fbpx
ಸಮಾಚಾರ

ಈ ಸಲದ ರಕ್ಷಾ ಬಂಧನದ ವಿಶೇಷವೇನು ಅಂತ ಗೊತ್ತಾ

ರಕ್ಷಾ ಬಂಧನ ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುವ ಒಂದು ಹಬ್ಬವಾಗಿದೆ. ಆ ದಿನ ಸಹೋದರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ. ಮುಂಚೆ ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತವಿದ್ದ ‘ರಕ್ಷಾಬಂಧನ’ ಅಥವಾ ‘ರಾಖಿ’ ಹಬ್ಬವನ್ನು ಇತ್ತೀಚಿನ ವರ್ಷಗಳಲ್ಲಿ ಭಾರತ ದಾದ್ಯಂತ ಎಲ್ಲರೂ ಆಚರಿಸುತ್ತಾರೆ. ಆದರೆ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಈ ದಿನ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ನಮ್ಮ ಮನದಲ್ಲಿ ಮೂಡಿಸುತ್ತದೆ.

ಈ ಬಾರಿಯ ರಕ್ಷಾ ಬಂಧನ ವಿಶೇಷತೆಗಳಿಂದ ಕೂಡಿದೆ ಎಂದು ತಿಳಿದು ಬಂದಿದೆ. ಜ್ಯೋತಿಷ್ಯದ ಪ್ರಕಾರ 4 ವರ್ಷಗಳ ಬಳಿಕ ಈ ಬಾರಿ ರಕ್ಷಾಬಂಧನಕ್ಕೆ ಶುಭ ಮುಹೂರ್ತ ಕೂಡಿ ಬಂದಿದೆ ಎಂದು ತಿಳಿದು ಬಂದಿದೆ. ಹೌದು ಬಾರಿ ರಕ್ಷಾಬಂಧನದ ದಿನದಂದು ರಾಜಯೋಗವಿದೆಯಂತೆ. ಧನಿಷ್ಟಾ ನಕ್ಷತ್ರ ಕೂಡ ಇದೇ ದಿನ ಶುರುವಾಗಲಿದೆ.

 

 

 

ಇದರ ಜೊತೆಗೆ ಈ ಬಾರಿ ಹುಣ್ಣಿಮೆಯ ಗ್ರಹಣ ರಕ್ಷಾ ಬಂಧನಕ್ಕೆ ಇರುವುದಿಲ್ಲ ಎಂದು ತಿಳಿದು ಬಂದಿದೆ. ಹಾಗಾಗಿ ಶುಭ ಮುಹೂರ್ತದಲ್ಲಿ ರಾಖಿ ಕಟ್ಟುವುದರಿಂದ ಸಹೋದರಿಯರಿಗೆ ಅದೃಷ್ಟ ಒಲಿಯಲಿದೆ, ಸುಖ-ಶಾಂತಿ ಪ್ರಾಪ್ತಿಯಾಗಲಿದೆ. ಜೊತೆಗೆ ಸಹೋದರರ ಆಯಸ್ಸು ವೃದ್ಧಿ ಆಗಲಿದೆ ಎಂದು ತಿಳಿದು ಬಂದಿದೆ.

ಇನ್ನು ಬೆಳಗಿನ ಸಮಯದಲ್ಲಿ ರಾಖಿ ಕಟ್ಟಲು ಶುಭ ಸಮಯ ಇರುತ್ತದೆ. ಸಂಜೆ 4.30ರಿಂದ 6 ಗಂಟೆಯ ವರೆಗೆ ರಾಹು ಕಾಲ ಇರಲಿದೆ ಎಂದು ತಿಳಿದು ಬಂದಿದೆ. ರಾಖಿಯನ್ನು ಭಗಂವತನ ಮುಂದೆ ಇಟ್ಟು 108 ಸಾರಿ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top