ಸಮಾಚಾರ

ಕೋಟ್ಯಾಧಿಪತಿಯಾಗಿದ್ದ ತನ್ನ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟು ಮರುಗಿದ ಮಗಳು

ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಕೇವಲ ಸರ್ಕಾರ ಮಾತ್ರವಲ್ಲದೆ ರಾಜ್ಯದ ಮೂಲೆಮೂಲೆಯಿಂದ ಜನರು ಸ್ವಯಂ ಪ್ರೇರಿತರಾಗಿ ಬಂದು ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುತ್ತಿದ್ದು ಹೃದಯ ವೈಶಾಲತೆ ಮೆರೆಯುತ್ತಿದ್ದಾರೆ.

 

 

ಕೋಟ್ಯಧೀಶರಾಗಿದ್ದವರೆಲ್ಲ ಈಗ ಬೀದಿ ಪಾಲಾಗಿದ್ದಾರೆ. ಕಾಕೇರ ಉತ್ತಯ್ಯ ಅವರದ್ದು ಅದೇ ಕಥೆ. ಕೊಡಗಿನಲ್ಲಿ ಅವರ ಮನೆ ಪ್ರವಾಹಕ್ಕೆ ಸಿಲುಕಿರುವುದರಿಂದ ಆಶ್ರಯಕ್ಕಾಗಿ ಬೆಂಗಳೂರಿನ ಕೊಡಗು ಸಮಾಜದಲ್ಲಿ ನೆಲೆಸಿದ್ದಾರೆ. ಇಂದು ನನ್ನ ಸೈಜ್ ದು ಪ್ಯಾಂಟ್ ಇದ್ದರೆ ಕೊಡಿ. ಬಟ್ಟೆ ಏನಿಲ್ಲ ಅಂತಾ ಅಲ್ಲಿರುವ ಬಾಕ್ಸ್ ಗಳನ್ನು ತಡಕಾಡುತ್ತಿದ್ದರು. ಇದನ್ನು ನೋಡಿ ಅವರ ಮಗಳು ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.

ಕೊಡಗಿನ ಕಾಲೂರು ಗ್ರಾಮದವರಾಗಿರುವ ಕಾಕೇರ ಉತ್ತಯ್ಯ ಅವರಿಗೆ 30 ಎಕರೆ ಜಮೀನಿತ್ತು. ಅದರಲ್ಲಿ ಬೆಳೆದಿದ್ದ ಬೆಳೆಯಲ್ಲ ಕೊಚ್ಚಿ ಹೀಗಿದೆ. ಆ ಊರಿನ ಜನರೆಲ್ಲಾ ಉರುಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಾಕೇರ ಉತ್ತಯ್ಯ ಅವರು ಈ ಹಿಂದೆ ಎಷ್ಟೋ ಜನರಿಗೆ ಜಾಮೀನು ದಾನ ಕೂಡ ನೀಡಿದ್ದಾರೆ ಆದರೆ ಈಗ ಅವರಿಗೆ ಗತಿಯಿಲ್ಲದೆ ನೋವು ಅನುಮಭವಿಸುತ್ತಿದ್ದಾರೆ. ತಮ್ಮ ಮಕ್ಕಳು ಯಾರ ಮುಂದೆಯೂ ಕೈ ಚಾಚದೆ ಇರಲಿ ಎಂದು ಸಂಪಾದಿಸಿದ್ದ ಆಸ್ತಿಯೆಲ್ಲ ನೀರಲ್ಲಿ ಕಿಚ್ಚಿ ಹೋಗಿದೆ ಎಂದು ತಿಳಿದು ಬಂದಿದೆ. ಇವರ ಜಮೀನು ಹಾಗು ಮನೆಗಳೆಲ್ಲ ಕುಸಿದು ಹೊಂದಿದ್ದು ಇನ್ನು ಮಳೆ ಶಾಂತವಾಗಿ ಪುನಃ ಇವರು ಕೃಷಿ ಮಾಡಬೇಕೆಂದರೆ ಬಹಳ ಕಷ್ಟದಾಯ ಪರಿಸ್ಥಿತಿ ಅಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top