ಮನೋರಂಜನೆ

ಬಿಡುಗಡೆಯಾದ ಸ್ವಲ್ಪ ಹೊತ್ತಿನಲ್ಲೇ ಧೂಳೆಬ್ಬಿಸಿದ ‘ಸೈರಾ ರೆಡ್ಡಿ’ ಟೀಸರ್.

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅವರ ನೂರಾ ಐವತ್ತೊಂದನೇ ಸಿನಿಮಾವಾದ ಸೈರಾ ನರಸಿಂಹ ರೆಡ್ಡಿ ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ನಾಳೆ (ಆ.22)ಕ್ಕೆ ಚಿರಂಜೀವಿ ಅವರ ಹುಟ್ಟುಹಬ್ಬವಿದ್ದು, ಅದಕ್ಕೆ ವಿಶೇಷ ಉಡುಗೊರೆಯಾಗಿ ಮಗ ರಾಮ್​ಚರಣ್​ ಈ ಟೀಸರ್ ಅನ್ನು​ ಬಿಡುಗಡೆ ಮಾಡಿದ್ದಾರೆ.

 

 

ಯೂಟ್ಯೂಬ್ ನಲ್ಲಿ ಬಿಡುಗಡೆಯಾದ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಲಕ್ಷಕ್ಕಿಂತ ವೀವ್ಸ್ ಪಡೆದುಕೊಂಡಿರುವ ಸೈರಾ ರೆಡ್ಡಿಯ ಟೀಸರ್ ಟಾಲಿವುಡ್ ಸೇರಿದಂತೆ ದಕ್ಷಿಣ ಭಾರತೀಯ ಸಿನಿವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಚಿತ್ರದ ಮೇಕಿಂಗ್, ಗ್ರಾಫಿಕ್ಸ್ ಮತ್ತು ತಾಂತ್ರಿಕತೆ ಅದ್ದೊರಿಯಾಗಿ ಮೂಡಿಬಂದಿರುವುದು ಟೀಸರ್ ನಲ್ಲಿ ಕಾಣಿಸುತ್ತಿದೆ. ಇನ್ನು ಮೆಗಾಸ್ಟಾರ್ ಚಿರಂಜೀವಿ ಅವರಂತೂ ಹಿಂದೆಂದೂ ಕಾಣಿಸಿದ ರೀತಿಯ ಅಗ್ರೆಶನ್ ಲುಕ್ ನಲ್ಲಿ ಅಬ್ಬರಿಸಿದ್ದಾರೆ.

 

 

ಅಂದಹಾಗೆ ಈ ಚಿತ್ರವನ್ನು ಚಿರಂಜೀವಿ ಅವರ ಮಗ ರಾಮ್ ಚರಣ್ ಅವರೇ ನಿರ್ಮಾಣ ಮಾಡುತ್ತಿದ್ದು ಖ್ಯಾತ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ನಟರದ್ದೊಂದು ಮಹಾ ಸಂಗಮವಾಗಲಿರೋದು ಅಸಲೀ ಕುತೂಹಲ! ಬೇರೆ ಭಾಷೆಗಳ ಸ್ಟಾರ್ ನಟರು ಇದರಲ್ಲಿ ನಟಿಸುತ್ತಿರೋದು ಪ್ರೇಕ್ಷಕರನ್ನು ಮತ್ತಷ್ಟು ಕುತೂಹಲಕ್ಕೀಡು ಮಾಡಿದೆ. ಚಿರಂಜೀವಿ ಜೊತೆಗೆ, ಕಿಚ್ಚ ಸುದೀಪ್, ಅಮಿತಾಬ್ ಬಚ್ಚನ್, ವಿಜಯ್ ಸೇತುಪತಿ, ನಯನತಾರ ಮುಂತಾದವರು ನಟಿಸುತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top