ಸಮಾಚಾರ

ಸಿನಿರಂಗದ ಹುಬ್ಬೇರಿಸುವ ಕರಾಳ ಸತ್ಯಗಳು

ಸೈಫ್ ಅಲಿಖಾನ್ ಹಾಗು ಕರೀನಾ :
ಬಾಲಿವುಡ್ ಖ್ಯಾತ ನಟಿ ಕರೀನಾ ಕಪೂರ್ ಹಾಗು ಅವರು ಸೈಫ್ ಅಲಿಖಾನ್ ಅವರನ್ನು ಮದುವೆ ಆಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಸೈಫ್ ಅಲಿಖಾನ್ ಮೊದಲ ಮದುವೆ ಆಗುವಾಗ ಕರೀನಾ 11 ವರ್ಷದ ಬಾಲಕಿ ಆಗಿದ್ದಳು. ಆಗ ತನ್ನ ಕುಟುಂಬದೊಡನೆ ಸೈಫ್ ಮದುವೆಗೆ ಆಗಮಿಸಿದ್ದ ಕರೀನಾ ಕಪೂರ್  ಸೈಫ್ ಅಲಿಖಾನ್ ಗೆ ಶುಭಾಶಯ ತಿಳಿಸಿದ್ದಳು. ಸೈಫ್ ಅಲಿಖಾನ್ ಥಾಂಕ್ಯೂ ಬೇಟಾ(ಧನ್ಯವಾದಗಳು ಮಗಳೇ) ಎಂದು ಹೇಳಿದ್ದರಂತೆ. ಆದರೆ ಹಲವು ವರ್ಷಗಳ ಬಳಿಕ ಕರಿನಾಳನ್ನೇ ಸೈಫ್ ವರಿಸಿದರು. ಈಗ ಈ ಜೋಡಿಗೆ ತೈಮೂರ್ ಎಂಬ ಮುದ್ದಾದ ಮಗನಿದ್ದಾನೆ.

ರೇಖಾ ಹಾಗೂ ಬಿಗ್‌ ಬಿ ಪ್ರೇಮ್ ಕಥೆ:
‘Rekha: The Untold Story’ ಪುಸ್ತಕ ನಟಿ ರೇಖಾ ಕುರಿತು ಸಾಕಷ್ಟು ವಿಚಾರಗಳನ್ನ ಬಹಿರಂಗಪಡಿಸಿದೆ. ಆ ದಿನಗಳಲ್ಲಿ ಹಿರಿಯ ನಟಿ ರೇಖಾ ಹಾಗೂ ಬಿಗ್‌ ಬಿ ಅಮಿತಾಬ್‌ ಜೋಡಿ ತುಂಬಾನೇ ಹಿಟ್‌ ಆಗಿತ್ತು. ಸಿನಿಮಾ ಅಲ್ಲದೆ ಅಲ್ಲದೆ ನಿಜಜೀವನದಲ್ಲಿ ಕೂಡ ರೇಖಾಗೆ ಬಿಗ್‌ ಬಿ ಅಮಿತಾಬ್‌ ಮೇಲೆ ಪ್ರೀತಿ ಇತ್ತು ಎಂದು ಹೇಳಲಾಗ್ತಿತ್ತು.

 

 

 

ಶ್ರೀದೇವಿ:

ಮಿಥುನ್ ಚಕ್ರವರ್ತಿ ಹಾಗೂ ಶ್ರೀದೇವಿ 1980 ರಲ್ಲಿ ರಿಲೀಸ್ ಆಗಿದ್ದ ‘ಝಾಗ್ ಉಟಾ ಇನ್ಸಾನ್’ ಸಿನಿಮಾದಲ್ಲಿ ನಟಿಸಿದ್ದರು. ಇವರು ಗುಟ್ಟಾಗಿ ಮದುವೆಯಾದ ವಿಷಯವನ್ನು ಮದುವೆ ಸರ್ಟಿಫಿಕೇಟ್ ಸಮೇತ ನಿಯತಕಾಲಿಕದಲ್ಲಿ ಪ್ರಕಟ ಮಾಡಿತ್ತು ಎನ್ನಲಾಗಿದೆ. ಮಿಥುನ್ ಗೆ ತನ್ನ ಮೊದಲ ಪತ್ನಿಯನ್ನು ಬಿಟ್ಟು ಶ್ರೀದೇವಿ ಜೊತೆ ಇರಲು ಸಾಧ್ಯವಾಗಲಿಲ್ಲ. ಇತ್ತ ಬೋನಿ ಕಪೂರ್ ಕೂಡ ಶ್ರೀದೇವಿಗೆ ಹತ್ತಿರವಾಗತೊಡಗಿದ. ಬೋನಿ ಕಪೂರ್ ನಿರ್ಮಾಪಕನಾಗಿದ್ದ, ಶ್ರೀದೇವಿ ಇವರ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಳು. ಬೋನಿ ಕಪೂರ್ ಹಾಗು ಶ್ರೀದೇವಿ ಹತ್ತಿರವಾಗುತ್ತಿರುವುದು ಮಿಥುನ್ ಚಕ್ರವರ್ತಿ ಪಿತ್ತವನ್ನು ನೆತ್ತಿಗೇರಿಸಿತ್ತು. ಮಿಥುನ್ ಶ್ರೀದೇವಿಗೆ ಜೊತೆ ಮಾತನಾಡಿ ಬೋನಿ ಕಪೂರ್ ಗೆ ರಾಖಿ ಕಟ್ಟಲು ಸೂಚಿಸಿದ. ಶ್ರೀದೇವಿ ಇದಕ್ಕೆ ಸಮ್ಮತಿಸಿ ಬೋನಿ ಕಪೂರ್ ಗೆ ರಾಖಿ ಕಟ್ಟಿದ್ದಳು.

ಆದರೆ ನಂತರದ ದಿನಗಳಲ್ಲಿ ಮಿಥುನ್ ಚಕ್ರವರ್ತಿ ಮೊದಲ ಹೆಂಡತಿಗೆ ತನ್ನ ಗಂಡ ಶ್ರೀದೇವಿ ಜೊತೆ ಗುಟ್ಟಾಗಿ ಮದುವೆ ಆದ ವಿಚಾರ ತಿಳಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದರಿಂದ ಮಿಥುನ್ ಚಕ್ರವರ್ತಿಯು ಶ್ರೀದೇವಿ ಸಹವಾಸ ಬಿಟ್ಟುಬಿಟ್ಟ. ಆಗ ಬೋನಿ ಕಪೂರ್ ದಾರಿ ಸುಗಮವಾಯಿತು. ಶ್ರೀದೇವಿ ಹಾಗು ಬೋನಿ ಕಪೂರ್ ಮದುವೆಯಾದರು.

ಮಹೇಶ್ ಭಟ್:
ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರ ಮೊದಲ ಮಗಳು ಪೂಜಾ ಭಟ್ ಹಾಗು ಎರಡನೇ ಮಗಳು ಅಲಿಯಾ ಭಟ್ ನಡುವೆ 21 ವರ್ಷ ವಯಸ್ಸಿನ ಅಂತರವಿದೆ ಎನ್ನಲಾಗಿದೆ. ಅಂದಹಾಗೆ ಅಲಿಯಾ ಭಟ್ ಅವರು ಮಹೇಶ್ ಭಟ್ ಅವರ ಎರಡನೆಯ ಹೆಂಡತಿಯ ಮಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top