ಚಿಂತೆ ಬಿಡಿ ನಿಮ್ಮ ಮನೆಯಲ್ಲೇ ಗುರು ರಾಘವೇಂದ್ರ ಸ್ವಾಮಿಯವರ ಆರಾಧನೆ ಮಾಡಿ ರಾಯರ ಅನುಗ್ರಹವನ್ನು ಪಡೆದುಕೊಳ್ಳುವುದು ಹೇಗೆಂದು ತಿಳಿದುಕೊಳ್ಳಿ.
ಮನೆಯಲ್ಲಿ ರಾಯರ ಆರಾಧನೆ ಮಾಡುವ ಕ್ರಮ
ದೇವದಾರಿನ ಮಣೆಯನ್ನು ಶುದ್ಧವಾಗಿ ತೊಳೆದಿಟ್ಟುಕೊಂಡು ಪ್ರದಕ್ಷಿಣೆ ಬರಲಿಕ್ಕೆ ಅನುಕೂಲವಾಗುವಂತೆ ಮನೆಯ ವಿಶಾಲವಾದ ಕೊಠಡಿಯ ಸ್ಥಳವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ ಅದರ ಮೇಲೆ ದೇವದಾರಿನ ಮಣೆಯನ್ನು ಇಡಬೇಕು.ದೇವರ ಮನೆಯಲ್ಲಿ ಮಣೆ ಇಟ್ಟರೆ ಒಳ್ಳೆಯದೇ ಆದ್ರೆ ದೇವರ ಮನೆಯಲ್ಲಿ ಪ್ರದಕ್ಷಿಣೆ ಹಾಕಲು ಅನುಕೂಲವಾಗುವುದಿಲ್ಲರಿಂದ ವಿಶಾಲವಾದ ಕೊಠಡಿಯಲ್ಲಿ ಪೂಜೆಗೆ ಅಣಿ ಮಾಡಿದರೆ ಒಳಿತು.
ದೇವದಾರಿನ ಮಣೆಯ ಮೇಲೆ ರಾಘವೇಂದ್ರ ಸ್ವಾಮಿಗಳ ಪ್ರಕಾಶಿಕ ಗ್ರಂಥವಾದ ಪರಿಮಳ ಅಥವಾ ರಾಘವೇಂದ್ರಸ್ವಾಮಿಗಳ ಗ್ರಂಥ ಇಡಬೇಕು. ಅದರ ಹಿಂಭಾಗದಲ್ಲಿ ಪವಿತ್ರವಾದ ಮೂಲವೃಂದಾವನದ ಫೋಟೋವನ್ನು ಇಡಿ.ದೇವದಾರಿನ ಮಣೆಯ ಮುಂದೆ ದೀಪವನ್ನು ಹಚ್ಚಿಡಬೇಕು.
ಮಂತ್ರಗಳು ಮತ್ತು ಹೂಗಳು
ಹೂಗಳನ್ನು (ಮನೆಯಲ್ಲೇ ಬೆಳೆದ ಹೂಗಳು ಇದ್ದರೆ ಶ್ರೇಷ್ಠ) ಒಂದು ಪಾತ್ರೆಯಲ್ಲಿಟ್ಟುಕೊಂಡು ರಾಘವೇಂದ್ರಸ್ತೋತ್ರ ಹೇಳಿ, ಸ್ತೋತ್ರ ಹೇಳಲು ಬರದಿದ್ದರೆ ರಾಘವೇಂದ್ರ ಸ್ವಾಮಿ ನಮಃ ಎಂದು ಹೇಳುತ್ತಾ ಹೂಗಳನ್ನು ಪವಿತ್ರ ವೃಂದಾವನದ ಮೇಲೆ ಏರಿಸಬೇಕು.ಬಳಿಕ ಎದ್ದು ನಿಂತು ಮನದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯವರನ್ನು ನೆನೆಯುತ್ತ ಶ್ರೀ ಗುರುಭ್ಯೋ ನಮಃ ಎನ್ನುತ್ತಾ ಪ್ರದಕ್ಷಿಣೆ ಬಂದು ನಮಸ್ಕಾರಗಳನ್ನು ಹಾಕಬೇಕು.ನಂತರ ನಿಮ್ಮ ಬೇಡಿಕೆಗಳನ್ನು ದೇವರ ಮುಂದೆ ಬೇಡಿಕೊಂಡು ಭಕ್ತಿಯಿಂದ ನಮಸ್ಕಾರ ಮಾಡಬೇಕು.ಸಾಧ್ಯವಾದರೆ ಸ್ವಲ್ಪ ಜನಕ್ಕೆ ಅನ್ನಸಂತರ್ಪಣೆಯನ್ನು ಮಾಡಿ. ಪಾಠಪ್ರವಚನಗಳು ನಡೆಯುವ ಒಟ್ಟಿನಲ್ಲಿ ಜ್ಞಾನವನ್ನು ಹೆಚ್ಚಿಸುವ ಕಾರ್ಯ ನಡೆಯುವಂತಹ ಸ್ಥಳಗಳಿಗೆ ದಾನಮಾಡಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
