ಸಮಾಚಾರ

ಫೇಸ್‍ಬುಕ್‍ನಲ್ಲಿ ಯಾರನ್ನು ಬೇಕಾದ್ರು ಬ್ಲಾಕ್ ಮಾಡಬಹುದು ಆದರೆ ಈ ಇಬ್ಬರನ್ನು ಮಾತ್ರ ಬ್ಲಾಕ್ ಮಾಡಲು ಆಗಲ್ಲ,ಯಾರ್ ಅವರು ಗೊತ್ತಾ

ಫೇಸ್‌ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣವಾಗಿದೆ. ಬಳಕೆದಾರರು ತಮ್ಮ ಸ್ನೇಹಿತರನ್ನು ಇಲ್ಲಿ ಸೇರಿಸಬಹುದು ಅವರಿಗೆ ಮೆಸ್ಸೇಜ್ ಕಳುಹಿಸಬಹುದು ಮತ್ತು ತಮ್ಮ ವೈಯುಕ್ತಿಕ ವ್ಯಕ್ತಿಚಿತ್ರವನ್ನು ಸಹ ನವೀಕರಿಸಿ ಮಿತ್ರರಿಗೆ ತಮ್ಮ ಬಗ್ಗೆ ಪ್ರಕಟಿಸಬಹುದು. ಇದರ ಜೊತೆಗೆ, ಬಳಕೆದಾರರು ಊರು, ಕಾರ್ಯಾಲಯ, ಶಾಲೆ, ಮತ್ತು ಪ್ರದೇಶದವರು ಸಂಘಟಿಸಿದ ಸಂಪರ್ಕಜಾಲದಲ್ಲಿ ಸೇರಬಹುದು.

ಫೇಸ್ಬುಕ್ ಶುರುವಾದಾಗ ಹಾರ್ವರ್ಡ್ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು ಈಗ ವಿಶ್ಯವ್ಯಾಪಿಯಾಗಿರುವ ಫೇಸ್ಬುಕ್ ನ್ನು ಕೋಟ್ಯಂತರ ಜನರು ದಿನನಿತ್ಯ ಬಳಕೆ ಮಾಡುತ್ತಿದ್ದಾರೆ. ಅಂದಹಾಗೇ ಫೇಸ್ಬುಕ್ ನಲ್ಲಿ ನಮಗೆ ಬೇಡವಾದವರನ್ನು ಬ್ಲಾಕ್ ಮಾಡುವ ಫೀಚರ್ ಕೂಡ ಕಲ್ಪಿಸಿ ಕೊಡಲಾಗಿದೆ. ಬ್ಲಾಕ್ ಮಾಡಿದರೆ ಅವರಿಗೆ ನಮ್ಮ ಯಾವ ಪೋಸ್ಟ್ ಗಳು ಕೂಡ ಕಾಣಿಸುವುದಿಲ್ಲ.

 

 

ಆದರೆ ಫೇಸ್‍ಬುಕ್‍ನಲ್ಲಿ ಈ ಇಬ್ಬರು ವ್ಯಕ್ತಿಗಳನ್ನು ಯಾವತ್ತು ಬ್ಲಾಕ್ ಮಾಡಲು ಸಾಧ್ಯವಾಗುವುದಿಲ್ಲ. ಅವರೇ ಫೇಸ್‍ಬುಕ್ ಫೌಂಡರ್ ಮಾರ್ಕ್ ಜುಗರ್ ಬರ್ಗ್ ಮತ್ತು ಅವರ ಪತ್ನಿ ಪ್ರಿಸಿಲಾ ಚೇನ್ ಎಂದು ತಿಳಿದು ಬಂದಿದೆ. ಒಂದು ವೇಳೆ ನೀವೇನಾದರೂ ಫೇಸ್‍ಬುಕ್‍ನಲ್ಲಿ ಮಾರ್ಕ್ ಅಥವಾ ಪ್ರಸಿಲಾರ ಪ್ರೊಫೈಲ್‍ಗೆ ಹೋಗಿ ಅವರನ್ನು ಬ್ಲಾಕ್ ಮಾಡಲು ಯತ್ನಿಸಿದರೆ ಸ್ಕ್ರಿನ್‍ನಲ್ಲಿ ಬ್ಲಾಕ್ ಎರರ್ ಕಾಣಿಸುತ್ತದೆ ಎನ್ನಲಾಗಿದೆ.

ಮೂಲಗಳ ಮಾಹಿತಿ ಪ್ರಕಾರ 2010 ರಿಂದ ಬ್ಲಾಕ್ ಮಾಡಲು ಸಾಧ್ಯ ಆಗುತ್ತಿಲ್ಲ ಎಂದು ತಿಳಿದು ಬಂದಿದೆ. ಲಕ್ಷಾಂತರ ಜನ ಬ್ಲಾಕ್ ಮಾಡಲು ಹೋಗಿ ಸಾಧ್ಯವಾಗದೆ ಸುಮ್ಮನೆ ಕುಳಿತಿದ್ದಾರೆ ಎಂದು ತಿಳಿದು ಬಂದಿದೆ. ನೀವು ಟ್ರೈ ಮಾಡಬೇಡಿ ಮತ್ತೆ ನೀವೇ ಬ್ಲಾಕ್ ಆಗಿ ಹೋಗಿದ್ದೀರಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top