fbpx
ಸಮಾಚಾರ

ಈಗ ಈ ಸ್ಟಾರ್ ನಟನಿಗೆ ಕಾಡ್ತಿದೆ ಭಯಾನಕ ಕಾಯಿಲೆ

ಬಾಲಿವುಡ್‌ನ ಬಹುಮುಖ ಪ್ರತಿಭೆ ಆಗಿರುವ ಬೊಮನ್‌ ಇರಾನಿ ಅವರು ಸೂಪರ್ ಸಿನಿಮಾ 3 ಈಡಿಯಟ್ಸ್ ಮೂಲಕ ಸಿನಿರಸಿಕರ ಮನಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲಿ ಒಳ್ಳೆಯ ಪೋಷಕ-ನಟರಾಗಿ ತಮ್ಮ ಅಮೋಘ ಕೊಡುಗೆಯನ್ನು ನೀಡುತ್ತಿದ್ದಾರ‍ೆ. 2000 ನೇ ಇಸವಿಯಲ್ಲಿ ತಮ್ಮ 44 ನೇ ವಯಸ್ಸಿನಲ್ಲಿ ಸಿನಿಮಾರಂಗಕ್ಕೆ ’ಜೋಶ್’ ಎಂಬ ಚಿತ್ರದಲ್ಲಿ ಎಂಟ್ರಿ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ ಉತ್ತಮವಾಗಿ ಅಭಿನಯ ಮಾಡುತ್ತ ಬಂದಿದ್ದಾರೆ. ಇರಾನಿ ಅವರಿಗೆ ಗಾಯಕರಾಗುವ ಕನಸು ಬಹಳ ವರ್ಷಗಳಿಂದ ಇತ್ತು ಆದರೆ ನಟರಾಗಿ ಮಿಂಚಿದರು.

ಬೊಮನ್‌ ಇರಾನಿ ಅವರ ಜೀವನದಲ್ಲಿ ಎಲ್ಲವು ಸುಗಮವಾಗಿ ನಡೆದುಕೊಂಡು ಹೋಗುತ್ತಿತ್ತು ಆದರೆ ಅವರಿಗೆ ಅರೋಗ್ಯ ಸಮಸ್ಯೆಯೊಂದು ಕಾಡುತ್ತಿದೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಇರ್ಫಾನ್ ಖಾನ್, ಸೋನಾಲಿ ಬೇಂದ್ರೆ ಅವರಿಗೆ ಅರೋಗ್ಯ ಸಮಸ್ಯೆ ಕಾಡಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಈಗ ಬೊಮನ್‌ ಇರಾನಿ ಅರೋಗ್ಯ ಸಮಸ್ಯೆ ಕಾಡುತ್ತಿದ್ದು ಖುದ್ದು ಅವರೇ ಟ್ವಿಟ್ಟರ್ ಮೂಲಕ ಮಾಹಿತಿ ತಿಳಿಸಿದ್ದಾರೆ. ಹಾಗಾದರೆ ಅವರಿಗೆ ಇರುವ ಸಮಸ್ಯೆ ಏನು ಎಂದು ನೋಡೋಣ ಬನ್ನಿ.

 

 

ಸಾಮಾಜಿಕ ಜಾಲತಾಣದಲ್ಲಿ ಚಿತ್ರವನ್ನು ಪೋಸ್ಟ್ ಮಾಡಿರುವ ಬೊಮನ್ ಇರಾನಿ, ವಿಮಾನದಿಂದ ಕೆಳಗಿಳಿಯುತ್ತಿರುವ ಬೊಮನ್ ಇರಾನಿ ಗಾಲಿ ಕುರ್ಚಿ ಮೇಲೆ ಕುಳಿತಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರದ ಜೊತೆಗೆ ಹುಸೇನ್ ಹಾಗೂ ಶ್ರೀನಿವಾಸ್ ಗೆ ಧನ್ಯವಾದ ತಿಳಿಸಿದ್ದಾರೆ. ಹೈದ್ರಾಬಾದ್ ನಿಂದ ಹಿಂತಿರುಗುತ್ತಿದ್ದಾಗ ಸಹಾಯ ಮಾಡಿದ ನಿಮಗೆ ಧನ್ಯವಾದ ಎಂದಿರುವ ಇರಾನಿ, ತಾವು ಸ್ಲಿಪ್ ಡಿಸ್ಕ್ ಸಮಸ್ಯೆಗೆ ಒಳಲಾಗಿರುವ ಬಗ್ಗೆ ಹೇಳಿದ್ದಾರೆ. ಅಷ್ಟೇ ಅಲ್ಲ ಮೊಣಕಾಲು ನೋವು ಅವರನ್ನು ಕಾಡುತ್ತಿದೆ ಎನ್ನಲಾಗಿದೆ. ನಡೆದಾಡಲು ಕಷ್ಟವಾಗ್ತಿದೆ ಎಂದು ತಿಳಿದು ಬಂದಿದೆ.

ಸ್ಲಿಪ್ ಡಿಸ್ಕ್ ಸಮಸ್ಯೆಗೆ ಒಳಗಾಗಿರುವ ಬೊಮನ್ ಇರಾನಿ ಅವರನ್ನು ನೋಡಿದ ಅಭಿಮಾನಿಗಳು ಭಾವುಕರಾಗಿದ್ದರೆ ಎಂದು ತಿಳಿದು ಬಂದಿದೆ. ಬೊಮನ್ ಇರಾನಿ ಬೇಗನೆ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top