ಈ ವರ್ಷದ ಬಿಗ್ ಬಾಸ್ ಕಾರ್ಯಕ್ರಮ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಈಗಾಗಲೇ ಶುರು ಆಗಿದೆ. ಎರಡು ತಿಂಗಳ ನಂತರ ಸೆಪ್ಟಂಬರ್ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಆರಂಭವಾಗುವ ಸಾಧ್ಯತೆ ಇದೆ. ಈ ನಡುವೆ ಹಿಂದಿ ಬಿಗ್ ಬಾಸ್ ಕೂಡ ತನ್ನ ಕೆಲಸವನ್ನು ಭರದಿಂದ ನಡೆಸುತ್ತಿದೆ.
ಹಿಂದಿ ಬಿಗ್ ಬಾಸ್ 12 ನೇ ಸೀಸನ್ ನಲ್ಲಿ ಯಾವ ಯಾವ ಸ್ಪರ್ಧಿಗಳು ಇರಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಇದರ ನಡುವೆ ಇನ್ನೊಂದು ಕುತೂಹಕರಿ ವಿಷ್ಯ ಹೊರಬಿದ್ದಿದ್ದು ಈ ಬಾರಿ ಅತ್ತೆ-ಸೊಸೆ, ಬಾಸ್-ನೌಕರ, ಲವರ್ಸ್ ಇರಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಾರಿ ಬಿಗ್ಬಾಸ್ ಮನೆಗೆ ಬ್ರಿಟನ್ನ ಅಡಲ್ಟ್ ಸಿನಿಮಾ ನಟ ಡ್ಯಾನಿ ಹಾಗು ನಟಿ ಮಹಿಕಾ ಈ ಬಿಗ್ ಬಾಸ್ ಮನೆಯಲ್ಲಿ ಆಗಮಿಸಲಿದ್ದಾರೆ ಎಂಬ ವಿಷ್ಯ ಈಗ ದಟ್ಟವಾಗಿದೆ ಹರಡಿದೆ.
ಈ ಇಬ್ಬರು ಬರುವುದು ಖಾತರಿ ಆಗುತ್ತಿದ್ದಂತೆ ಇನ್ನೊಂದು ಸುದ್ದಿ ಹರಿದಾಡುತ್ತಿದ್ದು. ಮೂಲಗಳ ಮಾಹಿತಿ ಪ್ರಕಾರ ಬಾಸ್ ಮನೆಯಲ್ಲಿ ಮಹಿಕಾ ಹಾಗೂ ಡ್ಯಾನಿ ಪ್ರತಿ ವಾರಕ್ಕೆ ತಲಾ 95 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಅತಿ ಹೆಚ್ಚು ಸಂಭಾವನೆ ಪಡೆಯಲಿರುವ ಖ್ಯಾತಿ ಈ ಜೋಡಿಗೆ ಸಲ್ಲಲಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಲಾಭವಾಗಿಲ್ಲ ಎನ್ನಲಾಗಿದೆ.
ಡ್ಯಾನಿ ಡಿ ಮತ್ತು ಮಹಿಕಾ ಸದ್ಯ ಮಾಡರ್ನ್ ಕಲ್ಚರ್ ಎನ್ನುವ ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ. ಮಹಿಕಾ ಶರ್ಮಾ ಈ ಮೊದಲು ಎಫ್ಐಆರ್ ಮತ್ತು ರಾಮಾಯಣ ದಂತಹ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
