ಸಿನಿಮಾ

ಆರಡಿ ಕಟ್ ಔಟ್ ಕಿಚ್ಚ ಸುದೀಪ್ ಅವ್ರ ಪೋಲ್ಯಾಂಡ್ ದೇಶದ ಈ ಅಭಿಮಾನಿ ಮಾಡಿರೋ ಕೆಲಸ ಕೇಳಿದ್ರೆ ಖುಷಿ ಪಡ್ತಿರಿ

ಕಿಚ್ಚ ಸುದೀಪ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಭಾರೀ ಅಭಿಮಾನಿಗಳು ಇದ್ದಾರೆ ಎನ್ನುವ ವಿಷಯ ಈಗಾಗಲೇ ಗೊತ್ತಿರುವ ವಿಷಯವೇ ಕೆಲ ತಿಂಗಳ ಹಿಂದೆ ಜಪಾನ್ನ ಅಭಿಮಾನಿಯೊಬ್ಬಳು ಕಿಚ್ಚ ಸುದೀಪ್ ಅವರ ಬಗೆಗಿನ ಅಭಿಮಾನವನ್ನು ತೋರ್ಪಡಿಸುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಫೇಮಸ್ ಆಗಿಬಿಟ್ಟಿದ್ದಳು.

ಈಗಾಗಲೇ ಹಿಂದಿ, ತೆಲುಗು ಚಿತ್ರಗಳಲ್ಲಿ ನಟಿಸಿ ಆಂಧ್ರಪ್ರದೇಶ,ತೆಲಂಗಾಣ ,ಕೇರಳ ಹಾಗೆಯೇ ಮುಂಬೈನಲ್ಲೂ ಬಹಳ ಖ್ಯಾತಿ ಹೊಂದಿರುವ ಕಿಚ್ಚ ಸುದೀಪ್ ಅವರ ಅಭಿಮಾನಿ ಬಳಗಕ್ಕೆ ಮತ್ತೊಬ್ಬ ನಂಬರ್ ವನ್ ಅಭಿಮಾನಿ ಸೇರ್ಪಡೆಯಾಗಿದ್ದಾಳೆ, ಈಕೆ ಮೂಲತಃ ಪೋಲೆಂಡ್ ಶವಗಳು ಕಿಚ್ಚ ಸುದೀಪ್ ಅಂದರೆ ಆಕೆಗೆ ಪಂಚಪ್ರಾಣ ಕಿಚ್ಚ ಅವರ ಫೋಟೋಗಳನ್ನು ತನ್ನ ಲ್ಯಾಪ್ಟಾಪ್ ವಾಲ್ ಪೇಪರ್ ಮಾಡಿಕೊಂಡಿರುವ ಈಕೆ ತನ್ನ ದಿನನಿತ್ಯದ ಕೆಲಸ ಆರಂಭಿಸುವುದು ಕಿಚ್ಚನ ಫೋಟೋ ನೋಡುತ್ತಲೇ.

ಪೋಲ್ಯಾಂಡ್ ಭಾಷೆಯಲ್ಲಿ ಕಿಚ್ಚ ಸುದೀಪ್ ಅವರ ಬಗೆಗಿನ ಅಭಿಮಾನವನ್ನು ಅವರ ಮ್ಯಾನರಿಸಂ ಹೊಗಳುತ್ತಾ ಹಾಗೆಯೇ ತನ್ನ ಲ್ಯಾಪ್ಟಾಪ್ನಲ್ಲಿ ಫೋಟೋಗಳನ್ನು ಬದಲಾಯಿಸುತ್ತಾ ಮಾಡಿರುವ ಹಾಡೊಂದನ್ನು ಆಕೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಷೇರ್ ಮಾಡಿದ್ದಳು .

 

ಕಿಚ್ಚ ಸುದೀಪ್ ಅವರ ಬಗೆಗಿನ ಅಭಿಮಾನದಿಂದ ಹೀಗೆ ಮಾಡಿದ್ದೇನೆ ಯಾರು ತಪ್ಪಾಗಿ ತಿಳಿಯಬಾರದು ಎಂದು ಆಕೆ ಮನವಿ ಮಾಡಿದ್ದಾಳೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ತನ್ನ ಅಭಿಮಾನಿಗೆ ಧನ್ಯವಾದ ಹೇಳಲು ಮರೆಯಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top