ಸಮಾಚಾರ

ಸಂಪ್ರದಾಯದಂತೆ ಮರದ ಜೊತೆ ಮದುವೆಯಾದ ನಟ

ಕಪ್ಪೆಗೆ ಮದುವೆ ಮಾಡಿಸುವುದನ್ನು ನಾವು ನೋಡಿದ್ದೇ ಆದರೆ ಪೆರು ನಲ್ಲಿ ನಟನಿಗೂ ಹಾಗು ಮರಕ್ಕೆ ಮದುವೆ ನಡೆದಿದೆ. ಈ ವಿಭಿನ್ನವಾದ ಮದುವೆಯ ಬಗ್ಗೆ ತಿಳಿಯಲು ಮುಂದೆ ಓದಿ

ಸ್ಯಾಂಟೋ ಡೊಮಿಂಗೊನಲ್ಲಿ ಪೆರುವಿಯನ್ ನಟ ರಿಚರ್ಡ್ ಟೊರೆಸ್ ಅವರು ವಿಭಿನ್ನವಾಗಿ ವಿವಾಹ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೂಲಗಳ ಮಾಹಿತಿ ಪ್ರಕಾರ ನಟ ರಿಚರ್ಡ್ ಅವರು ಮರದ ಜೊತೆ ಮದುವೆಯಾಗಿ ಜನರನ್ನು ಜಾಗೃತಿ ಮೂಡಿಸಲು ಯತ್ನ ನಡೆಸಿದ್ದಾರೆ. ಮರಗಳ ನಾಶ ತಪ್ಪಿಸಲು ರಿಚರ್ಡ್ ಈ ಕೆಲಸ ಮಾಡ್ತಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

 

 

ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ರಿಚರ್ಡ್ ಅವರು ಮರಗಳ ಮದುವೆ ಆಗುತ್ತಿರುವುದು ಇದೆ ಮೊದಲೇನಲ್ಲ. ಇದಕ್ಕೂ ಮೊದಲು ಕೊಲೊಂಬೊ, ಅರ್ಜೆಂಟೀನಾ, ಮೆಕ್ಸಿಕೋ, ಚಿಲಿ, ಕ್ಯೂಬಾ ಸೇರಿದಂತೆ ಅನೇಕ ಕಡೆ ಸುಮಾರು 17 ಮರಗಳನ್ನು ಮದುವೆ ಆಗಿದ್ದಾರೆ ಎಂದು ತಿಳಿದು ಬಂದಿದೆ. 17 ಮರಗಳ ಮದುವೆ ಆಗಿರುವ ರಿಚರ್ಡ್ ಅವರು 100 ಮರಗಳ ಮದುವೆ ಆಗುವ ಗುರಿ ಹೊಂದಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಕೊಲಂಬಸ್ ಪಾರ್ಕ್ ನಲ್ಲಿ ಇರುವ ಮರದ ಜೊತೆಗೆ ಇವರು ಮದುವೆಯಾದರು. ಈ ವೇಳೆ ಮರದ ಬಳಿ ಉಂಗುರವನ್ನಿಟ್ಟು ಸಂಪ್ರಾಯವಾಗಿ ಮದುವೆ ಕಾರ್ಯ ನಡೆಯಿತು. ಈ ವೇಳೆ ಅವರ ಅಪಾರ ಅಭಿಮಾನಿಗಳು ಹಾಜರಿದ್ದರು.

ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಹೆಸರಿನಲ್ಲಿ ಮರಗಳನ್ನು ಕಡೆಯುತ್ತಿದ್ದಾರೆ. ಹಾಗಾಗಿ ರಿಚರ್ಡ್ ಅವರು ಮರಗಳನ್ನು ಮದುವೆ ಆಗಿ ಮರ ಉಳಿಸುವ ಆಂದೋಲನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಆಂದೋಲನವು ಎಲ್ಲರಿಗೂ ಸ್ಫೂರ್ತಿಯಾಗಿ ಮರಗಳನ್ನು ಉಳಿಸೋಣ. ಮರಗಳು ಉಳಿದರೆ ಮಾತ್ರ ಮಳೆ ಬೆಳೆ ಎಲ್ಲ ಚೆನ್ನಾಗಿ ಆಗೋದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top