fbpx
ಸಮಾಚಾರ

ತುಂಬಾ ವೈರಲ್ ಆಯಿತು ಧೋನಿ ಬಗ್ಗೆ ಮಗಳು ಮಾತನಾಡಿದ ಈ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಚೆನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಯಷ್ಟೇ ಅವರ ಮಗಳು ಜೀವಾ ಕೂಡಾ ಖ್ಯಾತಿ ಪಡೆದಿದ್ದಾಳೆ. ಮಹೇಂದ್ರ ಸಿಂಗ್ ಧೋನಿ ಅವರ ಪುತ್ರಿ ಜೀವಾ ಚೂಟಿ ಮಗು ಎಂದು ಬಿಡಿಸಿಹೇಳುವ ಅಗತ್ಯವಿಲ್ಲ. ಈ ಹಿಂದೆ ಮಲೆಯಾಳಂ ಹಾಡನ್ನು ಹಾಡುವ ಮೂಲಕ ಮತ್ತು ಐಪಿಎಲ್ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಚಿಯರ್ ಮಾಡುವ ಮೂಲಕ ವೈರಲ್ ಆಗಿದ್ದ ಜೀವಾ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ.

ಇಂಗ್ಲೆಂಡ್ ವಿರುದ್ದದ ಏಕದಿನ ಸರ ಮುಗಿಸಿ ವಿಶ್ರಾಂತಿಯಲ್ಲಿರುವ ಧೋನಿ ಅವರು ಈಗ ಎಂದಿನಂತೆ ಮಗಳ ಜೊತೆ ಧೋನಿ ಆಟವಾಡ್ತಿದ್ದಾರೆ. ಬಲೂನ್ ಹಿಡಿದು ಧೋನಿ ಮಗಳ ಜೊತೆ ಆಡ್ತಿದ್ರೆ ಸಾಕ್ಷಿ ಇದ್ರ ವಿಡಿಯೋ ಮಾಡಿದ್ದಾರೆ. ಜೊತೆಗೆ ಸಾಕ್ಷಿ, ಅಪ್ಪ ಒಳ್ಳೆಯವರಾ? ಕೆಟ್ಟವರಾ? ಎಂದು ಪ್ರಶ್ನೆ ಮಾಡ್ತಾರೆ. ಇದಕ್ಕೆ ಜೀವಾ ಮುದ್ದು ಮುದ್ದಾಗಿ ಎಲ್ಲರೂ ಒಳ್ಳೆಯವರು ಎನ್ನುತ್ತಾಳೆ. ಮೂರ್ನಾಲ್ಕು ಬಾರಿ ಇದನ್ನೇ ಪುನರುಚ್ಚರಿಸುತ್ತಾಳೆ. ಎಷ್ಟೇ ಆದರೂ ಅಪ್ಪನ ಮುದ್ದಿನ ಮಗಳಲ್ಲವೇ. ಆಗ ತಾಯಿ ವಿಡಿಯೋ ಚಿತ್ರೀಕರಣ ಮಾಡಿದರು. ಅದನ್ನು ಧೋನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಡಿಯೋ ನೋಡಿ:

Very smart

A post shared by M S Dhoni (@mahi7781) on

ಧೋನಿ ಅವರು ಮಗಳು ಜೀವಾ ಮೇಲೆ ಅತೀವ ಪ್ರೀತಿ ಹೊಂದಿದ್ದಾರೆ. ಈ ಹಿಂದೆ ಖಾಸಗಿ ಸುದ್ದಿ ವಾಹಿನಿಯಲ್ಲಿ ಮಾತನಾಡುತ್ತ ಧೋನಿ ಅವರು ಜೀವಾ ಬಂದ ಮೇಲೆ ನನ್ನ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top