fbpx
ದೇವರು

ಕರ್ನಾಟಕದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಅನೇಕ ರಹಸ್ಯಗಳನ್ನು ತನ್ನ ಒಡಲಿನಲ್ಲಿ ಬಚ್ಚಿಟ್ಟು ಕೊಂಡಿರುವ ಈ ಬೆಟ್ಟದ ಬಗ್ಗೆ ಗೊತ್ತಾದ್ರೆ ಖಂಡಿತಾ ಆಶ್ಚರ್ಯ ಪಡ್ತಿರಾ

ಶಿವಗಂಗೆ ಬೆಟ್ಟದ ಶಿವಪ್ಪನ ಮಹಿಮೆ.
ನಮ್ಮ ಕರ್ನಾಟಕದಲ್ಲಿದೆ ಒಂದು ವಿಸ್ಮಯಕಾರಿ ಬೆಟ್ಟ , ಇಲ್ಲಿನ ರಹಸ್ಯಗಳನ್ನು ಬೇಧಿಸುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಇದು ಈ ದೇಗುಲದಲ್ಲಿನ ಅಥವಾ ವಿಜ್ಞಾನದ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಚಮತ್ಕಾರಿ ಬೆಟ್ಟವೊಂದು ನಮ್ಮ ಕರ್ನಾಟಕದಲ್ಲಿ ಇದೆ. ಈ ಬೆಟ್ಟ ಹಲವು ರಹಸ್ಯಗಳನ್ನು ತನ್ನ ಒಡಲಿನಲ್ಲಿ ಮುಳುಗಿಸಿ ಕೊಂಡಿದೆ.ಇಲ್ಲಿರುವ ವಿಸ್ಮಯಗಳನ್ನು ಕಂಡುಬರುವ ವಿಜ್ಞಾನಿಗಳು ಕಂಡು ಸುಸ್ತಾಗಿ ಹೋಗಿದ್ದಾರೆ .

ನಿಸರ್ಗ ನಿರ್ಮಿತ ಸುಂದರ ಮನೋಹರ ತಾಣ ಶಿವಗಂಗೆ. ಇದು ಇಂದೂ ಧರ್ಮದ ಇತಿಹಾಸ, ಸಂಸ್ಕೃತಿಗಳ , ಸಂಗಮ ಬೃಹದಾಕಾರವಾದ ಏಕಶಿಲಾ ಬೆಟ್ಟ. ಇದು ಕರ್ನಾಟಕದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕ್ಷೇತ್ರ . ಇದೇ ಪುರಾಣ ಪ್ರಸಿದ್ಧ ಶಿವಗಂಗೆ ಬೆಟ್ಟ, ಬೆಂಗಳೂರಿನಿಂದ ಪಶ್ಚಿಮದತ್ತ ನೋಡಿದರೆ ಎತ್ತರದ ಒಂದು ಬೆಟ್ಟ ಆಗಸಕ್ಕೆ ಮುತ್ತಿಡುವ ರೀತಿಯಲ್ಲಿ ಭಾಸವಾಗುತ್ತದೆ. ಅದೇ ಶಿವಗಂಗೆ ಬೆಟ್ಟ. ಈ ಪರ್ವತ ಶಿಖರ ಶಿವಲಿಂಗದ ಆಕಾರದಲ್ಲಿದೆ. ಈ ಪರ್ವತ ಶಿಖರದ ಮೇಲಿಂದ ಕೆಳಗೆ ಪರ್ವತದ ಜಲದ ಆಕಾರವಾಗಿ ಬೀಳುವ ಹಾಗೆ ಪರ್ವತ ಶಿಖರವನ್ನು ಶಿವಗಂಗೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಬೆಂಗಳೂರು – ತುಮಕೂರು ಮಧ್ಯದಲ್ಲಿರುವ ದಾಬಸ್ ಪೇಟೆಯಿಂದ ಕೇವಲ ಆರು ಕಿಲೋ ಮೀಟರ್ ದೂರದಲ್ಲಿದೆ ಈ ದಿವ್ಯ ಕ್ಷೇತ್ರ. ಇದು ಬೆಂಗಳೂರಿನ ಹೆಬ್ಬಾಗಿಲು ಕೂಡ ಹೌದು.

ಭಾರತದ ಪ್ರತಿಯೊಂದು ಕ್ಷೇತ್ರದ ಕ್ಷೇತ್ರಗಳಲ್ಲೂ ವಿಜ್ಞಾನಕ್ಕೆ ಸವಾಲೊಡ್ಡುವ ನಿಗೂಢತೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಸಾಕಷ್ಟು ದೇವಾಲಯಗಳು ಇವೆ. ಹೀಗೆ ವಿಜ್ಞಾನಕ್ಕೇ ಸವಾಲಾಗಿರುವ ದೇವಾಲಯಗಳಲ್ಲಿ ತುಮಕೂರು ಬಳಿಯ ಶಿವಗಂಗೆಯ ಗಂಗಾದರೇಶ್ವರ ದೇಗುಲ ಕೂಡ ಒಂದು. ಪುರಾಣ ಪ್ರಸಿದ್ಧ ಶಿವಗಂಗೆ ಬೆಟ್ಟ ಸರಿ ಸುಮಾರು 1500 ವರ್ಷಗಳಷ್ಟು ಪುರಾತನವಾದುದು. ಬೆಟ್ಟ ಸಮುದ್ರ ಮಟ್ಟದಿಂದ 4,800 ಅಡಿ ಎತ್ತರವಿದೆ. ಶಿವಗಂಗೆ ಬೆಟ್ಟ ಹಲವು ಕೌತುಕಗಳ ತಾಣ. ಇಲ್ಲಿನ ಒಂದೊಂದು ವಿಸ್ಮಯಗಳು ನಮ್ಮೆಲ್ಲರನ್ನು ಕುತೂಹಲ ಗೊಳಿಸುತ್ತವೆ. ಮಾನವರು ಸಾಂಕೇತಿಕವಾಗಿ ಎಷ್ಟೇ ಎತ್ತರದಲ್ಲಿ ಇದ್ದರೂ ಕೆಲವೊಂದು ವಿಷಯಗಳಲ್ಲಿ ಸೋಲು ಉಂಟಾಗುವುದು ಸಾಮಾನ್ಯ. ಇದಕ್ಕೆ ಶಿವಗಂಗೆಯ ಬೆಟ್ಟ ಒಂದು ಪ್ರತ್ಯಕ್ಷ ನಿದರ್ಶನ. ಶಿವಗಂಗೆಯ ಬೃಹತ್ ಪರ್ವತ ಶಿಖರದ ಮೇಲಿರುವ ದೇವಾಲಯದ ರಹಸ್ಯವನ್ನು ಬೇಧಿಸುವುದಕ್ಕೆ ಹಲವಾರು ವರ್ಷಗಳಿಂದ ಪ್ರಯತ್ನಗಳು ನಡೆಯುತ್ತಾ ಇವೆ. ಆದರೆ ಅವುಗಳನ್ನು ಭೇದಿಸುವುದಕ್ಕೆ ಇದುವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ. ಇಲ್ಲಿ ನಡೆಯುವ ವಿಸ್ಮಯಕಾರಿ ಸಂಗತಿಗಳು ಪರಮೇಶ್ವರನ ಲೀಲೆ ಎನ್ನುತ್ತಾರೆ ಧಾರ್ಮಿಕ ಶಾಸ್ತ್ರಕಾರರು .

ಶಿವಗಂಗೆ ಬೆಟ್ಟದಲ್ಲಿ ನಡೆಯುವ ವಿಸ್ಮಯಗಳೇನು ? ಶಿವಗಂಗೆ ಬೆಟ್ಟ ವಿಜ್ಞಾನಿಗಳಿಗೆ ಸವಾಲಾಗಿದೆ ಯಾಕೆ ? ಇಲ್ಲಿ ನೆಲೆಸಿರುವ ಗಂಗಾಧರೇಶ್ವರನ ಮಹಿಮೆ ಎಂತದ್ದು ? ಶಿವಗಂಗೆ ಬೆಟ್ಟ ಯಾಕೆ ಇಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದೆ ? ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

 

 

 

ಈ ಬೆಟ್ಟ ಒಂದೊಂದು ದಿಕ್ಕಿನಿಂದ ಒಂದೊಂದು ಆಕಾರದಲ್ಲಿ ಕಾಣುತ್ತದೆ . ಈ ಬೆಟ್ಟವನ್ನು ಉತ್ತರ ದಿಕ್ಕಿನಿಂದ ನೋಡಿದರೆ ಸರ್ಪದಂತೆ , ದಕ್ಷಿಣದ ದಿಕ್ಕಿನಿಂದ ಗಣೇಶನಂತೆ, ಪೂರ್ವದಿಂದ ನಂದಿಯಂತೆ ಹಾಗೂ ಪಶ್ಚಿಮದಿಂದ ಶಿವಲಿಂಗದಂತೆ ಗೋಚರವಾಗುತ್ತದೆ. ಶಿವಗಂಗೆಯ ಪ್ರಸ್ತಾಪ ಹಲವು ಪುರಾಣ ಕಥೆಗಳಲ್ಲಿ ಗುರುಚರಿತ್ರೆಯಲ್ಲಿ ಉಲ್ಲೇಖವಿದೆ. ಈ ಬೆಟ್ಟದಲ್ಲಿರುವ ಗಂಗಾಧರೇಶ್ವರ ದೇವಾಲಯವನ್ನು ಮಣ್ಣು , ಇಟ್ಟಿಗೆಗಳನ್ನು ಜೋಡಿಸಿ ಕಟ್ಟಿರುವುದಲ್ಲ. ಪ್ರಕೃತಿಯಲ್ಲಿಯೇ ಬೆಳೆದು ನಿಂತ ಹೆಬ್ಬಂಡೆಗಳಲ್ಲಿ ನಿರ್ಮಾಣಗೊಂಡಿದೆ. ಆ ಮೂಲಕ ನೋಡುಗರನ್ನು ಆಶ್ಚರ್ಯಕ್ಕೆ ತಳ್ಳುತ್ತದೆ.ಹೊಯ್ಸಳರ ಕಾಲದ ವಿಷ್ಣುವರ್ಧನ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ ಮತ್ತೆ ಒಮ್ಮೆ ಬೆಂಗಳೂರಿನ ನಾಡಪ್ರಭು ಕೆಂಪೇಗೌಡರ ಕನಸಿನಲ್ಲಿ ಬಂದನಂತೆ ಶಿವ. ಹೀಗಾಗಿ ಈ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿ ಕೆಂಪೇಗೌಡರು ಅಭಿವೃದ್ಧಿಪಡಿಸಿದರು ಎಂದು ಹೇಳಲಾಗುತ್ತದೆ.
ಬೆಣ್ಣೆಯನ್ನು ಹದವಾಗಿ ಕಾಯಿಸಿ ತುಪ್ಪ ಮಾಡುವುದು ನಮಗೆಲ್ಲ ಗೊತ್ತಿರುವ ವಿಚಾರ. ಆದರೆ ಈ ಮಹಿಮಾನ್ವಿತ ಶಿವಲಿಂಗದ ಮೇಲೆ ತುಪ್ಪವನ್ನು ಹಾಕಿ ಉಜ್ಜಿದರೆ ಬೆಣ್ಣೆಯಾಗುತ್ತದೆ .
ಬೆಣ್ಣೆ ತುಪ್ಪ ಆಗುವುದು ಸಹಜ ಪ್ರಕ್ರಿಯೆ.ಆದರೆ ಇಲ್ಲಿ ತುಪ್ಪ ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ. ಈ ಚಮತ್ಕಾರ ಎಲ್ಲಾದರೂ ನೋಡಿದ್ದೀರಾ ? ವಿಜ್ಞಾನಕ್ಕೆ ಸವಾಲಾಗಿದೆ. ಈ ಶಿವಲಿಂಗದ ವಿಸ್ಮಯ ಮತ್ತು ಈ ಲಿಂಗದ ವಿಶೇಷತೆ ಒಂದು ಎರಡಲ್ಲ , ಇಲ್ಲಿನ ಕಣಕಣದಲ್ಲೂ ಶಿವನು ಇದ್ದಾನೆ. ಶಿವನ ಮಾಯೆಯನ್ನು ಸಾರಿಸಾರಿ ಹೇಳುತ್ತವೆ. ಈ ಪವಿತ್ರ ಪುಣ್ಯ ಸ್ಥಳದಲ್ಲಿ ಇರುವ ಶಿವಲಿಂಗ ವಿಜ್ಞಾನಿಗಳ ಪಾಲಿಗೆ ದೊಡ್ಡ ಸವಾಲಾಗಿದೆ . ಶಿವಗಂಗೆಯಲ್ಲಿ ಶಿವ ಗವಿಗಂಗಾಧರೇಶ್ವರನಾಗಿ ತನ್ನ ಮಹಿಮೆಯನ್ನು ತೋರಿಸುತ್ತಿದ್ದಾನೆ.

ಇದು ಸ್ವಯಂಭು ಶಿವಲಿಂಗ. ತುಪ್ಪವನ್ನು ಶಿವಲಿಂಗಕ್ಕೆ ಹಚ್ಚಿದಾಗ ಅದು ಬೆಣ್ಣೆಯಾಗಿ ಪರಿವರ್ತನೆಯಾಗುತ್ತದೆ.ಇದು ವಿಜ್ಞಾನಕ್ಕೆ ಇನ್ನೂ ಕೂಡಾ ಸವಾಲಾಗಿ ಉಳಿದಿದೆ . ಇದೇ ರೀತಿ ಪ್ರತಿನಿತ್ಯ ಪವಾಡ ನಡೆಯುತ್ತದೆ. ಬೆಣ್ಣೆಯಿಂದ ತುಪ್ಪ ಮಾಡುವುದು ಸಹಜ ಪ್ರಕ್ರಿಯೆ. ಆದರೆ ತುಪ್ಪದಿಂದ ಬೆಣ್ಣೆ ಬರುತ್ತದೆ ಎಂದರೆ ಅದು ವಿಸ್ಮಯವೇ ಅಲ್ಲವೇ ?
ಇಲ್ಲಿ ನೀಡುವ ಬೆಣ್ಣೆಯನ್ನು ನೀವು ಮನೆಗೆ ತೆಗೆದುಕೊಂಡು ಹೋಗಿ ಕಾಯಿಸಿದರೆ ಅದು ತುಪ್ಪವಾಗುತ್ತದೆ . ಬೆಣ್ಣೆಯನ್ನು ಕಣ್ಣಿಗೆ ಹಚ್ಚಿದರೆ ಕಣ್ಣಿನ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಶಿವಲಿಂಗದ ಮೇಲೆ ತುಪ್ಪ ಸವರಿದರೆ ಅದು ಬೆಣ್ಣೆಯಾಗಿ ಆಗುವುದಕ್ಕೆ ಕಾರಣ ಏನು ? ಎಂದು ತಿಳಿದುಕೊಳ್ಳುವುದಕ್ಕೆ ಅನೇಕ ಸಂಶೋಧನೆಗಳು ನಡೆದಿವೆ. ಆದರೆ ಇದುವರೆಗೂ ಯಾವುದೇ ನಿಖರ ಉತ್ತರ ಸಿಕ್ಕಿಲ್ಲ. ಗಂಗಾಧರೇಶ್ವರನಿಗೆ ಪ್ರತಿನಿತ್ಯ ಪೂಜೆ, ಪುನಸ್ಕಾರ ,ಅಭಿಷೇಕಗಳು ನಡೆಯುತ್ತವೆ. ಅದರಲ್ಲೂ ಸಂಕ್ರಾಂತಿ ಮತ್ತು ಶಿವರಾತ್ರಿ ಹಬ್ಬಗಳಲ್ಲಿ ಶಿವನ ಅಲಂಕಾರ ಮತ್ತು ಪೂಜೆ ತುಂಬಾ ವಿಶೇಷವಾಗಿರುತ್ತದೆ. ಈ ವೇಳೆ ಸರ್ವಾಲಂಕಾರದಿಂದ ಅಲಂಕಾರಗೊಂಡಿರುವ ಶಿವನನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲುವುದಿಲ್ಲ.
ಇಲ್ಲಿ ಶಿವನಿಗೂ ಹೊನ್ನಾದೇವಿಗೂ ವಿವಾಹ ಮಹೋತ್ಸವ ಜರುಗಿಸಲಾಗುತ್ತದೆ.

ಇಲ್ಲಿರುವ ಗವಿಯಲ್ಲಿ ಹೊನ್ನಾದೇವಿಯ ದೇಗುಲವಿದೆ. ಇಲ್ಲಿಯೇ ಶಿವನ ಪತ್ನಿಯೂ ಸಹ ನೆಲೆಸಿದ್ದಾಳೆ. ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ದಿನ ಗಂಗಾಧರೇಶ್ವರ ಮತ್ತು ಹೊನ್ನಾದೇವಿಗೆ ವಿವಾಹ ಮಹೋತ್ಸವ ನಡೆಯುತ್ತದೆ . ಸಂಕ್ರಾಂತಿ ಹಬ್ಬದಂದು ಮುಂಜಾನೆ ಬೆಟ್ಟದ ಮೇಲಿನ ಕಲ್ಲಿನಿಂದ ಗಂಗಾಜಲ ಹೊರಹೊಮ್ಮುತ್ತದೆ . ಅದೇ ಜಲವನ್ನು ವಾದ್ಯಗೋಷ್ಠಿಯ ಸಹಿತ ದೇವರ ಸನ್ನಿಧಾನಕ್ಕೆ ತರಲಾಗುತ್ತದೆ. ನಂತರ ಹೊನ್ನಾದೇವಿಯನ್ನು ಗಂಗಾಧರೇಶ್ವರನಿಗೆ ಧಾರೆ ಎರೆದು ಕೊಡಲಾಗುತ್ತದೆ .ಈ ಅಪರೂಪದ ಉತ್ಸವವನ್ನು ನೋಡುವುದಕ್ಕೆ ದೇಶದ ನಾನಾ ಮೂಲೆಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಶಿವಗಂಗೆ ಬೆಟ್ಟದ ಮತ್ತೊಂದು ಆಕರ್ಷಣೆ ಎಂದರೆ ಇಲ್ಲಿರುವ ಒಳಕಲ್ಲು ತೀರ್ಥ.
ಒಳಕಲ್ಲಿನ ಆಕಾರದಲ್ಲಿರುವ ಇಲ್ಲಿನ ಕಲ್ಲಿನ ಒಳಗೆ ಕೈ ಹಾಕಿದರೆ ನೀರು ಸಿಗುತ್ತದೆ. ಈ ನೀರನ್ನು ಪವಿತ್ರ ತೀರ್ಥವನ್ನಾಗಿ ಭಕ್ತರು ಭಾವಿಸುತ್ತಾರೆ. ಇಲ್ಲಿ ನೀರು ಅಷ್ಟು ಸುಲಭವಾಗಿ ಎಲ್ಲರ ಕೈಗೆ ಎಟಕುವುದಿಲ್ಲ. ಪುಣ್ಯವಂತರಿಗೆ ಮಾತ್ರ ಇಲ್ಲಿ ನೀರು ಸುಲಭವಾಗಿ ಕೈಗೆಟಕುತ್ತದೆ ಎನ್ನುವ ನಂಬಿಕೆ ಇದೆ. ಒಳಕಲ್ಲು ತೀರ್ಥದ ನೀರನ್ನು ಸೇವಿಸಿದರೆ ಪಾಪ ಪರಿಹಾರವಾಗುತ್ತದೆ. ಕಷ್ಟಗಳು ದೂರವಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಒಳಕಲ್ಲಿನಲ್ಲಿರುವ ಗಂಗೆ ತೀರ್ಥವೆಂದು. ಇಲ್ಲಿರುವ ವೀರಭದ್ರ ಬೆಂಕಿಯ ಅವತಾರವೆಂದು ನಂಬಲಾಗುತ್ತದೆ. ಮನುಷ್ಯನ ಬದುಕಿನ ಬೆಂಕಿಯಂತಹ ಕಷ್ಟಗಳನ್ನು ಈ ಗಂಗೆ ಪರಿಹರಿಸುತ್ತಾಳೆ ಎನ್ನುವ ನಂಬಿಕೆ ಕೂಡ ಇಲ್ಲಿಗೆ ಬರುವ ಭಕ್ತರಲ್ಲಿ ಅಚಲವಾಗಿದೆ .

 

 

 

ಇಲ್ಲಿರುವ ಪಾತಳ ಗಂಗೆಯಲ್ಲಿ ಮಳೆಗಾಲದಲ್ಲಿ ನೀರು ಕಡಿಮೆಯಾಗಿ ಬೇಸಿಗೆ ಕಾಲದಲ್ಲಿ ನೀರು ಉಕ್ಕುತ್ತದೆ.
ಯಾವುದೇ ಕೆರೆಕಟ್ಟೆ ಕಲ್ಯಾಣಿಯಾಗಲಿ ಮಳೆಗಾಲ ಬಂತು ಎಂದರೆ ನೀರು ಹೆಚ್ಚಾಗುವುದನ್ನು ಮತ್ತು ತುಂಬುವುದನ್ನು ನಾವು ನೋಡಿದ್ದೇವೆ. ಆದರೆ ಶಿವಗಂಗೆಯಲ್ಲಿ ಇರುವ ಪಾತಾಳಗಂಗೆ ಸ್ವಲ್ಪ ವಿಭಿನ್ನ. ಯಾಕೆಂದರೆ ಮಳೆಗಾಲ ಬಂತು ಎಂದರೆ ನೀರಿನ ಮಟ್ಟ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಗಂಗೆ ಉಕ್ಕಿ ಹರಿಯುತ್ತಾಳೆ.ಈ ಬಸವನಿಗೆ ಒಂದು ಪ್ರದಕ್ಷಿಣೆ ಹಾಕಿದರೆ ವಿಶ್ವ ಪರ್ಯಟನೆ ಮಾಡಿದಷ್ಟೇ ಭಾಗ್ಯ. ಗಂಗಾಧರೇಶ್ವರನ ದೇವಾಲಯದ ಬಾಗಿಲ ಮೇಲೆ ಕೆತ್ತಿರುವ ಕೆತ್ತನೆಗಳು ಅದ್ಭುತವಾಗಿವೆ. ಈ ಕಲಾಕೃತಿಗಳು ಗತಕಾಲದ ವೈಭವವನ್ನು ಸಾರಿ ಹೇಳುತ್ತವೆ. ದೇವಾಲಯದಲ್ಲಿರುವ ಹಲವು ಮೂರ್ತಿಗಳನ್ನು ಜಕಣಾಚಾರಿ ಕೆತ್ತಿರುವುದು ಎಂದು ಹೇಳಲಾಗುತ್ತದೆ . ಈ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆ ಕೆಲವು ಮೆಟ್ಟಿಲುಗಳು ಕಾಣಿಸುತ್ತವೆ .ಅದರಲ್ಲಿ ಗವಿ ಒಳಗೆ ಹೋದರೆ ನಮಗೆ ಪಾತಾಳಗಂಗೆಯ ದರ್ಶನವಾಗುತ್ತದೆ ಈ ಕ್ಷೇತ್ರದಲ್ಲಿರುವ ಪಾತಾಳಗಂಗೆಯ ಮಹಿಮೆ ಅಪಾರ. ಪಾತಾಳ ಗಂಗೆಯ ವಿಶೇಷತೆ ಏನು ? ಎಂದರೆ ಮಳೆಗಾಲದಲ್ಲಿ ಇಲ್ಲಿರುವ ನೀರು ಸಂಪೂರ್ಣವಾಗಿ ಬತ್ತಿ ಹೋಗುತ್ತದೆ. ಬೇಸಿಗೆಯ ಕಾಲದಲ್ಲಿ ಜಲಧಾರೆ ಉಕ್ಕಿ ಹರಿಯುತ್ತದೆ. ಪಾತಾಳಗಂಗೆಯ ಈ ತೀರ್ಥವನ್ನು ಪ್ರೋಕ್ಷಣೆ ಮಾಡಿಕೊಂಡರೆ ಚರ್ಮಗಳು ವಾಸಿಯಾಗುತ್ತವೆ ಎನ್ನುವ ನಂಬಿಕೆ ಇಲ್ಲಿದೆ. ಅಷ್ಟೇ ಅಲ್ಲ ಮಕ್ಕಳಾಗದ ದಂಪತಿ ಇಲ್ಲಿಗೆ ಬಂದು ಹರಸಿಕೊಂಡರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಸಹ ಭಕ್ತರಲ್ಲಿದೆ.

ಸಾಮಾನ್ಯವಾಗಿ ನೀವು ಎಲ್ಲಿ ನೋಡಿರಬಹುದು ಗಂಗೆ ಶಿವನ ತಲೆಯ ಮೇಲೆ ಇರುತ್ತಾಳೆ . ಆದರೆ ಇಲ್ಲಿ ಅದಕ್ಕೆ ವಿರುದ್ಧವಾಗಿ ಇದೆ. ಈ ಕ್ಷೇತ್ರದಲ್ಲಿ ಗಂಗೆ ಸದಾ ಶಿವಲಿಂಗದ ಕೆಳಗೆ ಹರಿಯುತ್ತಾಳೆ .ಹೀಗಾಗಿ ಈ ದೇಗುಲ ಎಲ್ಲಾ ಕಾಲದಲ್ಲಿಯೂ ತಂಪಾಗಿಯೇ ಇರುತ್ತದೆ. ಗವಿಗಂಗಾಧರೇಶ್ವರ ದೇಗುಲಕ್ಕೂ ಶಿವಗಂಗೆಗೂ ನಂಟಿದೆ. ಹೇಗೆ ಎಂದರೆ ಭಾರದ್ವಜ ಮಹರ್ಷಿಗಳು ಪ್ರಾತಃಕಾಲದಲ್ಲಿ ಗವಿ ಗಂಗಾಧರನಿಗೆ ಪೂಜೆ ಸಲ್ಲಿಸಿ ಗುಹೆಯ ಮೂಲಕ ಶಿವ ಗಂಗೆಯನ್ನು ತಲುಪುತ್ತಿದ್ದರಂತೆ . ಇಲ್ಲಿ ಮಧ್ಯಾಹ್ನದ ವೇಳೆ ಶಿವನಿಗೆ ಪೂಜೆ ಮಾಡುತ್ತಿದ್ದರಂತೆ. ಈ ಶಿವಗಂಗೆಯ ಬೆಟ್ಟ ಹತ್ತುವುದು ಅಷ್ಟು ಸುಲಭವಲ್ಲ. ಯಾಕೆಂದರೆ ಇಲ್ಲಿ ವ್ಯವಸ್ಥಿತ ಮೆಟ್ಟಿಲುಗಳಿಲ್ಲ, ಕಡಿದಾದ ಮಾರ್ಗದಲ್ಲಿ ಕಷ್ಟಪಟ್ಟು ಸಾಗಿದರೆ ನಿಮಗೆ ದಾರಿಯಲ್ಲಿ ಹಲವು ಕೌತುಕಗಳು ಎದುರಾಗುತ್ತವೆ .
ನಂದಿಯನ್ನು ಪ್ರದಕ್ಷಿಣೆ ಹಾಕಿದರೆ ವಿಶ್ವ ಪರ್ಯಟನೆ ಮಾಡಿದಂತೆ.

ಒಂದು ಬೆಟ್ಟದ ತುದಿಯಲ್ಲಿ ನಂದಿಯ ವಿಗ್ರಹ ಕಾಣ ಸಿಗುತ್ತದೆ. ಈ ನಂದಿಯನ್ನು ಕೋಡುಗಲ್ಲ ಬಸಪ್ಪ, ಸುತ್ತೋ ಬಸಪ್ಪ ಮತ್ತು ಗಿರಿ ಬಸಪ್ಪ ಎನ್ನುವ ಹೆಸರುಗಳಿಂದ ಕರೆಯಲಾಗುತ್ತದೆ. ಬೆಟ್ಟದ ತುದಿಯಲ್ಲಿ ಕಿರಿದಾದ ಪ್ರದೇಶದಲ್ಲಿರುವ ಗಿರಿ ಬಸಪ್ಪನಿಗೆ ಪ್ರದಕ್ಷಿಣೆ ಹಾಕುವುದು ಸುಲಭದ ಮಾತಲ್ಲ . ಹೆಜ್ಜೆಯ ಮೇಲೆ ಹೆಜ್ಜೆಯನ್ನಿಟ್ಟು ಪ್ರದಕ್ಷಿಣೆ ಹಾಕಬೇಕು. ಹೀಗೆ ಈ ಬಸವನಿಗೆ ಒಂದು ಪ್ರದಕ್ಷಿಣೆ ಹಾಕಿದರೆ ವಿಶ್ವ ಪರ್ಯಟನೆ ಮಾಡಿದಷ್ಟು ಪುಣ್ಯ ಲಭಿಸುತ್ತದೆ ಎನ್ನುವ ನಂಬಿಕೆ ಇದೆ.

ಶಾಂತಲಾ ಡ್ರಾಪ್.
ಶಿವಗಂಗೆ ಪ್ರದೇಶ ಹಿಂದೆ ಹೊಯ್ಸಳ ರಾಜ್ಯರ ರಾಜ್ಯವಾಗಿತ್ತು ವಿಷ್ಣುವರ್ಧನನ ಪತ್ನಿ ನಾಟ್ಯರಾಣಿ ಶಾಂತಲಾ ಈ ಪರ್ವತ ಶಿಖರದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಳು ಎಂದು ಹೇಳಲಾಗುತ್ತದೆ. ಮಕ್ಕಳಿಲ್ಲದ ಕಾರಣ ಮನನೊಂದು ಶಾಂತಲಾ ರಾಣಿ ಮೇಲೆ ಎತ್ತರದ ಬೆಟ್ಟದಿಂದ ಹಾರಿ ಪ್ರಾಣ ಬಿಟ್ಟಿದ್ದಳಂತೆ. ಈ ಸ್ಥಳವನ್ನು “ಶಾಂತಲಾ ಡ್ರಾಪ್” ಎಂದು ಕರೆಯಲಾಗುತ್ತದೆ. ಇದು ಬೆಟ್ಟದ ಅತ್ಯಂತ “ಭಯಾನಕ ಸ್ಥಳ”ಎಂದು ಕರೆಯಲಾಗುತ್ತದೆ .

ಆಶ್ಚರ್ಯ ಎಂದರೆ ಬೆಟ್ಟದ ತುದಿಯಲ್ಲಿ ಕಟ್ಟಿರುವ ಗಂಟೆಗಳು.

ಈ ಗಂಟೆಗಳನ್ನು ಕಟ್ಟಿದವರು ಎಂಟೆಡೆಯ ಬಂಟರೇ ಇರಬೇಕು. ಮೊದಲು ಚಿನ್ನದ ಗಂಟೆ ಇತ್ತು ಇಲ್ಲಿ. 25 ವರ್ಷಗಳ ಹಿಂದೆ ಕಳ್ಳರು ಚಿನ್ನದ ಗಂಟೆಗಳನ್ನು ಕದ್ದಿದ್ದಾರೆ ಎಂದು ಹೇಳಲಾಗುತ್ತದೆ.ಈ ಗಂಟೆಗಳ ದರ್ಶನದೊಂದಿಗೆ ಈ ಬೆಟ್ಟದ ಪ್ರವಾಸ ಮುಗಿಯುತ್ತದೆ. ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ಕೊಟ್ಟರೆ ದೇಹಕ್ಕೆ ಆರಾಮದ ಜೊತೆಗೆ ಮನಸ್ಸಿಗೆ ಚೈತನ್ಯ ಸಿಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top