ಸಿನಿಮಾ

‘ಒಂಥರಾ ಬಣ್ಣಗಳು’ ಫಿಲಂ ಥಿಯೇಟರ್ ನಿಂದ ಫಿಲಂ ಮಾಡಿರೋರೆ ಹಿಂದೆ ತಗೊಂಡರಂತೆ

ಕಿರಣ್ ಶ್ರೀನಿವಾಸ್, ಸೋನು, ಪ್ರತಾಪ್ ನಾರಾಯಣ್, ಹಿತ ಮುಂತಾದ ಯುವ ಪ್ರತಿಭೆಗಳು ಸೇರಿಕೊಂಡು ‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ನಟನೆ ಮಾಡಿದ್ದರು ಚಿತ್ರ ಕಳೆದ ವಾರ ಬಿಡುಗಡೆಯಾಯಿತು ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯಲು ವಿಫಲವಾಯಿತು , ಸಿನಿಮಾ ಥಿಯೇಟರ್ ಗೆ ಜನರು ಬರದಿರಲು ಮುಖ್ಯ ಕಾರಣ ಪ್ರಚಾರದ ಕೊರತೆ ಎಂದು ಸ್ವತಃ ನಿರ್ದೇಶಕರಾದ ಸುನಿಲ್‍ಭೀಮರಾವ್ ಒಪ್ಪಿಕೊಳ್ಳುತ್ತಾರೆ , ಹಾಗಾಗಿ ಪ್ರೇಕ್ಷಕರನ್ನು ಚಿತ್ರ ತಲುಪಲು ಸಾಧ್ಯವಾಗುತ್ತಿಲ್ಲ .

 

 

ಹಾಗೆಯೇ ಕಳೆದ ವಾರ ಒಟ್ಟು ಎಂಟು ಚಿತ್ರಗಳು ಬಿಡುಗಡೆಯಾಗಿದ್ದು ತಮ್ಮ ಚಿತ್ರ ನಿರಿಕ್ಷಿಸಿದ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಸಧ್ಯಕ್ಕೆ ಥಿಯೇಟರ್ ನಿಂದ ಚಿತ್ರ ಹಿಂಪಡೆದು ಸಾಕಷ್ಟು ಪ್ರಚಾರ ಕೊಟ್ಟು ಮುಂದಿನ ವಾರ ಮತ್ತೆ ಬಿಡುಗಡೆ ಮಾಡುವ ಯೋಜನೆ ಮಾಡಿದ್ದಾರೆ ಚಿತ್ರ ನಿರ್ದೇಶಕರು .

ಸುನಿಲ್‍ಭೀಮರಾವ್ ಸ್ವತಂತ್ರವಾಗಿ ನಿರ್ದೇಶನ ಮಾಡುವ ಮುನ್ನ ಉಪೇಂದ್ರ ಸೇರಿದಂತೆ ಹಲವರಲ್ಲಿ ನಿರ್ದೇಶನದ ತಾಲೀಮು ನಡೆಸಿದ್ದಾರೆ. ಚಿತ್ರಕ್ಕೆ ಕತೆ,ಚಿತ್ರಕತೆ, ಸಾಹಿತ್ಯ ಬರೆದು ಪೂರ್ಣ ಪ್ರಮಾಣದಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ಬಾದಾಮಿ, ಬಾಗಲಕೋಟೆ, ಸಾಗರ, ಪುಣೆ, ಹೊನ್ನಾವರ, ಮಂಗಳೂರು ಕಡೆಗಳಲ್ಲಿ ನಿಗದಿತ ದಿನಕ್ಕಿಂತ ಮುಂಚಿತವಾಗಿ ಚಿತ್ರೀಕರಣ ಮುಗಿಸಲಾಗಿದೆ. ಮೂವರು ಹುಡುಗರು, ಇಬ್ಬರು ಹುಡುಗಿಯರನ್ನು ಬಣ್ಣಗಳಿಗೆ ಹೋಲಿಸಲಾಗಿದೆ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಒಂಥರಾ ಬಣ್ಣಗಳು’ ಚಿತ್ರ ಮುಂದಿನ ದಿನಗಳಲ್ಲಿ ಪ್ರೇಕ್ಷಕರನ್ನು ತಲುಪುವುದೇ ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top