ಸಮಾಚಾರ

ಶುರುವಾಗ್ತಿದೆ ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಸೂಪರ್ ಸೇಲ್ ,ನೋಡಿ ನೀವು ಒಂದ್ಸಲ

2007 ರಲ್ಲಿ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಸಹೋದರರಿಂದ ಭಾರತದಲ್ಲಿ ಸ್ಥಾಪಿಸಲ್ಪಟ್ಟ ಫ್ಲಿಪ್‌ಕಾರ್ಟ್ ಸಂಸ್ಥೆ ಇಂದು ದೈತ್ಯ ಈ ಕಾಮರ್ಸ್ ಸಂಸ್ಥೆಯಾಗಿ ಬೆಳೆದಿದೆ. ಇತ್ತೀಚಿಗೆ ಅಮೇರಿಕಾ ಮೂಲದ ವಾಲ್ ಮಾರ್ಟ್ ಸಂಸ್ಥೆ ಫ್ಲಿಪ್‌ಕಾರ್ಟ್ ಖರೀದಿ ಮಾಡಿತ್ತು ಆಗ ಫ್ಲಿಪ್‌ಕಾರ್ಟ್ ಸುದ್ದಿಯಲ್ಲಿತ್ತು. ಈಗ ಫ್ಲಿಪ್ಕಾರ್ಟ್ ಸೂಪರ್ ಸೇಲ್ ಆಯೋಜಿಸಿ ಸುದ್ದಿಯಲ್ಲಿದೆ.

ಇತ್ತೀಚಿಗೆ ಅಮೆಜಾನ್ ಪ್ರೈ ಡೇ ಸೇಲ್ ಮಾಡಿತ್ತು ಇದಕ್ಕೆ ಪೈಪೋಟಿ ನೀಡುವ ನಿಟ್ಟಿನಲ್ಲಿಯೇ ಫ್ಲಿಪ್‌ ಕಾರ್ಟ್ ಸಂಸ್ಥೆ ಸೂಪರ್ ಸೇಲ್ ಆಯೋಜಿಸಿದೆ ಎನ್ನಲಾಗಿದೆ. ಆಗಸ್ಟ್ 26ರಿಂದ ಸೂಪರ್ ಸೇಲ್ ಪ್ರಾರಂಭ ಮಾಡುತ್ತಿದೆ. ಸೇಲ್ ನಲ್ಲಿ ಅನೇಕ ಉತ್ಪನ್ನಗಳ ಮೇಲೆ ಡಿಸ್ಕೌಂಟ್ ಸಿಗಲಿದೆ. ಆಗಸ್ಟ್ 25 ರ ಮಧ್ಯರಾತ್ರಿ 12 ಗಂಟೆಯಿಂದ ಸೇಲ್ ಶುರುವಾಗಲಿದೆ. ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯತ್ವ ಹೊಂದಿರುವವರಿಗೆ ಆಗಸ್ಟ್ 24ರ ಸಂಜೆ 4 ಗಂಟೆಯಿಂದಲೇ ಸೇಲ್ ಪ್ರಾರಂಭ ಆಗಲಿದೆ ಎಂದು ತಿಳಿದು ಬಂದಿದೆ.

 

 

 

ಇನ್ನು ನಿಮ್ಮ ಬಳಿ ಹೆಚ್.ಡಿ.ಎಫ್.ಸಿ. ಕಾರ್ಡ್ ಇದ್ದಾರೆ ನಿಮಗೆ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಕೂಡ ಸಿಗಲಿದೆ. ಮೊಬೈಲ್ ಫೋನ್, ಗೃಹೋಪಯೋಗಿ ವಸ್ತು, ಲ್ಯಾಪ್ಟಾಪ್ ಮೇಲೆ ಡಿಸ್ಕೌಂಟ್ ಸಿಗ್ತಿದೆ. ಕಂಪನಿ ರಶ್ ಅವರ್, ಸೂಪರ್ ಡೀಲ್, ಎಪಿಕ್ 24, ಪ್ರೈಸ್ ಕ್ರಾಶ್ ನಂತಹ ಹಲವಾರು ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ಇನ್ನೊಂದು ಸುದ್ದಿ ಎಂದರೆ ಸೇಲ್ ಶುರುವಾತಿನಲ್ಲಿ ಕೆಲವೊಂದು ಉತ್ಪನ್ನಗಳನ್ನು ಭಾರಿ ರಿಯಾಯತಿ ದರದಲ್ಲಿ ಫ್ಲಿಪ್ ಕಾರ್ಟ್ ಮಾರಲಿದೆ. ಈ ಭಾರಿ ಡಿಸ್ಕೌಂಟ್ ಉತ್ಪನ್ನಗಳು ಕೆಲವೇ ಸೆಕೆಂಡ್ ಕಾಲ ಇರುತ್ತವೆ. ಯಾರಿಗುಂಟು ಯಾರಿಗಿಲ್ಲ. ಇನ್ನುಳಿದಂತೆ ಅನೇಕ ಉತ್ಪನ್ನಗಳನ್ನು 50 ಶೇಖಡಾ ರಿಯಾಯತಿ ಗಿಂತಲೂ ಕಡಿಮೆ ದರದಲ್ಲಿ ಸಿಗಲಿವೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top