fbpx
ಸಮಾಚಾರ

ಕಣ್ಣಿನಂಚಿನಲ್ಲಿ ನೀರು ತರಿಸುತ್ತೆ ಅಜ್ಜಿ-ಮೊಮ್ಮಗಳ ಈ ಫೋಟೋ ಹಾಗೂ ಅದರ ಹಿಂದೆ ಇರುವ ಈ ಕಥೆ

ಇತ್ತೀಚಿನ ದಿನಗಳಲ್ಲಿ ಪೋಷಕರ ನೆರವಿನಿಂದ ಶಿಕ್ಷಣ ಪಡೆದು, ಉತ್ತಮ ಜೀವನ ನಡೆಸುತ್ತಿ ರುವ ಮಕ್ಕಳು ತಮ್ಮ ತಂದೆ ತಾಯಿಯನ್ನು ಅವರ ಇಳಿವಯಸ್ಸಿನಲ್ಲಿ ನೋಡಿ ಕೊಳ್ಳುವ ಜವಾಬ್ದಾರಿಯಿಂದ ನುಣುಚಿ ಕೊಳ್ಳುತ್ತಿದ್ದಾರೆ. ಮಕ್ಕಳಿಂದ ತಿರಸ್ಕೃತರಾದ ಪೋಷಕರು ವಿಧಿಯಿಲ್ಲದೇ ಅನಾಥಾಶ್ರಮದ ಮೊರೆ ಹೋಗುತ್ತಿದ್ದಾರೆ.  ಇತ್ತೀಚಿಗೆ ವೃದ್ದಾಶ್ರಮದಲ್ಲಿರುವ ಹಿರಿಯ ಮಹಿಳೆ ತನ್ನ ಮೊಮ್ಮಗಳನ್ನು ನೋಡಿದಾಗ ಕಣ್ಣೀರಿಟ್ಟಿರುವ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ಶಾಲೆಯೊಂದರಲ್ಲಿ ಮಕ್ಕಳನ್ನು ಪ್ರವಾಸದ ಹಿನ್ನಲೆಯಲ್ಲಿ ವೃದ್ದಾಶ್ರಮಮಕ್ಕೆ ಕರೆದುಕೊಂಡು ಹೋಗಿದ್ದರು. ಆ ಸಂಧರ್ಭದಲ್ಲಿ ಶಾಲೆಯ ಬಾಲಕಿಯೊಬ್ಬಳು ತನ್ನ ಅಜ್ಜಿ ಅಲ್ಲಿರುವುದನ್ನು ಕಂಡಿದ್ದಾಳೆ. ಅಜ್ಜಿಯನ್ನು ನೋಡಿದ ಕೂಡಲೇ ಮೊಮ್ಮಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಅಜ್ಜಿ ಕೂಡ ಮೊಮ್ಮಗಳನ್ನು ನೋಡಿ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಜ್ಜಿ ಹಾಗು ಮೊಮ್ಮಗಳು ಭಾವುಕರಾಗಿ ಅಳ್ಳುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಎಲ್ಲರ ಕಣ್ಣನ್ನು ಒದ್ದೆ ಮಾಡಿದೆ ಎಂದು ತಿಳಿದು ಬಂದಿದೆ. ಈ ಚಿತ್ರವನ್ನು ಕ್ರಿಕೆಟರ್ ಹರ್ಭಜನ್ ಸಿಂಗ್ ಕೂಡ ಶೇರ್ ಮಾಡಿದ್ದಾರೆ. ಜೊತೆಗೆ ತಾಯಿಯನ್ನು ದೂರ ಮಾಡಿರುವ ಮಕ್ಕಳ ಮೇಲೆ ಕೋಪ ವ್ಯಕ್ತಪಡಿಸಿದ್ದಾರೆ. ಇಂಥವರು ನಾಚಿಕೆ ಪಡಬೇಕೆಂದು ಟ್ವಿಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

 

 

ಮೂಲಗಳ ಮಾಹಿತಿ ಪ್ರಕಾರ, ಆ ಬಾಲಕಿ ಅಜ್ಜಿ ಎಲ್ಲಿ ಹೋಗಿದ್ದಾಳೆ ಎಂದು ಮನೆಯಲ್ಲಿ ತಂದೆ ತಾಯಿಗೆ ದಿನಾಲೂ ಕೇಳುತ್ತಿದ್ದರಂತೆ. ಆದರೆ ತಂದೆ ಮಾತ್ರ ಮಗಳಿಗೆ ಸುಳ್ಳು ಹೇಳಿ ಅಜ್ಜಿ ಸಂಭಂದಿಕರ ಮನೆಯಲ್ಲಿದ್ದಾರೆ ಎಂದು ಸುಳ್ಳು ಹೇಳಿದ್ದರು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top