ಸಮಾಚಾರ

ತೆರೆ ಮೇಲೆ ಮತ್ತೆ ಕಾಣಿಸಿಕೊಳ್ಳಲು ರೆಡಿ ಆದ್ರೂ ಸಿಲ್ಕ್ ಸ್ಮಿತಾ ,ಅದು ಹೇಗೆ ಸಾಧ್ಯ ಅಂತೀರಾ ,ನೀವೇ ನೋಡಿ

80ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ದಕ್ಷಿಣ ಭಾರತದ ಐಟಂ ಬಾಂಬ್ ಖ್ಯಾತಿಯ ನಟಿ ಸಿಲ್ಕ್ ಸ್ಮಿತಾ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಸಮಯದಲ್ಲಿ ದಕ್ಷಿಣ ಭಾರತದ ಚಿತ್ರಗಳ ಅವಿಭಾಜ್ಯ ಅಂಗವಾಗಿದ್ದಳು ಈ ನಟಿ. ಸಿಲ್ಕ್ ಸ್ಮಿತಾ ಹೆಜ್ಜೆ ಹಾಕುತ್ತಿದ್ದರೆ ಪಡ್ಡೆಗಳ ಎದೆಯಲ್ಲಿ ಢವ ಢವ ಶುರು ಆಗುತ್ತಿತ್ತು.

ಅನೇಕ ಸೆಲೆಬ್ರಿಟಿಗಳ ಜೀವನಾಧಾರಿತ ಸಿನಿಮಾಗಳು ಈಗಾಗಲೇ ತೆರೆ ಮೇಲೆ ಬಂದಿವೆ ಅಂದಹಾಗೆ ಈಗ ಸಿಲ್ಕ್ ಸ್ಮಿತಾ ಜೀವನಾಧಾರಿತ ಸಿನಿಮಾ ತೆರೆ ಮೇಲೆ ಬರಲಿದೆ ಎಂದು ತಿಳಿದು ಬಂದಿದೆ. ಆದ್ರೆ ಈ ಹಿಂದೆಯೇ ಅವರ ಜೀವನಾಧಾರಿತ ಡರ್ಟಿ ಸಿನೆಮಾ ಬಂದಿತ್ತಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ. ಆದ್ರೆ ಅದ್ರಲ್ಲಿ ಎಲ್ಲವನ್ನೂ ಹೇಳುವುದಕ್ಕೆ ಆಗಿಲ್ಲ. ಎಂಥಾ ದುರಂತಮಯ ಬದುಕನ್ನು ಹೇಳಿ-ಕೇಳಿ ಆಕೆಯದ್ದು ದುರಂತಮಯ ಬದುಕು. ಸದ್ಯ ಡರ್ಟಿ ಸಿನಿಮಾದಲ್ಲಿ ಆಕೆಯ ಜೀವನವನ್ನು ತೋರಿಸಲಿಕ್ಕಾಗಿಲ್ಲ. ಹಾಗಾಗಿಯೇ ಸಿಲ್ಕ್ ಸ್ಮಿತಾ ಅವರ ಬಾಲ್ಯ, ಅವಳ ಫ್ರೆಂಡ್ಸ್​, ಪೋಷಕರ ಪಾತ್ರ ಹೀಗೆ ಇನ್ನಿತರೆ ಬದುಕಿನ ಮಜಲುಗಳನ್ನು ತೋರಿಸಲಿಕ್ಕಾಗಿಯೇ ವೆಬ್​ ಸರಣಿಯನ್ನು ಶುರು ಮಾಡಲಾಗುತ್ತಿದೆಯಂತೆ. ಅಂದಹಾಗೇ ಇಂತಹದ್ದೊಂದು ಕೆಲಸಕ್ಕೆ ಕೈ ಹಾಕಲು ಮನಸ್ಸು ಮಾಡಿದ್ದಾರೆ ನಿರ್ದೇಶಕರು ಪಾ. ರಂಜಿತ್ ಅವರು ಎಂದು ತಿಳಿದು ಬಂದಿದೆ.

 

 

ಈ ವೆಬ್ ಸರಣಿಯನ್ನು ಮಾಡಲು ನಿರ್ದೇಶಕರು ಮುಂಬೈ ಮೂಲದ ಸಿನಿಮಾ ನಿರ್ಮಾಣ ಸಂಸ್ಥೆಯೊಂದರ ಜೊತೆಗೆ ಕೈಜೋಡಿಸಿ ನಿರ್ಮಿಸುತ್ತಿದ್ದಾರೆ ಮೂಲಗಳು ತಿಳಿಸಿವೆ. ಸಂಚಿಕೆಗಳ ಲೆಕ್ಕಾಚಾರದಲ್ಲಿ ಈ ವೆಬ್ ಸೀರೀಸನ್ನು ಪ್ರಸಾರ ಮಾಡುತ್ತಾರೆ ಎಂದು ತಿಳಿದು ಬಂದಿದೆ.

ಸಿಲ್ಕ್ ಸ್ಮಿತಾ ನಿಜಜೀವನವನ್ನು ಸಂಪೂರ್ಣವಾಗಿ ತೆರೆ ಮೇಲೆ ತರುವುದು ಅಸಾಧ್ಯ. ಅದೇ ಕಾರಣಕ್ಕೆ ವೆಬ್ ಸೀರೀಸ್ ರೂಪದಲ್ಲಿ ತೆರೆಗೆ ತರುತ್ತೇವೆ ಪಾ ರಂಜಿತ್ ಹೇಳಿದ್ದಾರೆ. ಸದ್ಯಕ್ಕೆ ತಾರಾಬಳಗ, ತಾಂತ್ರಿಕ ವರ್ಗದ ಆಯ್ಕೆಯಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯದಲ್ಲೆ ವೆಬ್ ಸೀರೀಸ್‌ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸಿಗಲಿದೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top