ಸಿನಿಮಾ

ಕೇರಳ ಕಷ್ಟಕ್ಕೆ ಬಿಚ್ಚಮ್ಮ ಪೂನಂ ಪಾಂಡೆ ಕೊಟ್ಟಿದ್ದೇನು ಗೊತ್ತಾ

ಬಾಲಿವುಡ್‌ನಲ್ಲಿ ಬಿಚ್ಚಿ ತೋರಿಸೋ ಪರಾಕ್ರಮದಿಂದಲೇ ಪ್ರವರ್ಧಮಾನಕ್ಕೆ ಬಂದ ನಟೀಮಣಿಯರದ್ದೊಂದು ದಂಡೇ ಇದೆ. ಅಂಥವರ ಸಾಲಿನಲ್ಲಿ ಪೂನಂ ಪಾಂಡೆಗೂ ಅಗ್ರಸ್ಥಾನವಿದೆ. ಆಕ್ಟಿಂಗಿನ ಗಂಧಗಾಳಿ ಇಲ್ಲದಿದ್ದರೂ ಕೇವಲ ಗಿಮ್ಮಿಕ್ಕುಗಳ ಮೂಲಕ ವರ್ತಮಾನಕ್ಕೆ ಬಂದ ಈಕೆ ಸದಾ ಒಂದಿಲ್ಲೊಂದು ರೀತಿಯ ವಿವಾದಗಳ ಮೂಲಕ ಸುದ್ದಿಯಾಗುತ್ತಿದ್ದಾಳೆ. ವಿವಾದಗಳ ಮೂಲಕ ಪ್ರಚಾರದಲ್ಲಿರೋದು ಹೇಗೆ ಎಂಬ ವಿಚಾರದ ಬಗ್ಗೆ ಪೂನಂ ಬಟ್ಟೆ ಖಂಡಿತವಾಗಿಯೂ ಆಸಕ್ತರಿಗೆ ಸದಾ ಹೆಬ್ಬಾಗಿಲು ತೆರೆದು ಕುಂತಿರೋ ಯೂನಿವರ್ಸಿಟಿ!

ಬೇರೇನೂ ಇಶ್ಯೂ ಇಲ್ಲದಿದ್ದರೆ ಬಟ್ಟೆ ಬಿಚ್ಚಿಯಾದರೂ ಆಗಾಗ ಸುದ್ದಿಯಾಗುತ್ತಾ ವಿವಾದವೆಬ್ಬಿಸೋದು ನಟಿ ಪೂನಂ ಪಾಂಡೆಯ ಹಳೇ ವರಸೆ. ಆದರೆ ಅದೇಕೋ ಒಂದಷ್ಟು ತಿಂಗಳುಗಳಿಂದ ಮರೆಯಾದಂತಿದ್ದ ಪೂನಂ ಇದೀಗ ಸುದ್ದಿಯಾಗಲು ಬೇರೆ ದಾರಿ ಹಿಡಿದಿದ್ದಾಳೆ. ಬಿಂದಾಸ್ ಆಗಿ ಬಟ್ಟೆ ಬಿಚ್ಚೋದರ ಮೂಲಕವೇ ದಾರಾಳವಾಗಿ ಅಂಗಾಂಗ ಪ್ರದರ್ಶಿಸುತ್ತಾ ಆಗಾಗ ಸದ್ದು ಮಾಡಿಕೊಂಡು ವಿವಾದಕ್ಕೂ ಕಾರಣವಾಗುವ ಕಲೆಯನ್ನು ಮೈಗೂಡಿಸಿಕೊಂಡಿರುವ ಪೂನಂ ಇದೀಗ ಒಂದೊಳ್ಳೆ ಕೆಲಸ ಮಾಡಿ ಮತ್ತೆ ಸುದ್ದಿಯಲ್ಲಿದ್ದಾಳೆ.

ಲೇಡಿ ಗಬ್ಬರ್ ಸಿಂಗ್ ಸಿನಿಮಾದಲ್ಲಿ ನಟಿಸುತ್ತಿರುವ ಪೂನಂ ಪಾಂಡೆ ಚಿತ್ರದ ಸಂಭಾವನೆಯ ಹಣವನ್ನು ಕೇರಳ ಸಂತ್ರಸ್ಥರಿಗೆ ಕೊಡೋದಕ್ಕೆ ನಿರ್ಧರಿಸಿದ್ದಾರೆ.
ಮುಂಚೆ ಪೂನಂ ಪಾಂಡೆ ತೆಲುಗು ಸಿನಿಮಾದಲ್ಲಿ ಮಿಸ್ ಮಾಲಿನಿಯಾಗಿ ಕಾಣಿಸಿಕೊಂಡಿದ್ದಾರೆ. ಲೇಡಿ ಗಬ್ಬರ್ ಸಿಂಗ್ ಚಿತ್ರವನ್ನ ಇತ್ತೀಚೆಗಷ್ಟೆ ಅವರು ಒಪ್ಪಿಕೊಂಡಿದ್ದು, ಆ ಚಿತ್ರದ ಸಂಭಾವನೆಯ ಹಣವನ್ನು ಕೇರಳ ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಲಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top