ಸಮಾಚಾರ

ಕೊನೆಗೂ ಕೊಡಗು, ಕೇರಳ ಭೀಕರ ಮಳೆಯ ಸ್ಪೋಟಕ ರಹಸ್ಯ ಭೇದಿಸಿದ ಹವಾಮಾನ ತಜ್ಞರು

ರಾಜ್ಯದ ಕೊಡಗು ಮತ್ತು ಕೇರಳ ರಾಜ್ಯದಲ್ಲಿ ಭಾರೀ ಭೀಕರ ಪ್ರವಾಹ ಮತ್ತು ಭೂಕುಸಿತ ಸೃಷ್ಟಿ ಮಾಡಿ ನೂರಾರು ಮಂದಿಯನ್ನು ಬಲಿ ಪಡೆದುಕೊಂಡಿದ್ದ ಮಾರಣಾಂತಿಕ ಮಳೆಗೆ ಕಾರಣ ಏನು ಎಂಬುದನ್ನು ಹವಾಮಾನ ತಜ್ಞರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಹಾ ಜಲಪ್ರಳಯಕ್ಕೆ `ಸೋಮಾಲಿ ಜೆಟ್’ ಚಂಡಮಾರುತ ಕಾರಣ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಕೊಡಗು ಮತ್ತು ಕೇರಳ ರಾಜ್ಯವನ್ನು ಒಳಗೊಂಡಿರುವ ಪಶ್ಚಿಮಘಟ್ಟ ಶ್ರೇಣಿಯಲ್ಲಿ ಮುಂಗಾರು ತೀವ್ರಗೊಂಡಿದ್ದ ಸಮಯದಲ್ಲಿಯೇ ಕೊಂಕಣದಿಂದ ಕೇರಳದವರೆಗಿನ ಪಶ್ಚಿಮ ಘಟ್ಟದಲ್ಲಿ ಮತ್ತು ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾದ ವಾಯುಭಾರದ ಕುಸಿತ, ಸೊಮಾಲಿ ಜೆಟ್ ನಿಂದಾಗಿ ಭಾರೀ ಮಳೆಯಾಗಿದೆ ಎಂದು ತಜ್ಞರು ವಿವರಿಸಿದ್ದಾರೆ.

 

 

 

 

ಸೋಮಾಲಿ ಜೆಟ್ ಎಂದರೆ ಏನು?
ಆಫ್ರಿಕಾ ಖಂಡದಲ್ಲಿರುವ ಪೂರ್ವ ಭಾಗದ ಹತ್ತಿರ ಇರುವ ಮಡಗಾಸ್ಕರ್‌ ಎಂಬ ದ್ವೀಪದೇಶದ ಬಳಿ ಎದ್ದ ಮಾರುತ ಉತ್ತರ ಅಭಿಮುಖವಾಗಿ ಸಾಗುತ್ತದೆ. ಬಳಿಕ ಮಾರುತಿರುವು ಪಡೆದು ಪಶ್ಚಿಮಘಟ್ಟದತ್ತ ಬರುತ್ತದೆ. ಅದೇ ಸೋಮಾಲಿ ಜೆಟ್‌ ಬೆಳವಣಿಗೆ. ಅಷ್ಟರಲ್ಲಿ ಪಶ್ಚಿಮಘಟ್ಟ ಶ್ರೇಣಿಯಲ್ಲಿ ಮುಂಗಾರು ತೀವ್ರ ಆಗಿತ್ತು. ವಾಯುಭಾರ ಕುಸಿತವೂ ಉಂಟಾಗಿತ್ತು. ಇದರಿಂದ ಮಳೆ ಬಿರುಸು ಪಡೆದಿತ್ತು. ಈ ಸಂದರ್ಭದಲ್ಲಿ ಒಡಿಶಾ ಬಳಿ ವಾಯುಭಾರ ಕುಸಿತ ಉಂಟಾಗಿ ಅರಬ್ಬೀ ಸಮುದ್ರದಿಂದ ಭಾರಿ ಗಾಳಿಯನ್ನು ಸೆಳೆದಿದೆ. ಹೀಗೆ ಸಾಗಿರುವ ಗಾಳಿಗೆ ಪಶ್ಚಿಮಘಟ್ಟದಲ್ಲಿ ತಡೆಯುಂಟಾಗಿ ಆಗಲೇ ಸುರಿಯುತ್ತಿದ್ದ ಮಳೆಗೆ ಮತ್ತಷ್ಟುವೇಗ ನೀಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮತ್ತು ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆ ಸ್ಕೈಮೆಟ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಭೀಕರ ಪ್ರವಾಹ ಸಾಕಷ್ಟು ಹಾನಿ ಮಾಡಿದ್ದೂ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಮಳೆ ಶಾಂತವಾಗಿ ಎಲ್ಲವು ಸಹಜ ಸ್ಥಿತಿಗೆ ಮರಳಲಿ ಎಂದು ಆಶಿಸೋಣ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top