಿದ್ದು. ಅವರನ್ನು ಕಂಡು ಕೆಲವರು ಅದೆಲ್ಲೋ ಕುಳಿತು ಹೀಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಈ ಸಿನಿಮಾ ಅದೆಷ್ಟು ದಿನ ಓಡುತ್ತೋ ನನಗೆ ಗೊತ್ತಿಲ್ಲ. ಆದರೆ, ಪ್ರೇಮ್ ಕುರಿತ ನನ್ನ ಅಭಿಪ್ರಾಯ ಮಾತ್ರ ಬದಲಾಗುವುದಿಲ್ಲ. ಈ ಚಿತ್ರದಲ್ಲಿ ನಟಿಸಿದ್ದು ನನಗೆ ಬಹಳ ಖುಷಿ ಇದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.

ಅಂದಹಾಗೆ ಸೆನ್ಸಾರ್ ಮುಗಿಸಿರುವ ಈ ಸಿನಿಮಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳ ಮೊದಲ ವಾರದಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top