fbpx
ಭವಿಷ್ಯ

ಆಗಸ್ಟ್ 17 ನೇ ತಾರೀಖು ಸೂರ್ಯನು ರಾಶಿ ಪರಿವರ್ತನೆ ಮಾಡಿದ್ದು ಸೆಪ್ಟೆಂಬರ್ 15 ನೇ ತಾರೀಖಿನವರೆಗೆ ಸಿಂಹ ರಾಶಿಯಲ್ಲಿ ಸ್ಥಿತನಿರುತ್ತಾನೆ ಇದರಿಂದ 12 ರಾಶಿಯವರ ಮೇಲೆ ಆಗುವ ಶುಭ ಹಾಗೂ ಅಶುಭ ಫಲವೇನು ಅಂತ ತಿಳ್ಕೊಳ್ಳಿ

ಸೂರ್ಯ ಸ್ಥಾನ ಬದಲಿಸುವ ದಿನವನ್ನು ಸೂರ್ಯ ಸಂಕ್ರಮಣ ಎಂದು ಕರೆಯಲಾಗುತ್ತದೆ. ಸೂರ್ಯ ಒಂದು ರಾಶಿಯಲ್ಲಿ ಒಂದು ತಿಂಗಳುಗಳ ಕಾಲ ಸ್ಥಿತನಿರುತ್ತಾನೆ. ಸೂರ್ಯನ ಈ ರಾಶಿ ಪರಿವರ್ತನೆಯಿಂದ ಬೇರೆ ಬೇರೆ ರಾಶಿಯವರ ಮೇಲೆ ಬೇರೆ ಬೇರೆ ಪ್ರಭಾವ ಬೀರುತ್ತದೆ . ಅಗಸ್ಟ್ 17ನೇ ತಾರೀಖಿನಂದು ಸೂರ್ಯ ತನ್ನ ರಾಶಿಯನ್ನು ಬದಲಿಸಿದ್ದಾನೆ. ಸೂರ್ಯ ತನ್ನ ಸ್ವಂತ ರಾಶಿಯಾದ ಸಿಂಹ ರಾಶಿಗೆ ಪ್ರವೇಶ ಮಾಡಿದ್ದಾನೆ. ಇಷ್ಟು ದಿನ ಕಟಕ ರಾಶಿಯಲ್ಲಿ ಸ್ಥಿತನಿದ್ದನು. ಸೂರ್ಯ ಆದರೆ ಇನ್ನೂ ಒಂದು ತಿಂಗಳ ಕಾಲ ಅಂದರೆ ಸೆಪ್ಟೆಂಬರ್ 15 ನೇ ತಾರೀಖಿನವರೆಗೆ ಸಿಂಹ ರಾಶಿಯಲ್ಲಿ ಸ್ಥಿತನಿರುತ್ತಾನೆ ನಂತರ ಸೆಪ್ಟೆಂಬರ್ 16 ನೇ ತಾರೀಖಿನಂದು ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ.ಈ ರಾಶಿ ಪರಿವರ್ತನೆಯಿಂದ ಯಾವ ರೀತಿ ರಾಶಿಗಳ ಮೇಲೆ ಪರಿಣಾಮ ಬೀರಲಿದೆ ಎನ್ನುವುದನ್ನು ನೋಡೋಣ ಬನ್ನಿ .

ಮೇಷ ರಾಶಿ

 

ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರ ಮಾನಸಿಕ ಸ್ಥಿತಿಯ ಮೇಲೆ ಪ್ರಭಾವ ಬೀರಲಿದೆ, ಸ್ವಂತ ಹಾಗೂ ಮಗುವಿನ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ, ಅಧಿಕಾರಿಗಳು ಮತ್ತು ಸರ್ಕಾರದೊಂದಿಗೆ ಅನಗತ್ಯವಾದ ವಿವಾದಗಳ ಸಾಧ್ಯತೆ ಇದೆ.

ವೃಷಭ ರಾಶಿ

 

ಮಾನಸಿಕ ಹಾಗು ಶಾರೀರಿಕ ಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ, ಕೌಟುಂಬಿಕ ಸಮಸ್ಯೆ ಕಾಡಬಹುದು, ಭೂಮಿ ಆಸ್ತಿ ಸಮಸ್ಯೆ ಶುರುವಾಗಬಹುದು.

ಮಿಥುನ ರಾಶಿ

 

ಉನ್ನತ ಅಧಿಕಾರಿಗಳ ಬೇಟಿ ಮಾಡುವ ಸಾಧ್ಯತೆ ಹೆಚ್ಚಿದೆ, ಮಗ ಅಥವಾ ಸ್ನೇಹಿತರಿಂದ ಗೌರವ ಪ್ರಾಪ್ತಿಯಾಗಲಿದೆ, ಶತ್ರುಗಳ ವಿರುದ್ಧ ಜಯ ಹಾಗೂ ಧನ ಲಾಭವಾಗಲಿದೆ.

ಕಟಕ ರಾಶಿ

 

ಕೆಲಸದಲ್ಲಿ ವಿಳಂಬವಾಗಲಿದೆ, ವಾದ ವಿವಾದದಿಂದ ಮಾನಸಿಕ ಅಸ್ವಸ್ಥತೆ, ಸಾಮಾಜಿಕ ವಿರೋಧಿ, ಜನರಿಂದ ಗೌರವಕ್ಕೆ ಧಕ್ಕೆ ಆಗಲಿದೆ, ವ್ಯವಹಾರದಲ್ಲಿ ನಷ್ಟ ಉಂಟಾಗಲಿದೆ .

ಸಿಂಹ ರಾಶಿ

 

ಈ ರಾಶಿಯವರ ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ , ಮಾನಸಿಕ ಒತ್ತಡ ಹೆಚ್ಚಾಗಲಿದೆ, ರಕ್ತದೊತ್ತಡ, ಹೃದಯ ರೋಗ, ಕಿಬ್ಬೊಟ್ಟೆಯ ಅಸ್ವಸ್ಥತೆ, ಕಣ್ಣಿನ ಅಸ್ವಸ್ಥತೆಗಳು ಕಾಡಲಿವೆ.

ಕನ್ಯಾ ರಾಶಿ 

 

ದೈಹಿಕ ಕಷ್ಟಕ್ಕೆ ಕಾರಣವಾಗುತ್ತದೆ ,ಧನ ಹಾನಿಯಾಗಲಿದೆ , ಮಾನಸಿಕ ಒತ್ತಡ ಮತ್ತು ಅಪಘಾತವಾಗುವ ಸಂಭವ ಹೆಚ್ಚಾಗಿದೆ.

ತುಲಾ ರಾಶಿ

 

ಈ ರಾಶಿಯವರಿಗೆ ಈ ತಿಂಗಳು ಲಾಭಕರ ಹಾಗೂ ಸಫಲತೆ ಪ್ರಾಪ್ತಿಯಾಗಲಿದೆ , ಆರ್ಥಿಕ ಲಾಭ, ವ್ಯವಹಾರದಲ್ಲಿ ವೃದ್ಧಿಯಾಗಲಿದೆ, ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ವೃದ್ಧಿಯಾಗಲಿದೆ.

ವೃಶ್ಚಿಕ ರಾಶಿ 

 

ಸುಖ ಸಮೃದ್ಧಿ ಪ್ರಾಪ್ತಿಯಾಗಲಿದೆ , ಎಲ್ಲಾ ಕಾರ್ಯಗಳು ಕೈಗೂಡಲಿದೆ , ಉನ್ನತ ಅಧಿಕಾರಿಯಿಂದ ಪ್ರಶಂಸೆ ಪ್ರಾಪ್ತಿಯಾಗಲಿದೆ, ನೌಕರಿಯಲ್ಲಿ ಧನಲಾಭವಾಗಲಿದೆ.

ಧನಸ್ಸು ರಾಶಿ

 

ಸೂರ್ಯನ ಸ್ಥಾನಪಲ್ಲಟ ಈ ರಾಶಿಯವರಿಗೆ ನಕಾರಾತ್ಮಕ ಪ್ರಭಾವ ಬೀರಲಿದೆ, ಆರ್ಥಿಕ ನಷ್ಟ ಅಗೌರವ ,ನೌಕರಿಯಲ್ಲಿ ಹಿನ್ನೆಡೆಯಾಗಲಿದೆ.

ಮಕರ ರಾಶಿ

 

ಈ ರಾಶಿಯವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು, ದಂಡ, ದಾವೆ ಇತ್ಯಾದಿ ಸಮಸ್ಯೆ ಕಾಡಲಿದೆ, ವೈರಿಗಳ ಹೆಚ್ಚಾಗಲಿದ್ದಾರೆ.

ಕುಂಭ ರಾಶಿ 

 

ವಿವಾದಗಳು ಹೆಚ್ಚಾಗುವ ಸಾಧ್ಯತೆ ಇದೆ, ದಾಂಪತ್ಯ ಸುಖದಲ್ಲಿ ಏರುಪೇರಾಗಲಿದೆ, ಕೆಲಸಗಳಲ್ಲಿ ಯಶಸ್ಸು ಸಿಗುವುದು ಕಷ್ಟವಾಗುತ್ತದೆ.

ಮೀನ ರಾಶಿ

 

ನಿಂತ ಕೆಲಸ ಪೂರ್ಣವಾಗಲಿದೆ, ಗೌರವ ಸನ್ಮಾನದಲ್ಲಿ ವೃದ್ಧಿಯಾಗಲಿದೆ, ಎಲ್ಲಾ ರೀತಿಯ ಸುಖ ಪ್ರಾಪ್ತಿಯಾಗಲಿದೆ ,ಮನಸ್ಸು ಹಾಗೂ ಶರೀರ ಆರೋಗ್ಯವಾಗಿ ಸುಸ್ಥಿತಿಯಿಂದ ಕೂಡಿರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top