ಇತರೆ

ದೇವಸ್ಥಾನದಲ್ಲಿ ಪ್ರಸಾದ ಮತ್ತು ಹೂವನ್ನು ತೆಗೆದುಕೊಂಡು ಬಂದ ನಂತರ ತಪ್ಪದೆ ಈ ನಿಯಮಗಳನ್ನೂ ಪಾಲಿಸಿ,ಇದನ್ನು ನಿರ್ಲಕ್ಷಿಸಬೇಡಿ.

ದೇವಸ್ಥಾನದಲ್ಲಿ ಸ್ವೀಕರಿಸಿದ ಕುಂಕುಮ, ಹೂವುಗಳನ್ನು ಮನೆಗೆ ತಂದು ಎಲ್ಲಿ ಅಂದರೆ ಅಲ್ಲಿ ಇಟ್ಟು ಮರೆತು ಹೋಗುತ್ತಿದ್ದೀರ ? ಪ್ರಸಾದವನ್ನು ನಿರ್ಲಕ್ಷಿಸುತ್ತಿದ್ದೀರ ? ದೇವಸ್ಥಾನದಲ್ಲಿ ಸ್ವೀಕರಿಸಿದ ಕುಂಕುಮ, ಹೂವುಗಳನ್ನು ಮನೆಗೆ ತಂದು ಎಲ್ಲಿ ಅಂದರೆ ಅಲ್ಲಿ ಇಟ್ಟು ಮರೆತು ಹೋಗುತ್ತಿದ್ದೀರ ?

ಜಾಗ್ರತೆಯನ್ನು ವಹಿಸಿ ಇಲ್ಲದಿದ್ದರೆ ಇದು ದೋಷವಾಗಿ ಬದಲಾಗಿ, ನಿಮಗೆ ಸಮಸ್ಯೆಗಳನ್ನು ತಂದುಕೊಡುತ್ತದೆ ಎಂದು ಆಧ್ಯಾತ್ಮಿಕ ಗುರುಗಳು,ಪಂಡಿತರು ಮತ್ತು ಪುರಾಣ ಕಥೆಗಳಿಂದಲೂ ಕೂಡ ಸಾಬೀತಾಗಿದೆ.
ದೇವಸ್ಥಾನದಲ್ಲಿ ಭಗವಂತನ ದರ್ಶನ ಪಡೆದು,ಪುರೋಹಿತರು ಕೊಟ್ಟ ತೀರ್ಥ,ಕುಂಕುಮ,ಹೂವು,ಪ್ರಸಾಧವನ್ನು ತಗೆದುಕೊಳ್ಳುತ್ತಾ ಇರುತ್ತೇವೆ. ಪುರೋಹಿತರು ಪೂಜಿಸಿ ಕೊಟ್ಟ ಪವಿತ್ರವಾದ ಪ್ರಸಾದಗಳನ್ನು ಎಲ್ಲಿ ಅಂದರೆ ಅಲ್ಲಿ ಇಟ್ಟು ತುಂಬಾ ಜನರು ಮರೆತು ಹೋಗುತ್ತಾರೆ.ಹೀಗೆ ಮಾಡುವುದರಿಂದ ದೇವರನ್ನು ಅವಮಾನಿಸಿದಂತೆ ಆಗುತ್ತದೆ.
ಇಂತಹ ನಿರ್ಲಕ್ಷ್ಯ ವರ್ತನೆಯಿಂದಲೇ ಸಾಕ್ಷಾತ್ ಇಂದ್ರನು ಸಹ ಎಷ್ಟೋ ಸಮಸ್ಯೆಗಳನ್ನು ತಂದುಕೊಂಡದಿದ್ದಾನೆ .ಒಂದು ಬಾರಿ ದುರ್ವಾಸ ಮುನಿ, ಶ್ರೀ ಮನ್ ನಾರಾಯಣನನ್ನು ದರ್ಶನ ಪಡೆದು ಬರುತ್ತಿರುವಾಗ, ಇಂದ್ರನು ಎದುರು ಬರುತ್ತಾನೆ.

 

 

ಆಗ ದುರ್ವಾಸ ಮುನಿಗೆ ನಾರಾಯಣನು ಕೊಟ್ಟ ಪಾರಿಜಾತ ಹೂವನ್ನೂ ಪ್ರಸಾಧವಾಗಿ ಇಂದ್ರನಿಗೆ ನೀಡುತ್ತಾರೆ. ಆಗ ಆ ಹೂವನ್ನೂ ತೆಗೆದುಕೊಂಡು ಇಂದ್ರನು ತಕ್ಷಣವೇ ಅದನ್ನು ಐರಾವತದ ಮೇಲೆ ಇಡುತ್ತಾನೆ.
ಇದನ್ನು ನೋಡಿದ ಮುನಿ,ಎಷ್ಟೋ ಪವಿತ್ರವಾದ ಹೂವನ್ನು ಹೀಗೆ ನಿರ್ಲಕ್ಷ್ಯ ಮಾಡುವುದು ತುಂಬಾ ಅಪಚಾರ ಎಂದು ಕೋಪಗೊಂಡಿದ್ದರು.ಆದ್ದರಿಂದ ಇಂದ್ರನು ಕೆಲ ಕಾಲ ಪದವಿಯನ್ನು ಕಳೆದುಕೊಂಡಿದ್ದನು.
ನಂತರ ನಾರಾಯಣನಿಗೆ ಇಂದ್ರನು ತನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡಾಗ ಪೂರ್ವ ವೈಭವ ಮತ್ತೆ ಹೊಂದುತ್ತಾನೆ ಹಾಗೆ ಪದವಿಯನ್ನು ಪಡೆಯುತ್ತಾನೆ .ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ನಾವು ಸಹ ದೇವರ ಪ್ರಸಾಧವನ್ನು ನಿರ್ಲಕ್ಷಿಸಬಾರದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top