ಸಮಾಚಾರ

ತನ್ನ ಪ್ರೇಯಸಿಗಾಗಿ 300 Sorry ಬ್ಯಾನರ್ ಗಳನ್ನು ರಸ್ತೆ ಪೂರ್ತಿ ಹಾಕಿ ಕ್ಷಮೆ ಕೇಳಿದ ಕ್ರೇಜಿ ಪ್ರಿಯಕರ

“ಅರಸಿ ಬಂದೆ ನೀ ಪ್ರೇಯಸಿ ಮುನಿಸಿ ನೀನೆ ದೂರ ಹೋದೆ ಏಕೆ, ನಿನ್ನ ಕಾಲುಂಗುರವ ತೊಡಿಸುವ ಎನ್ನ ಕೈ ನಿನ್ನ ಕಾಲ ಮುಟ್ಟಿತು, ನೀ ಅರಿಯದೆ ಹೋದೆ ಎನ್ನ ಹೃದಯವಹೊಸ್ತಿಲ, ಹೊಸ್ತಿಲ ಚಪ್ಪಲಿಯ ಕಾಲಲ್ಲಿ ಮೆಟ್ಟು ನಿಂತಂತೆ ನೀ ಮೆಟ್ಟೆ ಎನ್ನ ಹೃದಯವ, ಪ್ರೀತಿ ಕಾಣದ ಪದವಲ್ಲ ಅದು ಮನದ ಇನಿದನಿ, ಕದವ ತಟ್ಟಿ ಮನವ ಕುಟ್ಟಿ ಪುಟಿದಿಹ ಮನವ ನೀ ಪುಟಿದೆಬ್ಬಿಸಿ ಮರೆಯಾದೆ, ಆರದ ಗಾಯಕೆ ನೀ ಕವಿತೆಯಾದೆ” ನಾವು ಈ ಕವಿತೆಯನ್ನು ಕೇಳಿಯೇ ಇರುತ್ತೇವೆ.

ಮುನಿಸಿಕೊಂಡಿರುವ ಪ್ರೇಯಸಿಗಾಗಿ ಪ್ರಿಯತಮರು ಏನೇನೆಲ್ಲ ಸರ್ಕಸ್ ಮಾಡುತ್ತಾರೆ ಎಂಬುದಕ್ಕೆ ಇಲ್ಲೊಬ್ಬ ಪಕ್ಕ ಪ್ರೇಮಿಯ ಉದಾಹರಣೆ ಇದೆ. ಸಿಟ್ಟು ಮಾಡಿಕೊಂಡು ಮಾತುಬಿಟ್ಟಿದ್ದ ಪ್ರೇಯಸಿಗಾಗಿ sorry ಎಂದು ಬರೆದಿರುವ ಸುಮಾರು 300 ಸಾರಿ ಬ್ಯಾನರ್ ಗಳನ್ನು ರಸ್ತೆಯಲ್ಲಿ ಹಾಕಿ ಫುಲ್ ಹವಾ ಕ್ರಿಯೇಟ್ ಮಾಡಿದ್ದಾನೆ.

 

 

ಪುಣೆ ನಗರದ ನಿವಾಸಿಯಾಗಿರುವ ಉದ್ಯಮಿ ನಿಲೇಶ್ ಅವರು ತಮ್ಮ ಮುನಿಸಿಕೊಂಡಿರುವ ಪ್ರೇಯಸಿಯನ್ನು ಒಲಿಸಿಕೊಳ್ಳಲು ಐ ಯಮ್ ಸಾರಿ (ನನ್ನನು ಕ್ಷಮಿಸು) ಎಂದು ಬರೆದಿರುವ, ಜೊತೆಗೆ ಕೆಂಪು ಬಣ್ಣದ ಹೃದಯ ಇರುವ 300 ಬ್ಯಾನರ್ ಗಳನ್ನೂ ಪ್ರೇಯಸಿ ಸಂಚರಿಸುವ ರಸ್ತೆಯಲ್ಲಿ ರಾತ್ರಿ ಹಾಕಿದ್ದಾರೆ. ಬೆಳಿಗ್ಗೆ ಪಾದಚಾರಿಗಳು ನೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾರ್ವಜನಿಕರ ದೂರಿನನ್ವಯ ನಿಲೇಶ್ ಖೇಡೇಕರ್ ವಿರುದ್ಧ ಅಕ್ರಮ ಹೋರ್ಡಿಂಗ್ ಹಾಗು ಸಾರ್ವಜನಿಕ ಆಸ್ತಿಗೆ ಹಾನಿ ಆರೋಪದ ಮೇಲೆ ದೂರು ದಾಖಲಿಸಿದ್ದು, ಈ ಬಗ್ಗೆ ನಗರಾಡಳಿಕ್ಕೆ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಏನೋ ಮಾಡಿ ಪ್ರೇಯಸಿಯನ್ನು ಸಮಾಧಾನ ಮಾಡಲು ಹೋದ ನಿಲೇಶ್ ಈಗ ಪೇಚಿಗೆ ಸಿಲುಕಿದ್ದಾನೆ. ಇನ್ನು ಪ್ರೇಯಸಿಯ ಮುಸಿಸು ಯಾವ ಹಂತದಲ್ಲಿದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top