ಮನೋರಂಜನೆ

ತನ್ನ ಮದುವೆಯನ್ನೇ ಮುಂದೂಡಿ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿದ ಮಲೆಯಾಳಂ ನಟ.

ನಿರಂತರವಾಗಿ ಸುರಿಯುತ್ತಿರುವ ಭಯಂಕರ ಮಳೆಗೆ ಕೊಚ್ಚಿ ಹೋಗುತ್ತಿರುವ ಕೇರಳ ಅಕ್ಷರಶ ಕಂಗಾಲಾಗಿ ಹೋಗಿದೆ. ಕಳೆದೊಂದು ಶತಮಾನದಲ್ಲಿಯೇ ಭೀಕರ ಜಲಪ್ರಳಯಕ್ಕೆ ತುತ್ತಾಗಿರುವ ಕೇರಳದಲ್ಲಿ ಮಳೆರಾಯ ಇನ್ನೂ ಮುಂದುವರೆದಿದ್ದು, ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ರಾಜ್ಯ ಸರ್ಕಾರ, ರಾಜ್ಯದ ಜನತೆ, ಚಿತ್ರರಂಗ, ಸ್ಟಾರ್ ನಟರ ಅಭಿಮಾನಿ ಸಂಘಗಳು ಸೇರಿದಂತೆ ಅನೇಕರು ಅದ್ಭುತವಾಗಿ ಸ್ಪಂದಿಸೋ ಮೂಲಕ ಕೊಡಗಿನ ಜನರ ಕಷ್ಟಕ್ಕೆ ಮುಗಿಬಿದ್ದು ಸಹಾಯ ಮಾಡುತ್ತಿದ್ದಾರೆ.. ಅದೇ ರೀತಿ ಮಲೆಯಾಳಂ ನಟನೊಬ್ಬ ತನ್ನ ಮದುವೆಯನ್ನೇ ಮುಂದಕ್ಕೆ ಹಾಕಿ ಸಂತ್ರಸ್ತರ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಳ್ಳುವುದರ ಮೂಲಕ ಗಮನ ಸೆಳೆಯುತ್ತಿದ್ದಾನೆ.

 

 

ಶಕೀಲಾ ಅವರ ಜೀವನಾಧಾರಿತ ಚಿತ್ರವೊಂದು ತವರಾಗುತ್ತಿದೆಯಲ್ಲಾ, ಆ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ರಾಜೀವ್ ಪಿಳ್ಳೈ ತನ್ನ ಮದುವೆಯನ್ನ ಮುಂದೂಡಿಕೊಂಡು ಸಂತ್ರಸ್ಥರ ನೆರವಿದೆ ಧಾವಿಸಿದ್ದಾರೆ. ನಿಶ್ಚಿತಾ ಎಂಬುವರ ಜೊತೆ ನಟ ರಾಜೀವ್ ಪಿಳ್ಳೈ ಅವರ ಮದುವೆ ಮೂರು ದಿನಗಳ ಹಿಂದೆಯೇ ನಡೆಯಬೇಕಿತ್ತು. ಆದ್ರೆ, ಕೇರಳ ಉಂಟಾಗಿರುವ ಭಯಂಕರ ಪ್ರಕೃತಿ ವಿಕೋಪದ ಕಾರಣದಿಂದ ಮದುವೆಯನ್ನ ಮುಂದೂಡಿ ಜನರ ಜೊತೆಯಾಗಿ ನಿಂತಿದ್ದಾರೆ. ಮುಂದೂಡಿರುವ ಮದುವೆ ಮುಂದಿನ ತಿಂಗಳು ನಡೆಯಲಿದೆಯಂತೆ. ಇಂಥಾ ಪಕೃತಿ ವಿಕೋಪಗಳು ಸಂಭವಿಸಿದಾಗ ಒಂದಿಷ್ಟು ಹಣ ಕೊಟ್ಟು ಕೈತೊಳೆದುಕೊಳ್ಳೋ ನಂತರ ಮುಂದೆ ರಾಜೀವ್ ಪಿಳ್ಳೆ ಭಿನ್ನವಾಗಿ ಕಾಣುತ್ತಾರೆ.

ಕೇರಳ ಪ್ರವಾಹ ಅಪ್ ಡೇಟ್:
ಕೇರಳದಲ್ಲಿ ಸುರಿಯುತ್ತಿರುವ ಮಹಾಮಳೆ ಕ್ಷಣ ಕ್ಷಣಕ್ಕೂ ತನ್ನ ರೌದ್ರಾವತಾರವನ್ನು ಹೆಚ್ಚಿಸುತ್ತಿದ್ದು, ಕೇವಲ 3 ದಿನದಲ್ಲೇ ಮಳೆಯಿಂದಾಗಿ ಬರೊಬ್ಬರಿ 200 ಮಂದಿ ಸಾವಿಗೀಡಾಗಿದ್ದು, ಇದರೊಂದಿಗೆ ಸವಾನಿ ಸಂಖ್ಯೆ 400ಕ್ಕೆ ಏರಿಕೆಯಾಗಿದೆ.ಸುಮಾರು 2 ಲಕ್ಷ ಮಂದಿ ಪ್ರವಾಹ ಸಂತ್ರಸ್ಥರ ಕ್ಯಾಂಪ್ ಗಳಲ್ಲಿದ್ದಾರೆ. ಕೇರಳದ 13 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಇಂದು ರಾಷ್ಟ್ರೀಯ ವಿಪತ್ತು ದಳದ 35 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಲಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top