ಸಮಾಚಾರ

ಇಲ್ಲಿ ಗಂಡಸರು ಮಹಿಳೆಯಾಗಿ ಬದಲಾದ್ರೆ ಮಾತ್ರ ಒಳ್ಳೆ ಕೆಲಸ ಸಿಗುತ್ತಂತೆ

ದೇವರ ನಾಡು ಎಂದು ಪ್ರಸಿದ್ಧಿ ಖ್ಯಾತ ಪಡೆದಿರುವ ರಾಜ್ಯವೆಂದರೆ ಅದು ಕೇರಳ. ಭೂಲೋಖದೊಡೆಯ, ಅಖಿಲಾಂಡ ನಾಯಕ, ಕೋಟಿ ಕೋಟಿ ಭಕ್ತರ ಆರಾಧ್ಯ ದೇವರಾಗಿರುವ, ಹರಿ-ಹರ ಸುತ, ಅಖಂಡ ಬ್ರಹ್ಮಚಾರಿ, ಶಬರಿ ಮಲೆ ಸ್ವಾಮಿ ಅಯ್ಯಪ್ಪ ಸಹಿತ ಹಲವಾರು ಹಿಂದೂ ದೇವರುಗಳು ನೆಲೆಯಾಗಿರುವ ರಾಜ್ಯ ಕೇರಳ. ಕೇರಳದಲ್ಲಿ ಅನೇಕ ದೇವಾಲಯಗಳು ಇವೆ ಎಲ್ಲ ದೇವಾಲಯಗಳು ತಮ್ಮದೇ ಆಗಿರುವ ವೈಷ್ಟತೆಯಿಂದ ಖ್ಯಾತಿ ಪಡೆದಿವೆ. ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಒಂದು ವಿಶಿಷ್ಟ ಮಂದಿರವಿದೆ. ಅದರ ಬಗ್ಗೆ ನೋಡೋಣ ಬನ್ನಿ.

 

 

ಅಲ್ಲಿ ಮಹಿಳೆಯರಿಗೆ ಅಲ್ಲ, ಬದಲಾಗಿ ಪುರುಷರಿಗೆ ಪ್ರವೇಶ ನೀಡುವುದನ್ನು ಬ್ಯಾನ್ ಮಾಡಲಾಗಿದೆ. ಆದರೆ ಪುರುಷರು ಈ ಮಂದಿರಕ್ಕೆ ಪ್ರವೇಶ ಮಾಡುತ್ತಾರೆ ನಿಜ. ಆದರೆ ತಾವು ಪುರುಷರಾಗಿ ಹೋಗುವುದಿಲ್ಲ ಬದಲಾಗಿ ಮಹಿಳೆಯರಾಗಿ ಹೋಗುತ್ತಾರೆ. ಕೊಟ್ಟನ್ ಕುಲಂಗರಾ ಶ್ರೀದೇವಿ ಮಂದಿರದಲ್ಲಿ ದೇವಿ ಮಾತೆಯನ್ನು ಪೂಜೆ ಮಾಡುವ ಪರಂಪರೆ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇಲ್ಲಿ ಪುರುಷರು ಮಹಿಳೆಯರಂತೆ ತಯಾರಾಗಿ ಬಂದು ದೇವಿಯ ಪೂಜೆ ಮಾಡಬೇಕು. ಪುರುಷರು ಹೀಗೆ ಮಾಡಿದರೆ ಅವರಿಗೆ ಅರೋಗ್ಯ, ಒಳ್ಳೆಯ ಕೆಲಸ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಇದೆ.

ಈ ದೇವಸ್ಥಾನಕ್ಕೆ ಪ್ರವೇಶ ಸಿಗಬೇಕಾದರೆ ಪುರುಷರು ಕೇವಲ ಮಹಿಳೆಯರ ಸೀರೆ ಮಾತ್ರವಲ್ಲ, ಬದಲಾಗಿ ಎಲ್ಲಾ 16 ಶೃಂಗಾರ ಕೂಡ ಮಾಡ್ಕೊಂಡು ಬರ್ಬೇಕು. ದೇವಸ್ಥಾನದ ವಿಶೇಷ ಉತ್ಸವದಲ್ಲಿ ಭಾಗಿ ಆಗಲು ಪುರುಷರು ಮಹಿಳೆಯರಂತೆ ಸೀರೆ ಉಟ್ಕೊಂಡು ಬರ್ತಾರೆ. ಅಲ್ದೇ ಎಲ್ಲಾ ಶೃಂಗಾರಗಳನ್ನು ಮಾಡಿ ಬಳಿಕ ದೇವಿಯ ಆರಾಧನೆ ಮಾಡುತ್ತಾರೆ ಎನ್ನಲಾಗಿದೆ. ಈ ದೇವಸ್ಥಾನದ ದೇವಿಯ ಮೂರ್ತಿ ಸ್ವಯಂಭೂ ಆಗಿದ್ದು ಎನ್ನಲಾಗುತ್ತದೆ. ಇಲ್ಲಿ ಗರ್ಭ ಗುಡಿಯ ಮೇಲೆ ಕಲಶವಿಲ್ಲ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top