ಸಮಾಚಾರ

ಕೇರಳದ ಪ್ರವಾಹ ಪೀಡಿತರಿಗಾಗಿ ಮಾನವೀಯತೆ ಮೆರೆದ ಪಾಕಿಸ್ತಾನದ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿ.

ಧಾರಾಕಾರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೇರಳ ಅಕ್ಷರಶ ಕಂಗಾಲಾಗಿ ಹೋಗಿದೆ. ಕಳೆದೊಂದು ಶತಮಾನದಲ್ಲಿಯೇ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಕೇರಳದಲ್ಲಿ ಮಳೆರಾಯ ಇನ್ನೂ ಮುಂದುವರೆದಿದ್ದು, ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಕೇರಳದಲ್ಲಿ ಪ್ರಕೃತಿ ಸೃಷ್ಟಿಸಿದ ಈ ದಾರುಣವು ನಮ್ಮ ದೇಶ ಮಾತ್ರವಲ್ಲದೇ ಪ್ರಪಂಚದಾದ್ಯಂತ ಸುದ್ದಿಯಾಗುತ್ತಿದ್ದು ಪ್ರವಾಹ ಪೀಡಿತ ಕೇರಳಕ್ಕೆ ಶಾಹಿದ್ ಅಫ್ರಿದಿ ಪ್ರಾಥಿಸಿದ್ದಾರೆ.

ಕೇರಳದ ಜನತೆಗಾಗಿ ಪ್ರಾರ್ಥಿಸಿರುವ ಶಾಹಿದ್ ಅಫ್ರಿದಿ, ತಮ್ಮ ಫೌಂಡೇಶನ್ ಕಡೆಯಿಂದ ನೆರವು ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಕೇರಳದ ಭಯಾನಕ ಸ್ಥಿತಿಯ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಅಫ್ರಿದಿ ಮನೋವ್ಯಥೆ ವ್ಯಕ್ತಪಡಿಸಿದ್ದಾರೆ..

 

 

“ಕೇರಳದ ಜರುಗುತ್ತಿರುವ ವಿನಾಶಕಾರಿ ಪ್ರವಾಹದಿಂದ ನಾನು ತೀವ್ರವಾಗಿ ದುಃಖಿತನಾಗುತ್ತಾನೆ. ಶಾಹಿದ್ ಅಫ್ರಿದಿ ಫೌಂಡೇಶನ್ ನಿಮ್ಮ ನೋವನ್ನು ಹಂಚಿಕೊಳ್ಳುತ್ತದೆ ಮತ್ತು ಕಷ್ಟದಲ್ಲಿರುವ ನನ್ನ ಸಹೋದರರು ಮತ್ತು ಸಹೋದರಿಯರಿಗೆ ಅಗತ್ಯತೆಗಳನ್ನು ಪೂರೈಸಲು ನಿಲ್ಲುತ್ತದೆ. ಅಲ್ಲಾಹು ನಿಮ್ಮ ನೋವುಗಳನ್ನು ತಗ್ಗಿಸಲಿ ಮತ್ತು ನಿಮ್ಮಗೆ ಬೇಗ ಚೇತರಿಕೆಯನ್ನು ನೀಡಲಿ. ಕೇರಳ ಸಂತ್ರಸ್ತರಿಗೆ ಸಹಾಯ ಮಾಡಿ,, ಮಾನವೀಯತೆಯನ್ನು ಕಳೆದುಕೊಳ್ಳಬೇಡಿ” ಎಡನು ಶಾಹಿದ್ ಅಫ್ರಿದಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ಗೆ ಅನೇಕ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಪಾಕಿಸ್ತಾನಿಯರು ಕೂಡ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.. ಭಾರತ ಮತ್ತು ಪಾಕಿಸ್ತಾನ ಸಾಂಪ್ರದಾಯಕ ಎದುರಾಳಿ ದೇಶಗಳಾಗಿದ್ದರೂ ಮಾನವೀಯತೆ ವಿಚಾರದಲ್ಲಿ ಕೇರಳ ಸಂತ್ರಸ್ತರ ನೆರವಿಗೆ ದಾವಿಸುವುದರ ಮೂಲಕ ಶಾಹಿದ್ ಅಫ್ರಿದಿ ಎಲ್ಲರ ಹೃದಯ ಗೆದ್ದಿದ್ದಾರೆ.

ಕೇರಳ ಪ್ರವಾಹ ಅಪ್ ಡೇಟ್:
ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಕ್ಷಣ ಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ಕೇವಲ 3 ದಿನದಲ್ಲೇ ಮಳೆಯಿಂದಾಗಿ ಬರೊಬ್ಬರಿ 200 ಮಂದಿ ಸಾವಿಗೀಡಾಗಿದ್ದು, ಇದರೊಂದಿಗೆ ಸವಾನಿ ಸಂಖ್ಯೆ 400ಕ್ಕೆ ಏರಿಕೆಯಾಗಿದೆ.ಸುಮಾರು 2 ಲಕ್ಷ ಮಂದಿ ಪ್ರವಾಹ ಸಂತ್ರಸ್ಥರ ಕ್ಯಾಂಪ್ ಗಳಲ್ಲಿದ್ದಾರೆ. ಕೇರಳದ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ರಾಷ್ಟ್ರೀಯ ವಿಪತ್ತು ದಳದ 35 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top