fbpx
ಹೆಚ್ಚಿನ

ಶ್ರಾವಣ ಮಾಸದ ಮಂಗಳವಾರದಂದು ಮಂಗಳ ಗೌರಿ ವ್ರತ ಯಾಕೆ ಮಾಡುತ್ತಾರೆ,ಅದರ ವಿಶೇಷತೆ ಹಾಗೂ ಪ್ರಾಮುಖ್ಯತೆ ಬಗ್ಗೆ ತಿಳ್ಕೊಳ್ಳಿ

ಶ್ರಾವಣ ಮಾಸ ಬಂತು ಎಂದರೆ ಸೋಮವಾರ, ಮಂಗಳವಾರಕ್ಕೆ ಮತ್ತೆ ಶುಕ್ರವಾರ ,ಶನಿವಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅದರಲ್ಲೂ ಮಂಗಳವಾರ ದಿನ ಶ್ರಾವಣ ಮಾಸದಲ್ಲಿ ಮಂಗಳ ಗೌರಿ ವ್ರತವನ್ನು ಆಚರಿಸಲಾಗುತ್ತದೆ .ಆಚರಿಸಿದರೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ. ಮಾಂಗಲ್ಯ ಭಾಗ್ಯ ಮತ್ತು ದೀರ್ಘ ಆಯಸ್ಸು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.ಮತ್ತು ಜೀವನದಲ್ಲಿರುವ ಅಮಂಗಳಕರವನ್ನು ದೂರ ಮಾಡುತ್ತದೆ.ಇದರ ವಿಶೇಷತೆ ಏನು ? ಆಚರಣೆ ಹೇಗೆ ? ಬನ್ನಿ ತಿಳಿದುಕೊಳ್ಳೋಣ

 

 

 

ಮಂಗಳ ಗೌರಿ ವ್ರತ ಎಂದರೆ ಹೆಣ್ಣು ಮಕ್ಕಳು ಮಾತ್ರ ಆಚರಣೆ ಮಾಡಬೇಕು. ಇದು ಹೆಣ್ಣು ಮಕ್ಕಳ ವ್ರತ ಎಂದು ಹೇಳುತ್ತಾರೆ . ಎಲ್ಲಾ ಕೆಲಸಗಳು ಮಂಗಳಕರವಾಗಲಿ ಎನ್ನುವುದೇ ಮೂಲ ಉದ್ದೇಶ .ಮಾಡುವ ಕೆಲಸಗಳು ಸಿದ್ಧಿಯಾಗಲಿ, ಅಭಿವೃದ್ಧಿಯನ್ನು ಉಂಟು ಮಾಡಲಿ , ಆರೋಗ್ಯ ,ಆಯಸ್ಸು ಮತ್ತು ಮಾಂಗಲ್ಯ ಭಾಗ್ಯ ಕರುಣಿಸಲಿ ಎಂದು ಪೂಜಿಸಿ ಪ್ರಾರ್ಥಿಸಿಕೊಳ್ಳುತ್ತಾರೆ.
ಶ್ರಾವಣ ಮಾಸದಲ್ಲಿ ಬರುವ ಮಂಗಳವಾರದ ದಿನ ಮದುವೆಯಾಗದೆ ಇರುವ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ಈ ಮಂಗಳಗೌರಿ ವ್ರತವನ್ನು ಯಾರು ನಿಯಮಬದ್ಧವಾಗಿ ಆಚರಣೆ ಮಾಡುತ್ತಾರೋ, ಮತ್ತು ಬಡಬಗ್ಗರಿಗೆ ಅನ್ನದಾನವನ್ನು ಮಾಡಿ, ಮಂಗಳ ಗೌರಿಗೆ ದೀರ್ಘದಂಡ ನಮಸ್ಕಾರವನ್ನು ಹಾಕಿ ನಮ್ಮನ್ನು ರಕ್ಷಣೆಯನ್ನು ಮಾಡು ಎಂದು ಕೇಳಿ ಕೊಳ್ಳುತ್ತಾರೆ. ಆಗ ಮಂಗಳವನ್ನುಂಟು ಮಾಡುತ್ತಾಳೆ ಮಂಗಳಗೌರಿ. ಆದ್ದರಿಂದ ಮಂಗಳ ಗೌರಿ ವ್ರತವನ್ನು ಭಕ್ತಿ-ಶ್ರದ್ಧೆಯಿಂದ ಆಚರಣೆ ಮಾಡಿ.

ಒಂದು ಕುಟುಂಬವಾದರೆ ಗಂಡ ಹೆಂಡತಿ ಇಬ್ಬರೂ ಕುಳಿತುಕೊಂಡು ನಂಬಿಕೆ, ಭಕ್ತಿ, ಶ್ರದ್ಧೆ, ಏಕಾಗ್ರತೆಯಿಂದ ಈ ವ್ರತವನ್ನು ಆಚರಣೆ ಮಾಡಿ ದಂಪತಿ ಸಮೇತ ಪೂಜೆಯಲ್ಲಿ ಕುಳಿತು ಕೊಂಡು ಭಕ್ತಿ ,ಶ್ರದ್ಧೆಯಿಂದ ನಾವು ಮಾಡುವ ಶ್ರಮಕ್ಕೆ ತಕ್ಕ ಪ್ರತಿಫಲ ಕೊಡುವುದಾಗಿ ಪ್ರಾರ್ಥಿಸಿಕೊಳ್ಳಿ.

ಸಾಧ್ಯವಾದಷ್ಟು ಜನ ಸುಮಂಗಲಿಯರಿಗೆ ಅರಿಶಿನ, ಕುಂಕುಮವನ್ನು ಕೊಟ್ಟು ಆಶೀರ್ವಾದವನ್ನು ಕೂಡ ಪಡೆಯಿರಿ. ನಿಮ್ಮ ಶಕ್ತಿಗೆ ಅನುಗುಣವಾಗಿ ದಾನ ಧರ್ಮ ಮಾಡಿ, ಕಾಣಿಕೆಯನ್ನು ನೀಡಿ.
ಒಂದು ವೇಳೆ ನೀವು ನಿರ್ಗತಿಕರಾಗಿದ್ದಾರೆ ನಿಮ್ಮ ಕೈಲಾದಷ್ಟು, ನಿಮ್ಮ ಯೋಗ್ಯತೆ ಮತ್ತು ಅಗತ್ಯತೆಗೆ ತಕ್ಕಂತೆ ಆಚರಿಸಿ ದಾನ ಧರ್ಮವನ್ನು ಮಾಡಿ.ಈ ಶ್ರಾವಣ ಮಾಸದ ಮಂಗಳವಾರದ ದಿನ ಒಬ್ಬರಿಗಾದರು ಅಂದರೆ ಸುಮಂಗಲಿಗೆ ಅರಿಶಿನ, ಕುಂಕುಮ, ಬಳೆಗಳನ್ನು ಕೊಟ್ಟು ನಮಸ್ಕಾರ ಮಾಡಿ. ಆಗ ಎಲ್ಲರಿಗೂ ಕೂಡ ಮಂಗಳ ಗೌರಿಯ ಅನುಗ್ರಹ ಮತ್ತು ಸುಖ ಜೀವನ, ಆಯಸ್ಸು, ಆರೋಗ್ಯ ,ಮಾಂಗಲ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ.
ಹಾಗೆ ಮಂಗಳ ಗೌರಿ ವ್ರತವನ್ನು ಆಚರಿಸಿ ಮಂಗಳ ಗೌರಿ ಕಥೆಯನ್ನು ಒಮ್ಮೆ ಓದಿ,ಅಥವಾ ಶ್ರವಣ ಮಾಡುವುದರಿಂದ ಕೂಡ ಮಂಗಳ ಗೌರಿ ವ್ರತವನ್ನು ಆಚರಿಸಿದಷ್ಟೇ ಪುಣ್ಯ ಪ್ರಾಪ್ತಿಯಾಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top