ಸಮಾಚಾರ

ಕೊಡಗು ನಿರಾಶ್ರಿತರಿಗೆ ಪರಿಹಾರ ನೀಡುತ್ತೇವೆಂದು ನಕಲಿ ಖಾತೆ ತೆಗೆದ ಖತರ್ನಾಕ್ ವ್ಯಕ್ತಿ ಪೋಲೀಸರ ಬಲೆಗೆ

ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಕೊಚ್ಚಿ ಹೋಗುತ್ತಿರುವ ಕೊಡಗು ಅಕ್ಷರಶ ಕಂಗಾಲಾಗಿ ಹೋಗಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿದೆಡೆ ಧಾರಾಕಾರ ಮಳೆ ಮುಂದುವರಿದಿದ್ದು ಮಹಾಮಳೆಗೆ ಇಡೀ ಜನರ ಜೀವನ ಅಕ್ಷರಶಃ ಕೊಚ್ಚಿಹೋಗಿದೆ.. ಊರಿಗೂರೇ ಪ್ರವಾಹ, ಮಳೆ , ಭೂಕುಸಿತದಿಂದ ಕೊಚ್ಚಿಹೋಗಿ ರಾತ್ರಿ ಹಗಲಾಗೋದರೊಳಗೆ ಎಲ್ಲ ಕಳೆದುಕೊಂಡು ಜನ ಬೀದಿಗೆ ಬಂದು ನಿಂತಿದ್ದಾರೆ. ಪ್ರಕೃತಿ ಸೃಷ್ಟಿಸಿದ ಈ ದಾರುಣಕ್ಕೆ ಕೇವಲ ಸರ್ಕಾರ ಮಾತ್ರವಲ್ಲದೆ ರಾಜ್ಯದ ಮೂಲೆಮೂಲೆಯಿಂದ ಜನರು ಸ್ವಯಂ ಪ್ರೇರಿತರಾಗಿ ಬಂದು ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸುತ್ತಿದ್ದು ಹೃದಯ ವೈಶಾಲತೆ ಮೆರೆಯುತ್ತಿದ್ದಾರೆ.

ಕರ್ನಾಟಕದ ಮೂಲೆ ಮೂಲೆಯಿಂದ ಜನರು ಸಹಾಯ ಮಾಡುತ್ತಿದ್ದಾರೆ. ಆದರೆ ಈ ಅವಕಾಶವನ್ನು ದುರುಪಯೋಗ ಮಾಡಿಕೊಂಡಿರುವ ವಿಜಯ್ ಶರ್ಮಾ ಎಂಬ ವ್ಯಕ್ತಿ. ಸಾಮಾಜಿಕ ಜಾಲತಾಣದಲ್ಲಿ ತನ್ನ ಬ್ಯಾಂಕ್ ಖಾತೆ ವಿವರ ಹಾಕಿ. ಇದಕ್ಕೆ ಹಣ ಹಾಕಿ ಕೊಡವ ಸಮಾಜ ದವರು ಈ ಬ್ಯಾಂಕ್ ಖಾತೆ ಓಪನ್ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ಇವನ್ನು ನಂಬಿ ಜನರು ಸುಮಾರು 60 ಸಾವಿರಕ್ಕೂ ಅಧಿಕ ಹಣವನ್ನು ಇವನ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

ಸ್ಟೇಟ್ ಬ್ಯಾಂಕ್ ಆ ಇಂಡಿಯಾ, ಪದ್ಮನಾಭನಗರ, ಬೆಂಗಳೂರಿನಲ್ಲಿ ಈತ ಬ್ಯಾಂಕ್ ಖಾತೆ ಹೊಂದಿದ್ದ ಎಂದು ತಿಳಿದು ಬಂದಿದೆ. ಟ್ವಿಟ್ಟರ್, ವಾಟ್ಸಪ್ಪ್, ಫೇಸ್ಬುಕ್ ಸೇರಿದಂತೆ ಎಲ್ಲೆಡೆ ಈತ ತನ್ನ ಖಾತೆ ವಿವರ ಹರಿಬಿಟ್ಟು ಹಣ ಸಂಗ್ರಹಣೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಬಳಿಕ ಇದು ಕೊಡವ ಸಮಾಜ ಸಂಘದವರ ಗಮನಕ್ಕೆ ಬಂದಿದ್ದು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ಕೊನೆಗೂ ಈತನನ್ನು ವಶಕ್ಕೆ ಪಡೆದಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಆರೋಪಿ ವಿಜಯ್ ತನ್ನ ಬ್ಯಾಂಕ್ ಖಾತೆಯಲ್ಲಿ 200 ರೂಪಾಯಿ ಮಾತ್ರ ಹೊಂದಿದ್ದ. ಈಗ 60 ಸಾವಿರಕ್ಕೂ ಅಧಿಕ ಹಣವನ್ನು ಹೊಂದಿದ್ದಾನೆ ಎಂದು ತಿಳಿದು ಬಂದಿದೆ. ನಿಮಗೇನಾದರೂ ಈ ರೀತಿ ವಂಚನೆ ಮಾಡುವವರು ಕಂಡರೆ ಕೂಡಲೇ ಪೊಲೀಸರಿಗೆ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top