ಸಮಾಚಾರ

ರಾಜಭವನ ಪ್ರವೇಶಿಸಲು ಜನಸಾಮಾನ್ಯರಿಗೆ ಸುವರ್ಣ ಅವಕಾಶ, ಹೇಗೆ ಅಂತ ತಿಳ್ಕೊಂಡು ನೀವು ಭೇಟಿ ನೀಡಿ

ರಾಜಧಾನಿ ಬೆಂಗಳೂರಿನಲ್ಲಿರುವ ರಾಜಭವನ ಇದೆ ಆಗಸ್ಟ್ 16ರಿಂದ 31ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದೆ ಎಂದು ತಿಳಿದು ಬಂದಿದೆ. ಜನಸಾಮಾನ್ಯರ ರಾಜ್ಯಪಾಲರು ಎಂಬ ಖ್ಯಾತಿಗೆ ಪಾತ್ರವಾಗಿದ್ದ ವಿ.ಎಸ್‌. ರಮಾದೇವಿ ಅಧಿಕಾರಾವಧಿ ಬಳಿಕ ಸಾಮಾನ್ಯ ಜನರಿಗೆ ರಾಜಭವನನ್ನು ಪ್ರವೇಶ ಮಾಡಲು ಅನುಮತಿ ಇರಲಿಲ್ಲ ಎನ್ನಲಾಗಿದೆ.

ಕರ್ನಾಟಕದ ಮುಖ್ಯಸ್ಥರಾಗಿರುವ ರಾಜ್ಯಪಾಲರ ಅಧಿಕೃತ ನಿವಾಸವೇ ಬೆಂಗಳೂರಿನಲ್ಲಿರುವ ‘ರಾಜಭವನ’. ಬ್ರಿಟಿಷ್‌ ರ ಆಳ್ವಿಕೆಯಲ್ಲಿ ನಿರ್ಮಾಣವಾಗಿರುವ ಈ ಭವನ, ರಾಜ ಕಳೆಯಿಂದ ಕಂಗೊಳಿಸುತ್ತಿದೆ. ಈ ಭವನದೊಳಗೆ ಒಮ್ಮೆಯಾದರೂ ಓಡಾಡಲೇಬೇಕು. ಉದ್ಯಾನ, ಕಟ್ಟಡವನ್ನು ನೋಡಲೇಬೇಕು. ಅಲ್ಲಿಯ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಎಲ್ಲರು ಆಸೆ ಪಡುತ್ತಾರೆ. ಆ ಆಸೆಯನ್ನು ಈಡೇರಿಸಲು ಮುಂದಾಗಿರುವ ಪ್ರಸ್ತುತ ರಾಜ್ಯಪಾಲರಾರಾಗಿರುವ ವಜುಭಾಯಿ ವಾಲಾ ಅವರು, ರಾಜಭವನದ ಒಳಗೆ ಸಾರ್ವಜನಿಕರಿಗೆ ಪ್ರವೇಶ ನೀಡಲು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

 

ವೆಬ್ ಸೈಟ್ ನಲ್ಲಿ ಬುಕ್ಕಿಂಗ್‌:

http://rajbhavan.kar.nic.in ವೆಬ್ ಸೈಟ್ ಭೇಟಿ ನೀಡಿ, ಅಲ್ಲಿ ಇರುವ ‘E Visitor Pass’ ಕ್ಲಿಕ್ ಮಾಡಿ ನೋಂದಣಿ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಬೇಕು ಎಂದು ತಿಳಿದು ಬಂದಿದೆ. ನಿಮ್ಮ ಹೆಸರು, ಮನೆಯ ವಿಳಾಸ, ವಯಸ್ಸು, ಮೊಬೈಲ್ ಸಂಖ್ಯೆ ಸೇರಿ ಇನ್ನುಳಿದ ಮಾಹಿತಿ ನಮೂದಿಸಬೇಕು. ಗುರುತಿನ ಚೀಟಿ ವಿವರವನ್ನೂ ದಾಖಲು ಮಾಡಬೇಕು ಎಂದು ತಿಳಿದು ಬಂದಿದೆ.

ಇತ್ತೀಚಿನ ದಿನಗಳಲ್ಲಿ ಆಹ್ವಾನಿತ ಗಣ್ಯರು ಹಾಗು ಅತಿಥಿ ಗಣ್ಯರಿಗೆ ಮಾತ್ರ ಸೀಮಿತ ಆಗಿತ್ತು. ದೆಹಲಿ ರಾಷ್ಟ್ರಪತಿ ಭವನ ಮಾದರಿಯಲ್ಲಿ ಸ್ವಾತಂತ್ರ್ಯೋತ್ಸವ ಅಂಗವಾಗಿ ಪ್ರವೇಶ ಕಲ್ಪಿಸಲಿದೆ ಎಂದು ತಿಳಿದು. ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ರಾಜಭವನ ನೋಡಲು ತೆರಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top