ಸಮಾಚಾರ

ಶೌಚಲಯಕ್ಕೆ ಹೋದ ಹುಡುಗನ ಕೈ ಸಿಕ್ಕಿ ಹಾಕಿಕೊಂಡಿದ್ದೆಲ್ಲಿ ಗೊತ್ತಾ

ಈಗ ಎಲ್ಲರ ಕೈನಲ್ಲಿ ಮೊಬೈಲ್ ರಾರಾಜಿಸುತ್ತಿವೆ ಎಲ್ಲಿ ಹೋದರು ಕೂಡ ಕೈನಲ್ಲಿ ಮೊಬೈಲ್ ಹಿಡಿದುಕೊಂಡೆ ಹೋಗುತ್ತಾರೆ. ಕೆಲವರಂತೂ ಟಾಯ್ಲೆಟ್ ಗೆ ಹೋದರು ಕೂಡ ಕೈನಲ್ಲಿ ಮೊಬೈಲ್ ಇಟ್ಕೊಂಡು ಹೋಗ್ತಾರೆ. ಹೀಗೆ ಕೈನಲ್ಲಿ ಮೊಬೈಲ್ ಇಟ್ಕೊಂಡು ಟಾಯ್ಲೆಟ್ ಗೆ ಹೋಗಿದ್ದ ಯುವಕನೊಬ್ಬ ದೊಡ್ಡ ಅವಾಂತರ ಮಾಡಿಕೊಂಡಿದ್ದಾನೆ, ಮುಂದೆ ಓದಿ.

ಪಿಯುಸಿ ಮುಗಿಸಿರುವ ಉತ್ತರ ಪ್ರದೇಶ ಮೂಲದ ಯುವಕ ರೋಹಿತ್‌ ರಾಜ್‌ ಭರ್‌, ಮುಂಬೈನಲ್ಲಿನ ತನ್ನ ಅಂಕಲ್‌ ಲಾಲ್‌ಮಣಿ ತ್ರಿಮುರತ್‌ ವರ್ಮ ಮನೆಗೆ ಬಂದಿದ್ದ. ರೋಹಿತ್ ರಾಜ್ ಭರ್ ಟಾಯ್ಲೆಟ್ ಗೆ ಮೊಬೈಲ್ ಹಿಡ್ಕೊಂಡು ಹೋಗಿದ್ದಾನೆ . ಏನೋ ಮಾಡಲು ಹೋಗಿ ಕೈಜಾರಿ ಮೊಬೈಲ್ ಬಿದ್ದು ಕಮೋಡ್ ಒಳಗೆ ಹೋಗಿದೆ. 13 ಸಾವಿರ ರೂಪಾಯಿ ಮೊಬೈಲ್ ಹುಡುಕಲು ಒಂದು ಕೈ ನೋಡಿಯೇ ಬಿಡೋಣ ಎಂದು ಟಾಯ್ಲೆಟ್ ಕಮೋಡ್ ಒಳಗೆ ಕೈ ಹಾಕಿ ಹುಡುಕಲು ಶುರು ಮಾಡಿದ್ದಾನೆ.

 

 

ಕಮೋಡ್ ಒಳಗೆ ಮೊಬೈಲ್ ಸಿಕ್ಕಿಲ್ಲ ಕೂಡಲೇ ಕೈ ಹೊರಗೆ ತೆಗೆಯಲು ಪ್ರಯತ್ನ ಮಾಡಿದ್ದಾನೆ ಆದರೆ ಆತನ ಕೈ ಕಮೋಡ್ ನಲ್ಲಿ ಸಿಕ್ಕಿಹಾಕಿಕೊಂಡಿದೆ. ಯುವಕ ಎಷ್ಟೇ ಹರಸಾಹಸ ಮಾಡಿದರು ಕೈ ಹೊರಗೆ ತೆಗೆಯಲು ಸಾಧ್ಯವಾಗಿಲ್ಲ. ಸಹಾಯಕ್ಕಾಗಿ ಮನೆಯವರನ್ನು ಕೂಗಿದ್ದಾನೆ ಕೂಡಲೇ ಆತನ ಅಂಕಲ್ ಸಹಾಯಕ್ಕೆ ಧಾವಿಸಿದ್ದರು. ಆದರೆ ಇವರಿಂದ ಕೂಡ ಆತನ ಕೈ ಹೊರಗೆಳೆಯಲು ಸಾಧ್ಯವಾಗಲಿಲ್ಲ. ಬಳಿಕ ಅಕ್ಕ ಪಕ್ಕದ ಫ್ಲಾಟ್ ನವರಿಂದಲೂ ಕೂಡ ಸಾಧ್ಯವಾಗಿಲ್ಲ.

ಅಗ್ನಿಶಾಮಕ ಸಿಬ್ಬಂದಿಯ ಸಹಾಯ ಯಾಚಿಸಿದ್ದಾರೆ, ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಕಮೋಡ್ ಒಡೆದು ಯುವಕನನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಆತನ 13 ಸಾವಿರ ಮೊಬೈಲ್ ಮಾತ್ರ ಸಿಕ್ಕಿಲ್ಲ. ಮೊಬೈಲ್ ಹೋದ್ರೆ ಹೋಗಲಿ ಕೈ ಉಳಿತಲ್ಲಾ ಅಷ್ಟೇ ಸಾಕು ಅಂತಿದ್ದಾನೆ ಯುವಕ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top