ಸಮಾಚಾರ

ಬ್ಯಾಂಕ್ ಅಕೌಂಟ್ ತೆರೆಯುವವರಿಗೊಂದು ಮುಖ್ಯವಾದ ಮಾಹಿತಿ

ಇಲ್ಲಿಯವರೆಗೂ ನಾವು ಬ್ಯಾಂಕ್ ನಲ್ಲಿ ಖಾತೆ ತೆರೆಯುವಾಗ ಅರ್ಜಿ ಭಾರ್ತಿ ಮಾಡಿ, ಫೋಟೋ ಲಗತ್ತಿಸಿ ಜೊತೆಗೆ ಒಂದು ಆಧಾರ್ ಜಿರೊಕ್ಸ್ ಕಾಪಿ ನೀಡುತ್ತಿದ್ದೆವು. ಆದರೆ ಇನ್ನು ಮುಂದೆ ಇಷ್ಟೇ ಕೊಟ್ಟರೆ ಸಾಕಾಗುವುದಿಲ್ಲ. ಹೊಸದೊಂದು ನಿಯಮ ಬರಲಿದೆ. ನೀವು ಬಯೋಮೆಟ್ರಿಕ್ ಅಥವಾ ಒಟಿಪಿ ದೃಢೀಕರಣವನ್ನೂ ನೀಡಬೇಕಾಗುತ್ತದೆ. ಈ ವಿಚಾರವನ್ನು ಯುಐಡಿಎಐ ಹೇಳಿದೆ ಎಂದು ತಿಳಿದು ಬಂದಿದೆ.

ಯುಐಡಿಎಐ ಹೇಳಿರುವ ಪ್ರಕಾರ ಬ್ಯಾಂಕ್ ಗಳು ಒಂದು ವೇಳೆ ಒಟಿಪಿ ಅಥವಾ ಬಯೋಮೆಟ್ರಿಕ್ ದಾಖಲೆ ಪಡೆಯದೆ ಖಾತೆ ತೆರೆಯಲು ಮುಂದಾದರೆ ಏನಾದರು ನಷ್ಟ ಸಂಭವಿಸಿದರೆ ಅವರೇ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದೆ ಎನ್ನಲಾಗಿದೆ.

 

 

ಬ್ಯಾಂಕ್ ಮಾಡುವ ತಪ್ಪಿಗೆ ಆಧಾರ್ ಹೊಣೆ ಹೊರುವುದಿಲ್ಲ ಎಂದು ಖಡಾ ಖಂಡಿತವಾಗಿ ತಿಳಿಸಿದೆ. ಈ ಹಿಂದೆ ವೋಟರ್ ಐಡಿ ಜಿರೊಕ್ಸ್ ಪಡೆಯುತ್ತಿದ್ದರು. ಈಗ ಆಧಾರ್ ಜಿರೊಕ್ಸ್ ಪಡೆಯುತ್ತಿದ್ದಾರೆ. ಇವೆರಡು ವಿಧಾನಕ್ಕೂ ಏನು ವ್ಯತ್ಯಾಸ ಇಲ್ಲ. ಹಾಗಾಗಿ ಬಯೋಮೆಟ್ರಿಕ್ ಹಾಗು ಒಟಿಪಿ ಖಡ್ಡಾಯ ಮಾಡಬೇಕು ಎಂದು ಆಧಾರ್ ಮಂಡಳಿ ಬ್ಯಾಂಕ್ ಗಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.

ಅಷ್ಟಕ್ಕೂ ಆಧಾರ್ ಈ ಹೊಸ ನಿಯಮ ಜಾರಿಗೊಳಿಸಿ ಎಂದು ಬ್ಯಾಂಕ್ ಗಳಿಗೆ ಸೂಚಿಸಲು ಭಲವಾದ ಕಾರಣವಿದೆ. ಏಕೆಂದರೆ ಯುಐಡಿಎಐ ವೆಬ್ಸೈಟ್ ನಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ನನಗೆ ಗೊತ್ತಿಲ್ಲದೆ ಆಧಾರ್ ಕಾರ್ಡ್ ಫೋಟೋ ಕಾಪಿ ಪಡೆದು ಬೇರೆಯವರು ಖಾತೆ ತೆರೆಯಬಹುದಾ ಎಂದು ಪ್ರಶ್ನೆ ಮಾಡಲಾಗಿತ್ತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top