ಸಮಾಚಾರ

17ನೇ ವಯಸ್ಸಲ್ಲೇ ಕಾಲೇಜ್‌ ಡ್ರಾಪೌಟ್‌, 22ರಲ್ಲಿ ಕೋಟ್ಯಾಧೀಶ

ತನ್ನ 17 ನೇ ವಯಸ್ಸಿಗೆ ಕಾಲೇಜು ಬಿಟ್ಟು 22 ವರ್ಷ ಆಗುವಷ್ಟರಲ್ಲಿ ಮಿಲಿಯನೇರ್‌ ಆಗಿರುವ ನಮ್ಮಗೆಲ್ಲ ಸ್ಫೂರ್ತಿಯಾದವಾಗಿರುವ ಯುವಕನ ಕಥೆಯಿದು. ಒಡಿಶಾ ರಾಜ್ಯದ ಯುವಕ ರಿತೇಶ್ ಅಗರವಾಲ್(24) ಅವರು ಈ ಸಾಧನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ರಿತೇಶ್‌ ಯಶೋಗಾಥೆ ವೈರಲ್ ಆಗಿ ಹರಿದಾಡುತ್ತಿದೆ. ಅಷ್ಟಕ್ಕೂ ಅವರು ಯಾವ ಉದ್ಯಮ ಮಾಡಿದ್ದಾರೆ ನೋಡೋಣ ಬನ್ನಿ.

ರಿತೇಶ್ ಅಗರವಾಲ್ ಅವರು ತಮ್ಮ 17 ನೇ ವಯಸ್ಸಲ್ಲಿ ಒಯೊ ರೂಮ್ಸ್‌ (ಮೊಬೈಲ್ ನಲ್ಲೆ ಹೋಟೆಲ್ ಬುಕ್ ಮಾಡಬಹುದಾದ) ಸ್ಟಾರ್ಟಪ್‌ ಶುರು ಮಾಡಿದರು ರಿತೇಶ್‌ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ. ಇತ್ತೀಚೆಗೆ ಫೋರ್ಬ್ಸ್‌ನ 30 ವರ್ಷದ ಒಳಗಿನ ತಂತ್ರಜ್ಞಾನಿ ಉದ್ಯಮಿಗಳ ಪಟ್ಟಿಯಲ್ಲಿ ಕೂಡ ಅಗರವಾಲ ಅವರನ್ನು ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ಒಡಿಶಾ ರಾಜ್ಯದಲ್ಲಿ ಪದವಿ ಮುಗಿಸಿದ್ದ ರಿತೇಶ್ ಬಳಿಕ ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ ಆ್ಯಂಡ್‌ ಸೈನ್ಸ್‌ಗೆ ಸೇರಿಕೊಳ್ಳುತ್ತಾನೆ.

 

 

ಆದರೆ ಈ ಕೋರ್ಸ್ ಅರ್ಧಕ್ಕೆ ಬಿಟ್ಟು ಬಿಸಿನೆಸ್ ಕಡೆ ವಾಲುತ್ತಾನೆ. ನಮ್ಮ ದೇಶದಲ್ಲಿ ಪ್ರವಾಸಿಗರಿಗೆ, ಗ್ರಾಹಕರಿಗೆ ಉತ್ತಮ ಸೌಕರ್ಯದ ಹೋಟೆಲ್‌ಗಳ ಬಗ್ಗೆ ಮಾಹಿತಿಯ ಕೊರತೆ ಇದೆ ಎಂಬುದನ್ನು ತಾನೇ ಖುದ್ದು ದೇಶದೆಲ್ಲೆಡೆ ಪ್ರವಾಸ ಮಾಡಿ ಅಧ್ಯಯನ ಮಾಡಿದ್ದ ರಿತೇಶ್ ಅವರು ಓಯೋ ರೂಮ್ಸ್‌ ಸ್ಟಾರ್ಟಪ್‌ ಶುರು ಮಾಡಿದ್ದಾರೆ.

ಈಗ ಒಯೊ ಸ್ಟಾರ್ಟಪ್‌ ಗ್ರಾಹಕರಿಗೆ 65,000ಕ್ಕೂ ಹೆಚ್ಚು ಹೋಟೆಲ್‌ ರೂಮ್‌ಗಳನ್ನು ತನ್ನ ನೆಟ್‌ವರ್ಕ್‌ ಮುಖಾಂತರ ಒದಗಿಸಿ ಕೊಡುತ್ತಿದೆ. 170 ಕೂಡ ಅಧಿಕ ನಗರದಲ್ಲಿ ಇವರ ಸ್ಟಾರ್ಟಪ್‌ ಬಜೆಟ್‌ ಹೋಟೆಲ್ ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಯಾವ ರೀತಿಯಲ್ಲಿ ಆ್ಯಪ್‌ ಆಧಾರಿತ ಉಬರ್‌, ಒಳ ಕಂಪನಿ ಜನರಿಗೆ ಟ್ಯಾಕ್ಸಿ ಸೇವೆ ಕೊಡುತ್ತದೆಯೋ, ಅದೇ ರೀತಿ ಒಯೊ ರೂಮ್ಸ್‌ ಸ್ಟಾರ್ಟಪ್‌ ತಂತ್ರಜ್ಞಾನ ಸಹಾಯದಿಂದ ಬಜೆಟ್‌ ಹೋಟೆಲ್‌ ರೂಮ್‌ಗಳ ಸೇವೆಯನ್ನು ಒದಗಿಸುತ್ತದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top